Asianet Suvarna News Asianet Suvarna News

ಗುತ್ತಿಬಸವಣ್ಣ ಹೋರಾಟದಲ್ಲಿ ಪಾಲ್ಗೊಂಡ ಪುಟಾಣಿಗಳು!

• 60 ದಿನಗಳ ಹೋರಾಟಕ್ಕೆ ಸಾತ್, ಮೈಕ್ ಹಿಡಿದು ಭಾಷಣ ಮಾಡಿದ ಮಕ್ಕಳು..!

• ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಅಪರೂಪದ ಘಟನೆ..!

* ಅನ್ನದಾತನ ಹೋರಾಟಕ್ಕೆ ಪುಟಾಣಿಗಳ ಸಾತ್

Vijayapura News childerns Supports in gutti basavanna protest san
Author
Bengaluru, First Published May 12, 2022, 10:26 PM IST

- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್..!

ವಿಜಯಪುರ (ಮೇ.12) : ಗುತ್ತಿ ಬಸವಣ್ಣ (Gutti Basavanna) ಏತನೀರಾವರಿ ಯೋಜನೆ ಜಾರಿಗಾಗಿ ಕಳೆದ 60 ದಿನಗಳಿಂದ ರೈತರು (farmers ) ಹೋರಾಟ ನಡೆಸುತ್ತಿದ್ದಾರೆ. ಇಂಡಿ (Indi) ತಾಲೂಕಿನ ತಾಂಬಾ (Tamba)ಗ್ರಾಮದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಈಗ ಪುಟಾಣಿಗಳು (childerns ) ಸಾತ್ ನೀಡಿದ್ದಾರೆ. ಅಪರೂಪದ ಘಟನೆ ಸಾಕ್ಷಿಯಾಗಿದ್ದಾರೆ..

ಅನ್ನದಾತನ ಹೋರಾಟಕ್ಕೆ ಪುಟಾಣಿಗಳ ಸಾತ್: ತಾಂಬಾ ಗ್ರಾಮದಲ್ಲಿ ಗುತ್ತಿ ಬಸವಣ್ಣ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಕೃಷ್ಣಾ ನದಿಯಿಂದ ನೀರು ಹರಿಸುವಂತೆ ಆಗ್ರಹಿಸಿದ ಹೋರಾಟ ಶುರುವಾಗಿ 60ದಿನಗಳೆ ಕಳೆದಿವೆ. ಈಗ ಪುಟಾಣಿ ಮಕ್ಕಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ.. ಹೋರಾಟ ನಡೆಯುತ್ತಿರುವ ಸ್ಥಳಕ್ಕೆ ಬಂದ ಹತ್ತಾರು ಪುಟಾಣಿಗಳು ಅನ್ನದಾತರ ಹೋರಾಟಕ್ಕೆ ನಮ್ಮದು ಸಾತ್ ಇದೆ ಎಂದಿದ್ದಾರೆ. 

ಮೈಕ್ ಹಿಡಿದು ರೈತಪರ ಭಾಷಣ ಮಾಡಿದ ಮಕ್ಕಳು: ಹೀಗೆ ಹೋರಾಟದಲ್ಲಿ ಪಾಲ್ಗೊಂಡ ಮಕ್ಕಳು ಗುತ್ತಿ ಬಸವಣ್ಣ ಯೋಜನೆಯ ಕಾಲುವೆಗೆ ನೀರು ಹರಿಯಬೇಕು ಅಂತಾ ಆಗ್ರಹಿಸಿದ್ದಾರೆ. ಇನ್ನೂ ತಾವು ಯಾರಿಗೆ ಕಮ್ಮಿ ಅಂತಾ ಕೆಲ ಮಕ್ಕಳು ಕೈಲಿ ಮೈಕ್ ಹಿಡಿದು ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.. ನೀರು ಹರಿಸುವಂತೆ ತಮ್ಮದೇ ದಾಟಿಯಲ್ಲಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.. 

