Asianet Suvarna News Asianet Suvarna News

ಸಂಚಾರ ನಿಯಮ ಉಲ್ಲಂಘನೆ: 69 ವಾಹನ ಮಾಲೀಕರಿಂದ ₹5.27 ಲಕ್ಷ ದಂಡ ವಸೂಲಿ!

:ನಗರ ಸಂಚಾರ ಪೂರ್ವ ವಿಭಾಗದ ವ್ಯಾಪ್ಯಿಯಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರ ರು.ಗೂ ಅಧಿಕ ದಂಡ ಬಾಕಿ ಉಳಿಸಿಕೊಂಡಿರುವ 69 ವಾಹನಗಳ ಮಾಲೀಕರಿಂದ 5.27 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.

Violation of traffic rules 5.27 lakh fine collected from 69 vehicle owners at Bengaluru rav
Author
First Published Feb 24, 2024, 6:43 AM IST

ಬೆಂಗಳೂರು (ಫೆ.24) :ನಗರ ಸಂಚಾರ ಪೂರ್ವ ವಿಭಾಗದ ವ್ಯಾಪ್ಯಿಯಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರ ರು.ಗೂ ಅಧಿಕ ದಂಡ ಬಾಕಿ ಉಳಿಸಿಕೊಂಡಿರುವ 69 ವಾಹನಗಳ ಮಾಲೀಕರಿಂದ 5.27 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.

ಹಲವು ಬಾರಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರ ರು.ಗೂ ಅಧಿಕ ದಂಡದ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನಗಳು ಹಾಗೂ ಅದರ ಮಾಲೀಕರ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕಳೆದ 15 ದಿನಗಳಲ್ಲಿ 69 ವಾಹನಗಳನ್ನು ಪತ್ತೆ ಮಾಡಲಾಗಿದೆ. ಈ 69 ವಾಹನಗಳ ವಿರುದ್ಧ 8,875 ಪ್ರಕರಣಗಳು ದಾಖಲಾಗಿದ್ದು, 47.15 ಲಕ್ಷ ರು. ದಂಡ ಬಾಕಿ ಇದೆ. ಈ ಪೈಕಿ 1,048 ಪ್ರಕರಣಗಳನ್ನು ಇತ್ಯರ್ಥಪಡಿಸಿ 5.27 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.ಉಳಿದ ದಂಡ ಸಂಗ್ರಹಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಂಬಂಧಪಟ್ಟ ವಾಹನಗಳ ಮಾಲೀಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ತಿಳಿಸಿದ್ದಾರೆ.

ವಾಟರ್‌ ಟ್ಯಾಂಕರ್‌ಗಳ 506 ಪ್ರಕರಣ ದಾಖಲು: ₹2.64 ಲಕ್ಷ ದಂಡ ಸಂಗ್ರಹಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಟರ್‌ ಟ್ಯಾಂಕರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೊಲೀಸರು ಶುಕ್ರವಾರ 506 ಪ್ರಕರಣಗಳನ್ನು ದಾಖಲಿಸಿ, 2.64 ಲಕ್ಷ ರು. ದಂಡ ವಸೂಲಿ ಮಾಡಿದ್ದಾರೆ .ನಗರದ ಎಲ್ಲಾ ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 7 ಗಂಟೆಯಿಂದ 9 ಗಂಟೆ ವರೆಗೆ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ವಾಟರ್‌ ಟ್ಯಾಂಕರ್‌ ಚಾಲಕರು ಸಮವಸ್ತ್ರ ಧರಿಸದಿರುವುದು 162, ಸೀಟ್‌ ಬೆಲ್ಟ್‌ ಧರಿಸದಿರುವುದು 39, ನೋ ಎಂಟ್ರಿ 120, ದೋಷಪೂರಿತ ನೋಂದಣಿ ಫಲಕ 56, ಪಥ ಶಿಸ್ತು ಉಲ್ಲಂಘನೆ 04, ನಿಲುಗಡೆ ನಿಷೇಧ 57, ಫುಟ್‌ಪಾತ್‌ ಪಾರ್ಕಿಂಗ್‌ 05, ಕರ್ಕಶ ಹಾರ್ನ್‌ 05, ಪಾನಮತ್ತ ಚಾಲನೆ 01, ಇತರೆ ನಿಯಮ ಉಲ್ಲಂಘನೆ 57 ಸೇರಿದಂತೆ ಒಟ್ಟು 506 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios