Asianet Suvarna News Asianet Suvarna News

Vokkaligara Sangha Election: ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಆಯ್ಕೆ ಇಂದು!

ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಸ್ಥಾನಗಳಗೆ ಜ.5ರ ಬುಧವಾರ ಚುನಾವಣೆ ನಡೆಯಲಿದೆ

Vokkaligara Sangha Election New President and General Secretary will elected on Wednesday mnj
Author
Bengaluru, First Published Jan 5, 2022, 4:25 AM IST

ಬೆಂಗಳೂರು (ಜ.5): ರಾಜ್ಯ ಒಕ್ಕಲಿಗರ ಸಂಘದ (Vokkaligara Sangha) ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಸ್ಥಾನಗಳಗೆ ಜ.5ರ ಬುಧವಾರ ಚುನಾವಣೆ ನಡೆಯಲಿದೆ. ಶ್ರವಣಬೆಳಗೊಳದ ಶಾಸಕ ಸಿ.ಎನ್‌.ಬಾಲಕೃಷ್ಣ ಹಾಗೂ ಸಂಘದ ಹಿಂದಿನ ಅಧ್ಯಕ್ಷ ಕೆಂಚಪ್ಪಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಚುನಾವಣೆಯು ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದ (BIT) ಎಂಬಿಎ ಸೆಮಿನಾರ್‌ ಹಾಲ್‌ನಲ್ಲಿ ಪದಾಧಿಕಾರಿಗಳ ಚುನಾವಣೆ ನಡೆಯಲಿದೆ.

ತಮ್ಮ ಬೆಂಬಲ ಹೆಚ್ಚಿಸಿಕೊಳ್ಳುವ ಪ್ರಯತ್ನ 

ವಿವಿಧ ಮುಖಂಡರ ನೇತೃತ್ವದಲ್ಲಿ ರಚನೆಯಾಗಿದ್ದ ಯಾವುದೇ ಸಿಂಡಿಕೇಟ್‌ ಬಹುಮತ ಪಡೆಯಲು ಬೇಕಾದ 18 ಸದಸ್ಯರನ್ನು ಗೆದ್ದಿಲ್ಲ. ಹೀಗಾಗಿ ಗೆದ್ದಿರುವ ಬೇರೆ ಸಿಂಡಿಕೇಟ್‌ನ ಸದಸ್ಯರ ಬೆಂಬಲ ಪಡೆಯಲು ಪ್ರಭಾವಿ ಮುಖಂಡರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಕೆಲವರನ್ನು ಹೊರವಲಯದ ರೆಸಾರ್ಟ್‌ಗಳಲ್ಲಿ ಇರಿಸಿಕೊಂಡಿದ್ದಾರೆಂದು ಹೇಳಲಾಗಿದೆ.

ಕೆಂಚಪ್ಪಗೌಡ ನೇತೃತ್ವದ ಸಿಂಡಿಕೇಟ್‌ನ 10 ಸದಸ್ಯರು ಗೆದ್ದಿದ್ದಾರೆ. ಆದರೆ ಸಿ.ಎನ್‌. ಬಾಲಕೃಷ್ಣ ಅವರು ಯಾವುದೇ ಸಿಂಡಿಕೇಟ್‌ ರಚನೆ ಮಾಡಿಕೊಂಡಿರಲಿಲ್ಲ. ಆದರೂ, ಬೇರೆ ಬೇರೆ ಪ್ರಭಾವಿ ರಾಜಕಾರಣಿಗಳ ಮೂಲಕ ಸದಸ್ಯರ ಬೆಂಬಲ ಪಡೆಯಲು ಸಾಕಷ್ಟುಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: Vokkaliga Sangha Poll Result: ಒಕ್ಕಲಿಗರ ಸಂಘದ ಎಲೆಕ್ಷನ್ ರಿಸಲ್ಟ್, ಇಲ್ಲಿದೆ ಗೆದ್ದವರ ಅಂತಿಮ ಪಟ್ಟಿ

ಕಳೆದ ಡಿ.12ರಂದು ನಡೆದ ಚುನಾವಣೆಯಲ್ಲಿ ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಂಘದ ಎರಡು ಉಪಾಧ್ಯಕ್ಷ ಸ್ಥಾನ, ತಲಾ ಒಂದು ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 10ಕ್ಕೆ ನಾಮಪತ್ರ ಸಲ್ಲಿಕೆ, 11 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. 11.45ಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಪ್ರಕಟಿಸಲಿದ್ದಾರೆ. ನಂತರ 12.15ರವರೆಗೆ ನಾಮಪತ್ರ ವಾಪಸ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 12. 45ಕ್ಕೆ ಕಣದಲ್ಲಿ ಉಳಿಯುವ ಅಂತಿಮ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲಾಗುವುದು.

