ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆ ವಿರುದ್ಧ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊಡಗು (ಏ.13): ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆ ವಿರುದ್ಧ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಪ್ರಕರಣದ ಮುಖ್ಯ ಆರೋಪಿ ತೆನ್ನೀರ್ ಮೈನಾ ಕೊಡಗಿನಲ್ಲೇ ಇದ್ದಾರೆ ಎಂದು ಮಾಹಿತಿ ನೀಡಲು ಹೆಣ್ಣೂರು ಠಾಣೆಯ ಪೊಲೀಸರಿಗೆ, ಸರ್ಕಲ್ ಇನ್ಸ್‌ಪೆಕ್ಟರ್‌ನಿಂದ ಡಿಸಿಪಿ ವರೆಗೆ ಕರೆ ಮಾಡಿದರೂ ಯಾರೂ ಫೋನ್ ರಿಸೀವ್ ಮಾಡಿಲ್ಲ ಎಂದು ಬೋಪಯ್ಯ ಆರೋಪಿಸಿದ್ದಾರೆ.

ಇದು ಯಾವ ರೀತಿಯ ದುಂಡಾವರ್ತನೆ?

ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ಕರೆ ಮಾಡಿದರೆ ಪೊಲೀಸರು ಎದ್ದು ನಿಂತು ನಮಸ್ಕಾರ ಹೊಡೆಯುತ್ತಾರೆ. ಇಂತಹ ಮನೋದೌರ್ಬಲ್ಯ ಇದ್ದರೆ ಏನು ಮಾಡೋದು? ಎಂದು ಕೆ.ಜಿ. ಬೋಪಯ್ಯ ಕಿಡಿಕಾರಿದ್ದಾರೆ. ಪೊಲೀಸರು ತಮ್ಮ ಕಾನೂನು ರೀತಿಯಲ್ಲಿ ಕೆಲಸ ಮಾಡಲಿ, ಆದರೆ ಈ ರೀತಿಯ ನಿರ್ಲಕ್ಷ್ಯ ಎಷ್ಟು ದಿನ ನಡೆಯುತ್ತದೆ? ಖಂಡಿತಾ ನ್ಯಾಯಾಂಗದಿಂದ ನಮಗೆ ನ್ಯಾಯ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿನಯ್ ಸೋಮಯ್ಯ ಪ್ರಕರಣ:10 ದಿನ ಕಳೆದರೂ ಆರೋಪಿಗಳ ಬಂಧನ ಇಲ್ಲ!

ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಸಿಟ್ಟು ಮತ್ತು ಆಕ್ರೋಶ ಹೊರಹಾಕಿದ ಕೆಜಿ ಬೋಪಯ್ಯ ಅವರು, ಈ ಪ್ರಕರಣದಲ್ಲಿ ತನಿಖೆಯನ್ನು ಸರಿಯಾಗಿ ನಡೆಸದಿದ್ದರೆ ಮುಂದಿನ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.