ಹೇಮಾವತಿ ಜಲಾಶಯದಿಂದ ರಾತ್ರೋರಾತ್ರಿ ತಮಿಳನಾಡಿಗೆ ನೀರು ಬಿಟ್ಟಿತಾ ಸರ್ಕಾರ? ಎಚ್‌ಡಿ ರೇವಣ್ಣ ಅಸಮಾಧಾನ

ಹಾಸನದ ಹೇಮಾವತಿ ಜಲಾಶಯದಿಂದ ರಾಜ್ಯ ಸರ್ಕಾರ ಯಾರ ಗಮನಕ್ಕೂ ತರದೇ ರಾತ್ರೋರಾತ್ರಿ 16 ಟಿಎಂಸಿ ನೀರು ಬಿಟ್ಟಿದೆ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅಸಮಾಧಾನಗೊಂಡರು.

Water from Hemavathy Reservoir to Tamil Nadu HD Revanna outraged rav

ಹಾಸನ (ಸೆ.3):  ಹಾಸನದ ಹೇಮಾವತಿ ಜಲಾಶಯದಿಂದ ರಾಜ್ಯ ಸರ್ಕಾರ ಯಾರ ಗಮನಕ್ಕೂ ತರದೇ ರಾತ್ರೋರಾತ್ರಿ 16 ಟಿಎಂಸಿ ನೀರು ಬಿಟ್ಟಿದೆ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅಸಮಾಧಾನಗೊಂಡರು.

ಇಂದು ಹಾಸನದಲ್ಲಿ ಮಾತನಾಡಿದ ಅವರು, ಹೇಮಾವತಿ ಜಲಾಶಯದ ನೀರು ಎಲ್ಲಿಗೆ ಬಿಟ್ಟರು? ಈ ನೀರಲ್ಲಿ ನಮ್ಮ ರೈತರು ಒಂದು ಬೆಳೆ ಬೆಳೆಯುತ್ತಿದ್ದರು. ನೀರಾವರಿ ಸಲಹಾ ಸಮಿತಿ ಸಭೆ ಮಾಡದೆ ಹೇಗೆ ನೀರು ಬಿಟ್ಟರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜ್ವಲ್‌ ರೇವಣ್ಣ ಅನರ್ಹತೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮ​ನ​ವಿ: ದೇವೇ​ಗೌ​ಡ

ನೀವು ಬೆಂಗಳೂರಿನಲ್ಲಿ ಕೂತು ತೀರ್ಮಾನ ಮಾಡಿದ್ರೆ ಹೇಗೆ ನೀರಾವರಿ ಸಲಹಾ ಸಮಿತಿ ಸಭೆ ಮಾಡದೆ ನಿಮಗೆ ತಿಳಿದಂತೆ ನೀರು ಬಿಡುತ್ತಾ ಹೋದರೆ ಹೇಗೆ ಇಲ್ಲಿನ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಬಹುಶಃ ಈ ಸರ್ಕಾರ ತಮಿಳುನಾಡಿನ ಜೊತೆ ಶಾಮೀಲ್ ಆಗಿದಾರೆ. ಇವರು ಅವರು ಇಂಡಿಯಾ ಟೀಂ ನಲ್ಲಿ ಪಾರ್ಟನರ್ ಇದ್ದಾರೆ ಹಾಗಾಗಿ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀರು ಬಿಡ್ತಾ ಇದಾರೆ ಎಂದು ಗಂಭೀರ ಆರೋಪ ಮಾಡಿದರು.

ಲೋಕಸಭಾ ಚುನಾವಣೆ ಕಾರಣದಿಂದ ನೀರಾವರಿ ಅಚ್ಚುಕಟ್ಟು ಪ್ರದೇಶ ಇಲ್ಲದಿದ್ದರೂ  ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಕಿಡಿಕಾರಿದರು ಮುಂದುವರಿದು ಮುಖ್ಯಮಂತ್ರಿ ಕೂಡಲೇ ಈ ಬಗ್ಗೆ ವಿಧಾನಸಭಾ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.

ತನಿಖೆ ಮಾಡುತ್ತೇವೆಂದು ಬರೀ ತಮಟೆ ಹೊಡೆಯುತ್ತಿದ್ದಾರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌ಡಿಡಿ ಕಿಡಿ

ತಮಿಳುನಾಡಿಗೆ ನಿರಂತರ ನೀರು ಬಿಟ್ಟು ಈಗ ಸರ್ವಪಕ್ಷ ಸಬೆ ಅಂತಾ ಹೇಳ್ತಾ ಇದ್ದಾರೆ. ಸರ್ವಪಕ್ಷ ಸಭೆ ಕರೆದು ತಮಿಳನಾಡಿಗೆ ಬಿಟ್ಟ ನೀರು ವಾಪಸ್ ತರ್ತಾರಾ? ನೀರು ವಾಪಸ್ ತರುವ ಮಷಿನ್ ಏನಾದರೂ ಇವರ ಬಳಿ ಇದೆಯಾ? ನೀರು ಬಿಟ್ಟಾದ ಮೇಲೆ ಇನ್ನೆಂತ ನಿಯೋಗ ಎಂದು ಅಸಮಾಧಾನಗೊಂಡರು. 

Latest Videos
Follow Us:
Download App:
  • android
  • ios