ಈ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗದಿದ್ದರೆ ಮಧ್ಯಾಹ್ನ 2ರಿಂದ 3-30ರವರೆಗೆ ಗುಪ್ತ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಎಸ್‌. ಜಿಯಾಉಲ್ಲಾ ತಿಳಿಸಿದ್ದಾರೆ.

ಗೆದ್ದವರ ಹೆಸರು ಮತ್ತು ಪಡೆದ ಮತಗಳ ವಿವರ

* ಮೈಸೂರು
ಕೆ.ವಿ.ಶ್ರೀಧರ್​- 12267 ಮತ
ಸಿ.ಜಿ.ಗಂಗಾಧರ್- 10174 ಮತ
ಎಂ.ಬಿ.ಮಂಜೇಗೌಡ- 8790 ಮತ

* ಮಂಡ್ಯ
ಅಶೋಕ್​ ಎಸ್​.ಡಿ.ಜಯರಾಮ್​- 55721 ಮತ
ಎನ್​.ಬಾಲಕೃಷ್ಣ- 38622 ಮತ
ಚಂದ್ರಶೇಖರ್​- 36628 ಮತ
ರಾಘವೇಂದ್ರ- 33986 ಮತ

* ಹಾಸನ
ಸಿ.ಎನ್​.ಬಾಲಕೃಷ್ಣ- 32311 ಮತ
ಎಸ್​.ಎಸ್​.ರುದ್ರೇಗೌಡ- 30555 ಮತ
ಬಿ.ಪಿ.ಮಂಜೇಗೌಡ- 20388 ಮತ

* ತುಮಕೂರು
ಹನುಮಂತರಾಯಪ್ಪ- 14901 ಮತ
ಲೋಕೇಶ್​ ಡಿ.ನಾಗರಾಜಯ್ಯ- 11027 ಮತ

* ಚಿತ್ರದುರ್ಗ
ಜೆ.ರಾಜು- 4074 ಮತ

* ಕೋಲಾರ ಮತ್ತು ಚಿಕ್ಕಬಳ್ಳಾಪುರ
ಡಾ.ಡಿ.ಕೆ.ರಮೇಶ್​- 40435 ಮತ
ಟಿ.ಕೋನಪ್ಪರೆಡ್ಡಿ- 32451 ಮತ
ಎಲುವಳ್ಳಿ ಎನ್​.ರಮೇಶ್​- 24676 ಮತ

* ದಕ್ಷಿಣ ಕನ್ನಡ ಮತ್ತು ಉಡುಪಿ
ಡಾ.ಕೆ.ವಿ.ರೇಣುಕಾಪ್ರಸಾದ್​-3309

* ಕೊಡಗು
ಎಚ್​.ಎನ್​.ರವೀಂದ್ರ- 9157

* ಶಿವಮೊಗ್ಗ ಮತ್ತು ಉತ್ತರ ಕನ್ನಡ
ಎಸ್​.ಕೆ.ಧಮೇಶ್​​- 5808 ಮತ

* ಚಿಕ್ಕಮಗಳೂರು
ಎ.ಪೂರ್ಣೇಶ್​- 20144 ಮತ

* ಬೆಂಗಳೂರು ಕ್ಷೇತ್ರ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ)
ಡಾ. ಅಂಜನಪ್ಪ- 68938
ಅಶೋಕ್ ತಮ್ಮಾಜಿ- 61893
ಕೆಂಚಪ್ಪಗೌಡ- 58066
ಆರ್ ಪ್ರಕಾಶ್- 56694
ಎಚ್.ಸಿ ಜಯಮುತ್ತು- 56254
ಹಾಪ್ ಕಾಮ್ಸ್ ದೇವರಾಜು- 55903


ಎಲ್.ಶ್ರೀನಿವಾಸ್- 49217
ಸಿ.ಎಂ ಮಾರೇಗೌಡ- 48492
ರಾಜಶೇಖರಗೌಡ- 46180
ಕೆ.ಎಸ್. ಸುರೇಶ್- 45601
ಉಮಾಪತಿ- 44709
ಚಕ್ಕೆರೆ ವೆಂಕಟರಾಮೇಗೌಡ- 43022
ಹನುಮಂತಯ್ಯ- 41687
ತೌಟನಹಳ್ಳಿ ಪುಟ್ಟಸ್ವಾಮಿ- 41165
ಡಾ. ನಾರಾಯಣಸ್ವಾಮಿ- 40728

Follow Us:
Download App:
  • android
  • ios