ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು: ಸಿದ್ದರಾಮಯ್ಯ
ಕಾಂಗ್ರೆಸ್ ಪಂಚ ರಾಜ್ಯ ಚುನಾವಣೆ ಬಳಿಕ ಸಾಫ್ಟ್ ಹಿಂದುತ್ವದ ಕಡೆಗೆ ವಾಲುತ್ತಿದೆ ಎಂಬ ಚರ್ಚೆಗೆ ಸಂಬಂಧಿಸಿ ಮಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು ಎಂದು ಹೇಳಿದ್ದಾರೆ.
ಮಂಗಳೂರು (ಮಾ.19): ಕಾಂಗ್ರೆಸ್ (Congress) ಪಂಚ ರಾಜ್ಯ ಚುನಾವಣೆ ಬಳಿಕ ಸಾಫ್ಟ್ ಹಿಂದುತ್ವದ (Hinduism) ಕಡೆಗೆ ವಾಲುತ್ತಿದೆ ಎಂಬ ಚರ್ಚೆಗೆ ಸಂಬಂಧಿಸಿ ಮಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದು,, ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು ಎಂದು ಹೇಳಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನದ್ದು ಸಾಫ್ಟ್ ಮತ್ತು ಹಾರ್ಡ್ ಹಿಂದುತ್ವ ಅಂತ ಇಲ್ಲ. ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಕೊಡ್ತೇನೆ ಅಂತ ಹೇಳಿದರು.
'ಯಾವ ಧರ್ಮದವರೂ ಕೋಮುವಾದ ಮಾಡಬಾರದು': ಹಿಜಾಬ್ (Hijab) ವಿರೋಧಿಸಿ ಮುಸ್ಲಿಂ (Muslim) ಸಂಘಟನೆಗಳ ಬಂದ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಸಮಾಧಾನ ಇರೋರು ಬಂದ್ ಮಾಡಿದ್ದಾರೆ, ಕೋರ್ಟ್ ನಿರ್ಧಾರ ವಿರೋಧಿಸಬಾರದು. ಹೈಕೋರ್ಟ್, ಸುಪ್ರೀಂ ಕೋರ್ಟ್ ಯಾವುದರ ನಿರ್ಧಾರವನ್ನೂ ವಿರೋಧ ಮಾಡಬಾರದು. ಯಾವ ಧರ್ಮದವರೂ ಕೋಮುವಾದ ಮಾಡಬಾರದು. ಹಿಂದೂ, ಮುಸ್ಲಿಂ ಯಾರೇ ಆದರೂ ಕೋಮುವಾದ ಮಾಡಬಾರದು. ಎಲ್ಲಾ ಧರ್ಮಗಳನ್ನ ಸಮಾನವಾಗಿ ಕಾಣುವ ಕೆಲಸ ಆಗಲಿ ಎಂದರು.
ಬಜರಂಗದಳ ಮುಖಂಡನಿಂದ ಕೊಲೆ: ಮೃತನ ಮನೆಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ
ಭಗವದ್ಗೀತೆ ಮನೆಯಲ್ಲಿ ಹೇಳಿಕೊಡ್ತಾರೆ: ಶಾಲೆಗಳಲ್ಲಿ ಭಗವದ್ಗೀತೆ (Bhagavad Gita) ಕಲಿಸೋ ಚಿಂತನೆ ವಿಚಾರ ಸಂಬಂಧ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನೈತಿಕ ಶಿಕ್ಷಣ ಕಲಿಸೋಕೆ ನಮ್ಮ ಯಾವುದೇ ತಕರಾರು ಇಲ್ಲ. ನಾವು ಸಂವಿಧಾನದ ಜಾತ್ಯಾತೀತ ತತ್ವಗಳನ್ನು ನಂಬುತ್ತೇವೆ. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನ ಹೇಳಿಕೊಟ್ಟರೂ ನಮ್ಮ ವಿರೋಧ ಇಲ್ಲ. ಆದ್ರೆ ಮಕ್ಕಳಿಗೆ ಅಗತ್ಯವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು.
ಭಗವದ್ಗೀತೆ ಬಗ್ಗೆ ಸರ್ಕಾರ ತೀರ್ಮಾನ ಮಾಡಿಲ್ಲ, ಗುಜರಾತ್ ನಲ್ಲಿ ಮಾಡಿದ್ದಾರೆ ಅಷ್ಟೇ. ಭಗವದ್ಗೀತೆ ಮನೆಯಲ್ಲಿ ಹೇಳಿಕೊಡ್ತಾರೆ, ದೇವರ ಬಗ್ಗೆ ಹೇಳ್ತಾರೆ. ರಾಮಾಯಣ, ಮಹಾಭಾರತ ಎಲ್ಲಾನೂ ಮನೆಯಲ್ಲಿ ಹೇಳಿ ಕೊಡ್ತಾರೆ. ನೈತಿಕ ಶಿಕ್ಷಣ ಬೇಕು, ಆದ್ರೆ ಸಂವಿಧಾನಕ್ಕೆ ವಿರುದ್ದವಾಗಿ ಯಾವುದೂ ನಡೀಬಾರದು. ನಾನು ಭಗವದ್ಗೀತೆ, ಬೈಬಲ್, ಕುರಾನ್ ಯಾವುದಾದರೂ ವಿರೋಧಿಯೂ ಅಲ್ಲ. ನಮ್ಮದು ಬಹುಸಂಸ್ಕೃತಿ ಇರೋ ರಾಷ್ಟ್ರ, ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇರೋನು ನಾನು ಎಂದರು.
