Asianet Suvarna News Asianet Suvarna News

ಇಂದು ಪಂಚರಾಜ್ಯದಲ್ಲೂ ಚುನಾವಣೆ: ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಏಕಹಂತ!

ಇಂದು ಪಂಚರಾಜ್ಯದಲ್ಲೂ ಚುನಾವಣೆ| ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಏಕಹಂತ| ಪ. ಬಂಗಾಳ, ಅಸ್ಸಾಂನಲ್ಲಿ 3ನೇ ಹಂತದ ಮತದಾನ

Voting in 5 States 475 Assembly Constituencies On Tuesday pod
Author
Bangalore, First Published Apr 6, 2021, 7:52 AM IST

ನವದೆಹಲಿ(ಏ.06): ಪಂಚರಾಜ್ಯ ಚುನಾವಣೆ ಕುತೂಹಲದ ಘಟ್ಟತಲುಪಿದ್ದು ಮಂಗಳವಾರದಂದು ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದೇ ಹಂತದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನೆರವೇರಲಿದೆ. ಇನ್ನು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಚುನಾವಣೆ ನೆರವೇರಲಿದೆ. ಈ ಮೂಲಕ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ತಮಿಳುನಾಡು:

234: ಒಟ್ಟು ಸ್ಥಾನ

3998: ಕಣದಲ್ಲಿರುವ ಅಭ್ಯರ್ಥಿಗಳು

6.28 ಕೋಟಿ: ಮತದಾರರ ಸಂಖ್ಯೆ

ಹಣಾಹಣಿ: ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟ/ ಡಿಎಂಕೆ- ಕಾಂಗ್ರೆಸ್‌ ಮೈತ್ರಿಕೂಟ.

ಏನೇನು ವಶ: ಪ್ರಚಾರದ ವೇಳೆ ವಿವಿಧ ಪಕ್ಷಗಳಿಗೆ ಸೇರಿದ 225 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 176.11 ಕೋಟಿ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಕೇರಳ:

140: ಒಟ್ಟು ಸ್ಥಾನ

957: ಕಣದಲ್ಲಿರುವ ಅಭ್ಯರ್ಥಿಗಳು

2.74 ಕೋಟಿ: ಮತದಾರರ ಸಂಖ್ಯೆ

ಹಣಾಹಣಿ: ಸಿಪಿಎಂ ನೇತೃತ್ವದ ಎಲ್‌ಡಿಎಫ್‌/ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌/ ಬಿಜೆಪಿ

ಪುದುಚೇರಿ

30: ಒಟ್ಟು ಸ್ಥಾನ

324: ಕಣದಲ್ಲಿರುವ ಅಭ್ಯರ್ಥಿಗಳು

10.04 ಲಕ್ಷ: ಅರ್ಹ ಮತದಾರರು

ಹಣಾಹಣಿ: ಕಾಂಗ್ರೆಸ್‌ ಮತ್ತು ಡಿಎಂಕ / ಬಿಜೆಪಿ ಮತ್ತು ಎಐಎಡಿಎಂಕೆ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಪಶ್ಚಿಮ ಬಂಗಾಳ 3ನೇ ಹಂತ:

31: ಒಟ್ಟು ಕ್ಷೇತ್ರ

205: ಕಣದಲ್ಲಿರುವ ಅಭ್ಯರ್ಥಿಗಳು

78 ಲಕ್ಷ: ಅರ್ಹ ಮತದಾರರ ಸಂಖ್ಯೆ

ಹಣಾಹಣಿ: ಟಿಎಂಸಿ/ ಬಿಜೆಪಿ/ ಕಾಂಗ್ರೆಸ್‌ ಮತ್ತು ಎಡಪಕ್ಷ

ಅಸ್ಸಾಂ 3ನೇ ಹಂತ: 

40: ಒಟ್ಟು ಸ್ಥಾನ

337: ಕಣದಲ್ಲಿರುವ ಅಭ್ಯರ್ಥಿಗಳು

79.19 ಲಕ್ಷ: ಮತದಾರರ ಸಂಖ್ಯೆ

ಹಣಾಹಣಿ: ಬಿಜೆಪಿ/ ಕಾಂಗ್ರೆಸ್‌/ ಎಐಯುಡಿಎಫ್‌

Follow Us:
Download App:
  • android
  • ios