Asianet Suvarna News Asianet Suvarna News

‘ನಾವು ಸನಾತನಿಗಳಲ್ಲ’ ಜಾಗೃತಿ ಕಾರ್ಯಕ್ರಮ ಶೀಘ್ರ: ಕೆ.ಎಸ್‌.ಭಗವಾನ್‌

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ನಾವು ಸನಾತನಿಗಳಲ್ಲ’ ಎಂಬ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹಿರಿಯ ಚಿಂತಕ ಕೆ.ಎಸ್‌.ಭಗವಾನ್‌ ಹೇಳಿದರು.
 

We are not orthodox awareness program soon Says KS Bhagawan gvd
Author
First Published Oct 6, 2023, 7:22 AM IST

ಬೆಂಗಳೂರು (ಅ.06): ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ನಾವು ಸನಾತನಿಗಳಲ್ಲ’ ಎಂಬ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹಿರಿಯ ಚಿಂತಕ ಕೆ.ಎಸ್‌.ಭಗವಾನ್‌ ಹೇಳಿದರು. ಗುರುವಾರ ಸಮಾಜವಾದಿ ಅಧ್ಯಯನ ಕೇಂದ್ರದಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಸಂವಿಧಾನಕ್ಕೆ ವಿರುದ್ಧವಾದುದು. ಸಂವಿಧಾನ ಎಲ್ಲರಿಗೂ ಸಮಾನತೆಯನ್ನು ಬೋಧಿಸುತ್ತದೆ. ಆದರೆ, ಸನಾತನ ಧರ್ಮ ಹಾಗಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ಜಾತಿ ಆಧಾರದ ಮೇಲೆ ಗುಲಾಮಿತನ ಆಚರಿಸುವ ಸನಾತನ ಧರ್ಮದಿಂದ ನಿಜವಾದ ಸ್ವಾತಂತ್ರ್ಯದ ಅಗತ್ಯವಿದೆ. ಹೀಗಾಗಿ ರಾಜ್ಯಾದ್ಯಂತ ‘ನಾವು ಸನಾತನಿಗಳಲ್ಲ’ ಎಂಬುದರ ಕುರಿತು ಜಾಗೃತಿ ನಡೆಸಲಾಗುವುದು. 

ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು. ಶೀಘ್ರವೇ ಮೈಸೂರಿನಲ್ಲಿ ಈ ಅರಿವು ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರು. ಸನಾತನ ಧರ್ಮವೆಂದರೆ ಬ್ರಾಹ್ಮಣರ ಧರ್ಮ. ತಾವು ಮಾತ್ರ ಶ್ರೇಷ್ಠ, ಉಳಿದ ಶೂದ್ರರೆಲ್ಲ ಕೀಳು ಎನ್ನುತ್ತದೆ. ಶೂದ್ರರು ಎಂಬ ಪದದ ಬದಲಾಗಿ ಅಬ್ರಾಹ್ಮಣರು ಎಂದು ಬಳಸಬೇಕು ಎಂದ ಅವರು, ಬೇರೆ ಧರ್ಮಗಳಲ್ಲಿ ಅಗತ್ಯ ಅಧ್ಯಯನ ಮಾಡಿ, ಪರೀಕ್ಷೆ ಬರೆದರೆ ಪೂಜೆ-ಪುನಸ್ಕಾರ ಮಾಡಬಹುದು. ಆದರೆ, ಹಿಂದೂಗಳಲ್ಲಿ ಹಾಗಿಲ್ಲ. ದೇವಸ್ಥಾನ ಪೂಜೆಗೆ ಇತರರಿಗೆ ಅವಕಾಶವಿಲ್ಲ. 

ರಾಜ್ಯದ ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

ಅದರಂತೆ, ಸರ್ಕಾರಿ ಸೇವೆಯಲ್ಲಿ ತೊಡಗಬೇಕಾದರೆ ಯಾರು ಬೇಕಾದರೂ ಅದರ ಪರೀಕ್ಷೆ ಬರೆದು ತೇರ್ಗಡೆ ಆಗಬೇಕು. ಆದರೆ, ಇಲ್ಲಿ ಆ ಸಮಾನತೆ ಇಲ್ಲ. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ ಸೇರಿ ಸಮಾನ ಮನಸ್ಥಿತಿಯ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬಿ.ಡಿ. ಅರವಿಂದ್‌, ವೈ.ಕೆ.ಮುದ್ದುಕೃಷ್ಣ , ಜಿ.ವಿ.ಸುಂದರ್‌ , ಶ್ರೀಪಾದ ಭಟ್, ಪ್ರಕಾಶ್‌ ಕಮ್ಮರಡಿ ಸೇರಿ ಹಲವು ಭಾಗವಹಿಸುವರು ಎಂದು ತಿಳಿಸಿದರು.

Follow Us:
Download App:
  • android
  • ios