ಕರಾವಳಿಯಲ್ಲಿ ತಗ್ಗಿದ ಪ್ರವಾಹ: ಬೆಳಗಾವಿ ನದಿ ನೀರಿನಮಟ್ಟ ಏರಿಕೆ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 64 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರಮುಖ ನದಿಗಳ ನೀರಿನಮಟ್ಟ ಏರಿಕೆಯಾಗಿ ಆತಂಕ ಸೃಷ್ಟಿಸಿದೆ.
 

water level rise of major rivers in Belagavi district due to heavy rain in maharashtra grg

ಬೆಂಗಳೂರು(ಜು.10):  ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದು, ಕಳೆದೆರಡು ದಿನಗಳಿಂದ ಪ್ರವಾಹದ ಆತಂಕದಲ್ಲಿದ್ದ ತಗ್ಗುಪ್ರದೇಶದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸೋಮವಾರ ಉಡುಪಿ, ಹೊನ್ನಾವರ ಮತ್ತಿತರ ಕಡೆ ತಗ್ಗುಪ್ರದೇಶಗಳಿಗೆ ನುಗ್ಗಿದ್ದ ಪ್ರವಾಹದ ನೀರು ಬಹುತೇಕ ಇಳಿ ಮುಖವಾಗದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದ ಬಹುತೇಕ ನಿವಾಸಿಗಳು ಮನೆಗೆ ವಾಪಸಾಗಿದ್ದಾರೆ.

ಆದರೆ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 64 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರಮುಖ ನದಿಗಳ ನೀರಿನಮಟ್ಟ ಏರಿಕೆಯಾಗಿ ಆತಂಕ ಸೃಷ್ಟಿಸಿದೆ.
ಉಡುಪಿ, ಉತ್ತರ ಕನ್ನಡದ ಕೆಲವೆಡೆ ಭಾರೀ ಮಳೆ ಯಿಂದಾಗಿಸೋಮವಾರಜನಜೀವನ ಅಸ್ತವ್ಯಸ್ತಗೊಂಡಿತ್ತು. ಉಡುಪಿ ನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ತಗ್ಗುಪ್ರದೇಶ ಗಳ 110ಕ್ಕೂ ಹೆಚ್ಚು
ಮನೆಗಳಿಗೆ ನೀರು ನುಗ್ಗಿ, ನೂರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಮಂಗಳವಾರವೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಮಂಗಳವಾರ ಸಂಜೆಯವರೆಗೂ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.8 ಹೆಚ್ಚು ಮಳೆ: ಮಲೆನಾಡಲ್ಲಿ ಕಮ್ಮಿ..!

ಬೆಳಗಾವಿಯ ಪಶ್ಚಿಮಘಟ್ಟ ಭಾಗ ಹಾಗೂ ಮಹಾರಾಷ್ಟ್ರ ದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ, ಮಲಪ್ರಭ, ಘಟಪ್ರಭಾ ಸೇರಿ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಘಟಪ್ರಭಾ ಹಿಡಕಲ್ ಜಲಾಶ ಯದ ಹಿನ್ನೀರಲ್ಲಿ ವಿಠಲ ಮಂದಿರ ಮುಳುಗಡೆಯಾಗಿದೆ.

Latest Videos
Follow Us:
Download App:
  • android
  • ios