ಕನ್ನಡ ಸಂಸ್ಕೃತಿ ಇಲಾಖೆಗೆ ಪವರ್, ಪವರ್ ಇಲಾಖೆಗೆ ಸಂಸ್ಕೃತಿ ಬರಬೇಕು: ಸುನೀಲ್ ಕುಮಾರ್
- ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ವಿಶೇಷ ಪ್ರೀತಿ ತೋರಿದ್ದೇನೆ
- ನನ್ನ ಕ್ಷೇತ್ರಕ್ಕೆ ಹೋಗುವಾಗ ಹಾರ ತುರಾಯಿ ಬದಲು ಕನ್ನಡ ಪುಸ್ತಕ ಕೊಡುವಂತೆ ಕೋರಿದ್ದೆ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಯಾವ್ಯಾವ ರೀತಿಯ ಸುಧಾರಣೆ ತರಬೇಕು ಅದರ ಬಗ್ಗೆ ಚರ್ಚೆ ಮಾಡುತ್ತೇನೆ
ಬೆಂಗಳೂರು (ಆ.11): ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ವಿಶೇಷ ಪ್ರೀತಿ ತೋರಿದ್ದೇನೆ. ನನ್ನ ಕ್ಷೇತ್ರಕ್ಕೆ ಹೋಗುವಾಗ ಹಾರ ತುರಾಯಿ ಬದಲು ಕನ್ನಡ ಪುಸ್ತಕ ಕೊಡುವಂತೆ ಕೋರಿದ್ದೆ. ಇದಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆಯೂ ಬಂದಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುನೀಲ್ ಕುಮಾರ್ ಮುಖ್ಯಮಂತ್ರಿಗಳು ಜವಬ್ದಾರಿಯನ್ನು ನೀಡಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಪವರ್ ಬರಬೇಕು. ಪವರ್ ಇಲಾಖೆಯಲ್ಲಿ ಸಂಸ್ಕೃತಿ ಬರಬೇಕು. ಇಲಾಖೆಯಲ್ಲಿ ಯಾವ್ಯಾವ ರೀತಿಯ ಸುಧಾರಣೆ ತರಬೇಕು ಅದರ ಬಗ್ಗೆ ಚರ್ಚೆ ಮಾಡುತ್ತೇನೆ. ದೂರ ದೃಷ್ಟಿ ಚಿಂತನೆಯಿಂದ ಸುಧಾರಣೆ ಮಾಡುತ್ತೇನೆ ಎಂದು ಹೇಳಿದರು.
ನನ್ನ ನೋಡಲು ಬರುವವರು ಒಂದು ಕನ್ನಡ ಪುಸ್ತಕ ತನ್ನಿ : ಸಚಿವ ಸುನಿಲ್ ಕುಮಾರ್
ನಾನು ಜನರಿಗೂ ಮನವಿ ಮಾಡುತ್ತೇನೆ. ಪ್ರತಿ ನಿತ್ಯ ಒಂದು ಕನ್ನಡ ಪೇಪರ್ ಓದೋಣ, ಕನ್ನಡ ಪುಸ್ತಕ ಓದೋಣ, ಕನ್ನಡ ಚಿತ್ರವನ್ನು ನೋಡೋಣ. ನಮ್ಮ ಸರ್ಕಾರ ಸುಧಾರಣೆಯನ್ನು ತರಲಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಸಚಿವರು ರವೀಂದ್ರ ಕಲಾಕ್ಷೇತ್ರದಲ್ಲಿ ಇರೋ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಖರೀದಿ ಮಾಡಿದರು. 3 ಪುಸ್ತಕಗಳನ್ನು ಖರೀದಿ ಮಾಡಿದರು.
>.ಕನಕಾವಲೋಕನ ಸಂಪುಟ 1
>.ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿ ಸಂಪುಟ 26
>.ಡಿವಿಜಿ ಕೃತಿ ಶ್ರೇಣಿ ಸಂಪುಟ 11 ಪುಸ್ತಕ ಖರೀದಿ.
ಆನಂದ್ ಸಿಂಗ್ ರಾಜೀನಾಮೆ ವಿಚಾರ : ಆನಂದ್ ಸಿಂಗ್ ರಾಜೀನಾಮೇ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದಲು ನಿರಾಕರಿಸಿದರು.