ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ರಷ್ಯಾ ದೇಶದ ಯುವತಿಯ ಪ್ರಾಣ ರಕ್ಷಿಸಿದ ಕರ್ನಾಟಕ ಲೈಫ್‌ಗಾರ್ಡ್ಸ್!

ಭಾರತದ ಪಶ್ಚಿಮ ಕರಾವಳಿ ಅರಬ್ಬೀ ಸಮುದ್ರದ ತೀರ ಪ್ರದೇಶ ಗೋಕರ್ಣದ ಬಳಿಯ ಕೂಡ್ಲೆ ಬೀಚ್‌ನಲ್ಲಿ ಮುಳುಗುತ್ತಿದ್ದ ರಷ್ಯಾ ದೇಶದ ಯುವತಿಯನ್ನು ಕರ್ನಾಟಕ ಲೈಫ್‌ಗಾರ್ಡ್ಸ್‌ಗಳು ಪ್ರಾಣ ರಕ್ಷಣೆ ಮಾಡಿದ್ದಾರೆ.

Russian girl drowning in Arabian sea then Karnataka Lifeguard saved her life sat

ಉತ್ತರ ಕನ್ನಡ (ಮಾ.19): ಭಾರತಕ್ಕೆ ಸಾಮಾನ್ಯವಾಗಿ ವಿದೇಶಿಗರು ನವೆಂಬರ್ ತಿಂಗಳಿಂದ ಫೆಬ್ರವರಿ ಅವಧಿಯೊಳಗೆ ಬಂದು ಹೋಗುತ್ತಾರೆ. ಆದರೆ, ಕೆಲವು ವಿದೇಶಗಳು ವಿವಿಧ ಋತುಮಾನಗಳಲ್ಲಿ ಬಂದು ಹೋಗುತ್ತಿರುತ್ತಾರೆ. ಅದೇ ರೀತಿ ಕರ್ನಾಟಕಕ್ಕೆ ಬಂದಿದ್ದ ರಷ್ಯಾ ದೇಶದ ಯುವತಿಯೊಬ್ಬಳು ಅರಬ್ಬೀ ಸಮುದ್ರದ ತೀರ ಪ್ರದೇಶ ಗೋಕರ್ಣದ ಕೂಡ್ಲೆ ಬೀಚ್‌ನಲ್ಲಿ ಈಜಲು ತೆರಳಿದ್ದಾಗ ಸಮುದ್ರದಲ್ಲಿ ಮುಳುಗುತ್ತಿದ್ದಳು. ಇದನ್ನು ನೋಡಿದ ಕರ್ನಾಟಕದ ಲೈಫ್‌ ಗಾರ್ಡ್ಸ್ ವಿದೇಶ ಯುವತಿಯನ್ನು ರಕ್ಷಣೆ ಮಾಡಿ ಪ್ರಾಣ ಉಳಿಸಿದ್ದಾರೆ.

ಹೌದು, ಅರಬ್ಬೀ ಸಮುದ್ರದ ತೀರ ಪ್ರದೇಶ ಗೋಕರ್ಣ ಬಳಿಯ ಕೂಡ್ಲೆ ಬೀಚ್‌ನಲ್ಲಿ ಮುಳುಗುತ್ತಿದ್ದ ರಷ್ಯನ್ ಮೂಲದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ರಷ್ಯಾ ಮೂಲದ ಆ್ಯನಾ (24) ರಕ್ಷಣೆಯಾದ ಯುವತಿಯಾಗಿದ್ದಾಳೆ. ಇನ್ನು ಯುವತಿ ಪ್ರಾಣ ರಕ್ಷಣೆ ಒಂದೆಡೆಯಾದರೆ ಇದೇ ಸ್ಥಳದಲ್ಲಿ ಅಸ್ಸಾಂ ಮೂಲದ ಮತ್ತೊಬ್ಬ ಯುವಕ ಅಭಿಷೇಕ್‌ ನಾಥ್ ಕೂಡ ಮುಳುಗಡೆ ಆಗುತ್ತಿದ್ದು, ಆತನನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಇಬ್ಬರನ್ನೂ ಪ್ರಾಣ ರಕ್ಷಣೆ ಮಾಡಿದ ನಂತರ ವಿಚಾರಣೆ ಮಾಡಲಾಗಿದ್ದು, ವಿದೇಶಿ ಯುವತಿ ಆ್ಯನಾ ಅಸ್ಸಾಂ ಮೂಲದ ಅಭಿಷೇಕ್‌ನಾಥ್ ನೊಂದಿಗೆ ಪ್ರವಾಸಕ್ಕೆ ಬಂದಿರುವುದು ತಿಳಿದುಬಂದಿದೆ.

ಕಾಡುಪ್ರಾಣಿಗಳೊಂದಿಗೆ ಸೆಲ್ಫೀ ತೆಗೆದುಕೊಂಡ್ರೆ 7 ವರ್ಷ ಜೈಲಾಗ್ಬಹುದು, ಹುಷಾರ್!

ಇನ್ನು ಇಬ್ಬರೂ ಸ್ನೇಹಿತರಾಗಿದ್ದು, ಗೋಕರ್ಣದ ಕೂಡ್ಲೆ ಬೀಚ್‌ನಲ್ಲಿ ಈಜಲು ತೆರಳಿದ್ದಾರೆ. ಆದರೆ, ಏಕಾಏಕಿ ದೊಡ್ಡ ಅಲೆಗಳು ಬಂದಿದ್ದರಿಂದ ಗಾಳಿ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಇನ್ನು ನೋಡಿದ ಗೋಕರ್ಣ ಬೀಚ್‌ನ ಲೈಫ್‌ಗಾರ್ಡ್‌ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದ ಆ್ಯನಾಳನ್ನು ರಕ್ಷಣೆ ಮಾಡಿ, ಸಮುದ್ರ ತೀರಕ್ಕೆ ಕರೆದು ತಂದಿದ್ದಾರೆ. ಇನ್ನು ಈಕೆಯ ಸ್ನೇಹಿತನನ್ನೂ ಕೂಡ ಮತ್ತೊಂದು ಘಟನೆಯಲ್ಲಿ ಪ್ರಾಣ ರಕ್ಷಣೆ ಮಾಡಿದ್ದಾರೆ.

ಇನ್ನು ಕರ್ನಾಟಕದ ಲೈಫ್‌ಗಾರ್ಡ್ಸ್ ಸಿಬ್ಬಂದಿಯಾದ ಮಂಜುನಾಥ್ ಹರಿಕಂತ್ರ, ನವೀನ್ ಅಂಬಿಗ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ನ ಸಿಬ್ಬಂದಿಗೆ ಸ್ಥಳೀಯರು ಹಾಗೂ ಪ್ರಾಣಪಾಯದಿಂದ ಪಾರಾದವರು ಧನ್ಯವಾದ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios