Asianet Suvarna News Asianet Suvarna News

ವಿಜಯಪುರದಲ್ಲಿ 2.93 ಕೋಟಿ ರೂ. ವಶಕ್ಕೆ ಪಡೆದ ಪೊಲೀಸರು; ಹಾಸಿಗೆಯಷ್ಟು ಉದ್ದದ ಕಂತೆ ಕಂತೆ ನೋಟುಗಳು ಪತ್ತೆ!

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರೂ ಟೊಯೊಟಾ ಕಾರಿನಲ್ಲಿ ಪೊಲೀಸರ ಕಣ್ತಪ್ಪಿಸಿ 2.93 ಕೋಟಿ ರೂ. ಸಾಗಣೆ ಮಾಡುತ್ತಿದ್ದ ಇಬ್ಬರನ್ನು ವಿಜಯಪುರ ಪೊಲೀಸರು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

Vijayapura  Police seized Rs 3 crore cash toyota car and Hyderabad two persons sat
Author
First Published Mar 19, 2024, 6:07 PM IST

ವಿಜಯಪುರ (ಮಾ.19): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲೆಡೆ ಜಿಲ್ಲೆ ಹಾಗೂ ಅಂತರರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇನ್ನು ಹೈದರಾಬಾದ್‌ನಿಂದ ಪೊಲೀಸರ ಕಣ್ಣು ತಪ್ಪಿಸಿ ವಿಜಯಪುರ ಮಾರ್ಗವಾಗಿ ಟೋಯೊಟಾ ಕಾರಿನಲ್ಲಿ ಹುಬ್ಬಳ್ಳಿಗೆ 2.93 ಕೋಟಿ ರೂ. ನಗದು ಹಣವನ್ನು ಸಾಗಣೆ ಮಾಡುತ್ತಿದ್ದರನ್ನು ವಿಜಯಪುರ ಚೆಕ್‌ಪೋಸ್ಟ್‌ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ಹಣವನ್ನು ಸಾಗಣೆ ಮಾಡುವುಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ, 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಹಣ ಸಾಗಣೆ ಮಾಡಬೇಕೆಂದರೆ ಸೂಕ್ತ ದಾಖಲೆಗಳನ್ನು ಕೊಡಬೇಕಾಗುತ್ತದೆ. ಆದರೆ, ಇಷ್ಟೆಲ್ಲಾ ನಿಯಮಗಳನ್ನು ಜಾರಿಗೊಳಿಸಿದ ನಂತರವೂ ಬಾಲಾಜಿ ನಿಕ್ಕಂ ಮತ್ತು ಸಚಿನ್ ಮೋಯಿತೆ ಎಂಬುವವರು ಹೈದರಾಬಾದ್‌ನಿಂದ ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಇನ್ನೋವಾ ಕಾರಿನಲ್ಲಿ 2.93 ಕೋಟಿ ರೂ. ಹಣವನ್ನು ಸಾಗಣೆಮಾಡುತ್ತಿದ್ದರು.

ನರೇಂದ್ರ ಮೋದಿ 'ವೀಕ್ ಪಿಎಂ' ನಮ್ಮಲ್ಲಿ ಸೂಪರ್.. ಶ್ಯಾಡೋ ಸಿಎಂ ಯಾರೂ ಇಲ್ಲ; ಸಿದ್ದರಾಮಯ್ಯ ಟೀಕೆ

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ವಿಜಯಪುರ ನಗರದ ಚೆಕ್‌ಪೋಸ್ಟ್‌ನಲ್ಲಿ ಇನ್ನೋವಾ ಕಾರನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ವಿಜಯಪುರ ನಗರದಲ್ಲಿ ಸಿಇಎನ್‌ ಠಾಣೆ ಪೊಲೀಸರು ನಗರದ ಸಿಂದಗಿ ಬೈಪಾಸ್ ಬಳಿ ಹಾದು ಹೋಗುವಾಗ ಹೈದರಾಬಾದ್‌ನಿಂದ ಬಂದಿದ್ದ ಟೋಯೊಟಾ ಕಾರನ್ನು ತಡೆದು ಪರಿಶೀಲನೆ ಮಾಡಿದ್ದಾರೆ. ಆಗ 2.93 ಕೋಟಿ ರೂ. ನಗದು ಲಭ್ಯವಾಗಿದೆ. ಕೂಡಲೇ, 2.93 ಕೋಟಿ ರೂ. ನಗದು ಜಪ್ತಿ ಮಾಡಿದ್ದಾರೆ. ಜೊತೆಗೆ, ಹಣ ಸಾಗಣೆ ಮಾಡುತ್ತಿದ್ದ ಬಾಲಾಜಿ ನಿಕ್ಕಂ, ಸಚಿನ ಮೋಯಿತೆ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಹಣದ ಜೊತೆಗೆ ಟೋಯೋಟಾ ಕಾರು ಹಾಗೂ 2 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ರಷ್ಯಾ ದೇಶದ ಯುವತಿಯ ಪ್ರಾಣ ರಕ್ಷಿಸಿದ ಕರ್ನಾಟಕ ಲೈಫ್‌ಗಾರ್ಡ್ಸ್!

ಇನ್ನು ವಿಜಯಪುರ ಪೊಲೀಸರು ಹಣವನ್ನು ಜಪ್ತಿ ಮಾಡಿ ಒಂದು ದೊಡ್ಡ ಟೇಬಲ್‌ ಮೇಲೆ ಹಣದ ಕಂತೆಗಳನ್ನು ಜೋಡಿಸಿದ್ದಾರೆ. ಕೇವಲ 500 ರೂ. ನೋಟಿನ ಬಂಡಲ್‌ಗಳಿದ್ದು, ಅವುಗಳನ್ನು ಸಾಲಾಗಿ ಜೋಡಿಸಿದರೆ 6 ಅಡಿ ಉದ್ದ ಹಾಗೂ 3 ಅಡಿ ಅಗಲದಷ್ಟು ಜಾಗವನ್ನು ಆವರಿಸಿದೆ. ಅಂದರೆ, ಒಬ್ಬ ವ್ಯಕ್ತಿ ಮಲಗುವ ಸಿಂಗಲ್‌ ಬೆಡ್‌ ಹಾಸಿಗೆಯಷ್ಟು ಉದ್ದ ಮತ್ತು ಅಗಲ ಜಾಗವನ್ನು ಹಣ ಆವರಿಸಿದೆ. ಇನ್ನು ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.

Follow Us:
Download App:
  • android
  • ios