Asianet Suvarna News Asianet Suvarna News

ಒಂದು ವರ್ಗದಿಂದ ನಟ ದರ್ಶನ್ ಟಾರ್ಗೆಟ್: ಸಂಸದೆ ಸುಮಲತಾ ಹೇಳಿದ್ದೇನು?

ಒಂದು ವರ್ಗ ದರ್ಶನ್‌ನನ್ನು ಟಾರ್ಗೆಟ್‌ ಮಾಡುತ್ತಿದೆ. ಅವನು ಏನೇ ಮಾಡಿದರೂ ವಿವಾದ ಹುಟ್ಟುಹಾಕುವುದೇ ಆ ವರ್ಗದ ಕೆಲಸವಾಗಿದೆ ಎಂದು ಸಂಸದೆ ಸುಮಲತಾ ಪ್ರತಿಕ್ರಿಯಿಸಿದರು.

what did mp sumalatha ambareesh say about actor darshan controversies gvd
Author
First Published Nov 23, 2023, 2:00 AM IST

ಮಂಡ್ಯ (ನ.23): ಒಂದು ವರ್ಗ ದರ್ಶನ್‌ನನ್ನು ಟಾರ್ಗೆಟ್‌ ಮಾಡುತ್ತಿದೆ. ಅವನು ಏನೇ ಮಾಡಿದರೂ ವಿವಾದ ಹುಟ್ಟು ಹಾಕುವುದೇ ಆ ವರ್ಗದ ಕೆಲಸವಾಗಿದೆ ಎಂದು ಸಂಸದೆ ಸುಮಲತಾ ಪ್ರತಿಕ್ರಿಯಿಸಿದರು. ಬೆಂಗಳೂರಿನ ಜಯನಗರದಲ್ಲಿ ನಟ ದರ್ಶನ್ ಲಾಂಗ್ ಪ್ರದರ್ಶನದ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ವಿವಾದಗಳ ಬಗ್ಗೆ ದರ್ಶನ್ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಇವತ್ತಿನವರೆಗೆ ಅವನ ಸಿನಿಮಾ, ಅವನ ಸಕ್ಸಸ್‌ಗೆ ಯಾವುದೇ ತೊಂದರೆ ಆಗಿಲ್ಲ. ಇವತ್ತಿಗೂ ಅವನ ಅಭಿಮಾನಿಗಳಿಗೆ ಡಿ-ಬಾಸ್ ಅನ್ನೋ ಹುಚ್ವು ಅಭಿಮಾನ ಇದೆ. ಇಂತಹ ಅಭಿಮಾನಿಗಳು ಇರೋವರೆಗೂ ಯಾವುದೇ ವಿವಾದದಿಂದ ಏನೂ ಪ್ರಯೋಜನ ಆಗೋಲ್ಲ ಎಂದರು.

ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಅಭಿ ಸಾಕಷ್ಟು ಶ್ರಮ ಹಾಕಿದ್ದಾನೆ. ಅಂಬರೀಶ್ ಅವರಿಗೆ ಅಭಿಮಾನಿಗಳಿಂದ ಸಿಕ್ಕ ಪ್ರೋತ್ಸಾಹ ಅವರ ಮಗನಿಗೂ ಕೊಡ್ತಾರೆ ಅನ್ನೋ ವಿಶ್ವಾಸ ಇದೆ. ರಾಜಕಾರಣದಲ್ಲಿ ಅಭಿ ಅಥವಾ ನಾನು ಇರುತ್ತೇನೆ. ಈ ಬಗ್ಗೆ ಹಿಂದೆಯೇ ಹೇಳಿಕೆ ನೀಡಿದ್ದೇನೆ. ಅಭಿಗೆ ಇನ್ನೂ ಸಮಯ ಮತ್ತು ವಯಸ್ಸು ಇದೆ ಅವನಿನ್ನೂ ಸಾಕಷ್ಟು ಸಾಧನೆ ಮಾಡಬೇಕು. ಈಗಷ್ಟೇ ಮದುವೆ ಆಗಿದ್ದಾನೆ. ಇನ್ನು ಸಾಕಷ್ಟು ಸಿನಿಮಾ ಮಾಡಬೇಕಿದೆ. ಅವನ ಹಣೆಬರಹ ಏನಿದೆ ಅಂತ ನನಗೆ ಗೊತ್ತಿಲ್ಲ. ಸದ್ಯಕ್ಕೆ ಅವನು ಸಿನಿಮಾ ಮಾಡಿ ಒಳ್ಳೆಯ ಹೆಸರು ಗಳಿಸಬೇಕು ಎಂಬ ಆಸೆ ಇದೆ ಎಂದರು.

ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಬ್ಯಾಡ್ ಮ್ಯಾನರ್ಸ್ ಮೆಚ್ಚಿ 5 ಸ್ಟಾರ್ ಕೊಟ್ಟ ದರ್ಶನ್, ಸುಮಲತಾ: ನ.24ರಂದು ಬಿಡುಗಡೆಯಾಗುತ್ತಿರುವ ಅಭಿಷೇಕ್ ಅಂಬರೀಶ್ ನಟನೆಯ, ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಚಿತ್ರವನ್ನು ಎಲ್ಲರಿಗಿಂತ ಮೊದಲು ದರ್ಶನ್ ಮತ್ತು ಸುಮಲತಾ ವೀಕ್ಷಿಸಿದ್ದಾರೆ. ಚಿತ್ರವನ್ನು ಮೆಚ್ಚಿಕೊಂಡಿರುವ ಅವರಿಬ್ಬರು ಅಭಿಷೇಕ್ ಅಂಬರೀಶ್ ಅಂಗಿಯ ಮೇಲೆ 5 ಸ್ಟಾರ್ ಬರೆದು ಪ್ರಶಂಶಿಸಿದ್ದಾರೆ. ಸದಾ ಅಭಿಷೇಕ್ ಬೆನ್ನಿಗೆ ನಿಲ್ಲುವ ದರ್ಶನ್ ಅವರು ಸಿನಿಮಾ ನೋಡಿ ಬಂದು ಅಭಿಷೇಕ್ ಅವರ ಅಂಗಿಯ ಬೆನ್ನಿನ ಭಾಗದಲ್ಲಿ ನಿಮ್ಮ ಪ್ರೀತಿಯ ದಾಸ ಎಂದು ಬರೆದು 5 ಸ್ಟಾರ್ ಕೊಟ್ಟಿದ್ದಾರೆ. 

ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್‌

ಸಿನಿಮಾ ಕುರಿತು, ‘ತಮ್ಮ ಅಭಿನಯದ ಎರಡನೇ ಸಿನಿಮಾದಲ್ಲಿಯೇ ಅಭಿ ಈ ಹಂತದ ಮಾಗಿದ ಅಭಿನಯ ನೋಡಿ ನನಗೆ ಹೆಮ್ಮೆಯಾಗಿದೆ. ಈ ಸಿನಿಮಾ ವಿಭಿನ್ನತೆಯ ದೃಷ್ಟಿಯಿಂದ ಬೇರೆ ಲೆವೆಲ್‌ಗೆ ಇದೆ. ಈ ಸಿನಿಮಾದಲ್ಲಿ ಪ್ರೇಕ್ಷಕರು ರಿಯಲ್ ರೆಬೆಲ್‌ ಸ್ಟಾರ್‌ ನೋಡುತ್ತಾರೆ. ಈ ಚಿತ್ರಕ್ಕೆ ದೊಡ್ಡ ಯಶಸ್ಸು ಸಿಗಲಿದೆ’ ಎಂದು ಹೇಳಿದ್ದಾರೆ. ಸುಮಲತಾ ಅವರು ಕೂಡ ಫ್ಯಾಬುಲಸ್‌ ಎಂದು ಬರೆದು 5 ಸ್ಟಾರ್‌ ಕೊಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ನಟನೆ ಪತಿ ಅಂಬರೀಶ್ ಅವರನ್ನು ಕಾಣಿಸಿದ್ದಾಗೆ ತಿಳಿಸಿದ್ದಾರೆ. ಇವರಿಬ್ಬರ ಅಪೂರ್ವ ಪ್ರಶಂಸೆಯಿಂದ ಚಿತ್ರತಂಡ ಸಂಭ್ರಮದಲ್ಲಿದೆ. ಕೆಎಂ ಸುಧೀರ್ ನಿರ್ಮಿಸಿರುವ ಈ ಸಿನಿಮಾ ಇದೇ ಶುಕ್ರವಾರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

Follow Us:
Download App:
  • android
  • ios