'ದಿ ಕಾಶ್ಮೀರ್ ಫೈಲ್' (The Kashmir Files) ಚಿತ್ರ ಕನ್ನಡಕ್ಕೆ ಡಬ್ ಮಾಡುವ ವಿಚಾರದಲ್ಲಿ ಮಾತನಾಡಿದ ಅವರು, ಸಿನಿಮಾ ಮಾಡಿ ತೋರಿಸೋದನ್ನ ಬೇಡ ಅನ್ನಲ್ಲ, ಆದರೆ ಸತ್ಯ ತೋರಿಸಲಿ. ಕಾಶ್ಮೀರದ ಉಗ್ರರ ಕೃತ್ಯ, ಪಂಡಿತರ ಜೊತೆಗೆ ಬೇರೆ ಯಾರಿಗೆ ಸಮಸ್ಯೆ ಆಗಿತ್ತು ಹೇಳಬೇಕು. ಆಗ ಯಾರ ಸರ್ಕಾರ ಇತ್ತು, ಏನ್ ಮಾಡಿತ್ತು ಸರ್ಕಾರ ಅಂತ ತೋರಿಸಬೇಕು. ಗುಜರಾತ್ ಘಟನೆ, ಲಖಿನ್ ಪುರ್ ಘಟನೆ ಎಲ್ಲಾನೂ ತೋರಿಸಬೇಕು. ನಾನು ಸಿನಿಮಾಗೆ ಹೋಗಲ್ಲ, ಥಿಯೇಟರ್ ಹೋಗಿ ಸಿನಿಮಾ ನೋಡಲ್ಲ. ಬಹಳ ಸಿನಿಮಾ ನೋಡಲ್ಲ, ಹಾಗೇನೇ ಕಾಶ್ಮೀರ್ ಫೈಲ್ ಕೂಡ ನೋಡಲ್ಲ ಎಂದರು.
Karnataka Bandh: ಹಿಜಾಬ್‌ಗಾಗಿ ಕರ್ನಾಟಕ ಬಂದ್, ಸಿದ್ದರಾಮಯ್ಯ ಸಮರ್ಥನೆ
ವಾಜಪೇಯಿಗಿಂತ ಮೋದಿ ದೊಡ್ಡ ಲೀಡ್ರಾ: ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನೆಡೆ ಆಗಿರೋದು ನಿಜ. ಪ್ರಜಾಪ್ರಭುತ್ವದಲ್ಲಿ ಹಿನ್ನೆಡೆ, ಮುನ್ನೆಡೆ ಸಹಜ.1980 ರಲ್ಲಿ ಬಿಜೆಪಿ ಕೇವಲ ಎರಡು ಸ್ಥಾನ ಗೆದಿತ್ತು.ಈಗ 300 ಕ್ಕೂ ಹೆಚ್ಚು ಸ್ಥಾನ ಗೆದಿದ್ದಾರೆ. ಜನರ ತೀರ್ಪನ್ನು ನಾವು ಒಪ್ಪಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೋಲಾರದಲ್ಲಿ ಇಂದು(ಭಾನುವಾರ) ಮಾತನಾಡಿದ ಸಿದ್ದರಾಮಯ್ಯ, ಎಪಿಸಿಸಿ ಯಲ್ಲಿ ನಾಯಕತ್ವ ಬದಲಾವಣೆ ಇಲ್ಲ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮುಂದುವರೆಯುತ್ತಾರೆ. ಪ್ರಧಾನ ಮಂತ್ರಿ ಅಧ್ಯಕ್ಷರಾಗಿದ್ದಾಗ ನಾಯಕತ್ವ ಇರ್ಲಿಲ್ವಾ ? ವಾಜಪೇಯಿಗಿಂತ ಮೋದಿ ದೊಡ್ಡ ಲೀಡ್ರ ? ಮೋದಿ ಬಂದ ಮೇಲೆ ಇದ್ದಕ್ಕಿಂದಂತೆ ಬೆಳೆದು ನಿಂತಿದಿಯಾ ? ಎಂದು ಪ್ರಶ್ನಿಸಿದರು. ಸೋಲಿನ ಬಗ್ಗೆ ಚರ್ಚಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಂಜಾಬ್ ನಲ್ಲಿ ನಮ್ಮ ತಪ್ಪಿನಿಂದ ಸೋತಿದ್ದೇವೆ ಎಂದು ಸಿದ್ದರಾಮಯ್ಯ ಸೋಲು ಒಪ್ಪಿಕೊಂಡರು.