Asianet Suvarna News Asianet Suvarna News

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್‌ : ಎಚ್ಚರ!

  • ರಾಜ್ಯದಲ್ಲಿ ಹೆಚ್ಚಿನ ಜಿಲ್ಲೆಗಳಲ್ಲಿ ವರುಣನ  ಅಬ್ಬರ ಮುಂದುವರಿದಿದೆ
  • ಎಲ್ಲ ಜಿಲ್ಲೆಗಳಲ್ಲೂ  ಇಂದು ಸಂಜೆ ವೇಳೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ
weather Department alerts Heavy rain  in Karnataka snr
Author
Bengaluru, First Published Oct 12, 2021, 12:48 PM IST

 ಬೆಂಗಳೂರು (ಅ.12):  ರಾಜ್ಯದಲ್ಲಿ ವರುಣನ ಅಬ್ಬರ (Heavy Rain) ಮುಂದುವರಿದಿದ್ದು, ಎಲ್ಲ ಜಿಲ್ಲೆಗಳಲ್ಲೂ  ಇಂದು ಸಂಜೆ  ವೇಳೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹವಾಮಾನ ಇಲಾಖೆಯು (Weather Department) ಎಲ್ಲ ಜಿಲ್ಲೆಗಳಿಗೂ ‘ಯೆಲ್ಲೋ ಅಲರ್ಟ್‌’ (Yellow alert) ಘೋಷಿಸಿದೆ.

ಬಂಗಾಳ ಕೊಲ್ಲಿಯಲ್ಲಿ (Bay of Bengal)  ಸೃಷ್ಟಿಯಾಗಿರುವ ವಾಯುಭಾರ ಕುಸಿತ ಮತ್ತು ಮುಂಗಾರು (Monsoon) ಮಾರುತಗಳು ಇನ್ನೂ ಪ್ರಬಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಭರ್ಜರಿ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್‌ 30ಕ್ಕೆ ಮುಂಗಾರು ಮಾರುತಗಳು ರಾಜ್ಯದಿಂದ ನಿರ್ಗಮಿಸುತ್ತವೆ. ಆದರೆ ಈ ವರ್ಷ ಮುಂಗಾರು ಮಾರುತ  ರಾಜ್ಯದಲ್ಲಿ ಇನ್ನೂ ಪ್ರಬಲವಾಗಿದೆ. ಇದರ ಜೊತೆಗೆ ಅರಬ್ಬಿ ಸಮುದ್ರ (Arabian Sea
) ಮತ್ತು ಬಂಗಾಳ ಕೊಲ್ಲಿಯಲ್ಲಿ ಮಳೆ ಸುರಿಸುವ ಹವಾಮಾನ ವಿದ್ಯಮಾನಗಳು ಸಕ್ರಿಯವಾಗಿರುವುದರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಗುರುವಾರದವರೆಗೂ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ರಾಯಚೂರಲ್ಲಿ ಭಾರೀ ಮಳೆ: ಬಾಯಲ್ಲಿ ಮರಿ ಹಿಡಿದು ನಾಯಿ ಪರದಾಟ

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ (Coastal) ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಉತ್ತರ ಕರ್ನಾಟಕದಲ್ಲಿ  (Noarth Karnataka ) ವಾಡಿಕೆಯ ಮಳೆ ಆಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದೆ. ದಕ್ಷಿಣ ಕನ್ನಡದ (Dakshina kannada) ಕೊಕ್ಕಡ  (Kokkada) 8.85 ಸೆಂ.ಮೀ., ದಕ್ಷಿಣ ಕನ್ನಡದ ಕೊಣಾಜೆ (konaje) 8.3 ಸೆಂ.ಮೀ., ಚಾಮರಾಜನಗರದ (chamarajanagar) ಉಡಿಗಲ 7.65 ಸೆಂ.ಮೀ., ಮಂಡ್ಯದ ಪಾಲ ಅಗ್ರಹಾರ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉತ್ತರ ಕನ್ನಡದ ಹಳಿಯಾಳ, ಚಿತ್ರದುರ್ಗದ (Chitradurga) ಹೊಸದುರ್ಗ, ಕೊಡಗಿನ (Kodagu) ಮಡಿಕೇರಿ ತಲಾ 5 ಸೆಂ.ಮೀ., ಮಂಗಳೂರು, ಧಾರವಾಡದ ಅಣ್ಣಿಗೆರೆ, ಮಂಡ್ಯದ ಹೊಣಕೆರೆಯಲ್ಲಿ 4 ಸೆಂ.ಮೀ. ಮಳೆಯಾಗಿದೆ.

ಏರ್‌ಪೋರ್ಟ್ ಟರ್ಮಿನಲ್‌ಗೆ ನುಗ್ಗಿದ ನೀರು, ಟ್ರಾಕ್ಟರ್ ಏರಿದ ನಿಲ್ದಾಣ ತಲುಪಿದ ಪ್ರಯಾಣಿಕರು!

ಮಂಡ್ಯ (Mandya), ಚಾಮರಾಜನಗರ, ದಕ್ಷಿಣ ಕನ್ನಡ, ಮೈಸೂರು, ರಾಮನಗರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಉತ್ತರ ಕನ್ನಡ, ತುಮಕೂರು, ಕಲಬುರಗಿ, ಬೆಳಗಾವಿ, ಧಾರವಾಡ, ಬೀದರ್‌, ಚಿಕ್ಕಮಗಳೂರು, ವಿಜಯ ನಗರ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಬಿದ್ದಿದೆ. ಉಡುಪಿ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿದೆ.

Follow Us:
Download App:
  • android
  • ios