ಏನೀ ಗುತ್ತಿಬಸವಣ್ಣ ಹೋರಾಟ:  ಗುತ್ತಿ ಬಸವಣ್ಣ ಹೋರಾಟ ಸಮಿತಿ ಹಾಗೂ ಸಾವಿರಾರು ರೈತರ ಹೋರಾಟದ ಪರಿಣಾಮ 1976ರಿಂದ 2006ರ ವರೆಗೆ 97ಕಿಲೋ ಮೀಟರ್ ವರೆಗೆ ಮಾತ್ರ ಮಾಡಲಾಗಿತ್ತು. ಅದಾದ ನಂತ್ರದಲ್ಲಿ 2006ರಲ್ಲಿ 49 ದಿನಗಳ ಕಾಲ ಹೋರಾಟ ಮಾಡಿದ ಬಳಿಕ 97ರಿಂದ 147 ಕಿಲೊಮೀಟರ್ ವರೆಗೆ 2013ರ ವರೆಗೆ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮಾಡಲಾಗಿದೆ. ಆದ್ರೆ ಕಾಲುವೆ ಮಾಡಿದ್ದೇ ಬಂತು, ಇದುವರೆಗೂ ಒಂದು ಹನಿ ನೀರು ಹರಿದಿಲ್ಲ. ಈ ಹಿಂದೆ ಹಲವು ಹೋರಾಟವಾದ ಬಳಿಕ ಕಾಲುವೆ ನಿರ್ಮಾಣವಾಗಿದ್ರೂ 2013ರಿಂದ ಇಂದಿನ ವರೆಗೂ ನೀರು ಬಂದಿಲ್ಲ. ಹೀಗಾಗಿ ಇದೀಗ ಮತ್ತೆ ರೈತರು ಮಾರ್ಚ್ 11ರಿಂದ ಬರೋಬ್ಬರಿ ಎರಡು ತಿಂಗಳಿನಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

2019ರಲ್ಲೂ ನಡೆದಿತ್ತು ಅನ್ನದಾತರ ಹೋರಾಟ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಬರುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಈ ಹಿಂದೆ ಸಾಕಷ್ಟು ಹೋರಾಟ ನಡೆಸಲಾಗಿತ್ತು. ಇನ್ನು 2019ರಲ್ಲಿ 29ದಿನಗಳ ಕಾಲ ಹೋರಾಟ ಮಾಡಿದ್ದಾಗಲೂ ಕೇವಲ ನಾಲ್ಕು ದಿನ ಮಾತ್ರ ನೀರು ಹರಿಸಲಾಗಿತ್ತು. ಇದೀಗ ಎರಡು ತಿಂಗಳಿನಿಂದ ಸತ್ಯಾಗ್ರಹ ನಡೆಯುತ್ತಲೇ ಇದೆ ಆದ್ರೂ ಸಹ ಗುತ್ತಿ ಬಸವಣ್ಣ ಹೋರಾಟ ಸಮೀತಿ ಮತ್ತು ಅನ್ನದಾತರು ಹಿಂಜರಿಯದೇ ಧರಣಿಯನ್ನು ಮುಂದುವರೆಸಿದ್ದಾರೆ.

SHAURYA PURASKAR ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ

ಅವೈಜ್ಞಾನಿಕ ಕಾಲವೆ ನಿರ್ಮಾಣವೇ ಇಷ್ಟಕ್ಕೆಲ್ಲ ಕಾರಣ:
ಈ ಮೊದಲು ನಿರ್ಮಿಸಿರುವ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯು ಕೆಲವು ಕಡೆ ಅವೈಜ್ಞಾನಿಕವಾಗಿದ್ದರಿಂದ ಕಾಲುವೆ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ. ಹೀಗಾಗಿ ಬಳಗಾನೂರ ಏತ ನೀರಾವರಿ ಕಾಲುವೆಗೆ ಲಿಫ್ಟ್ ನಿರ್ಮಿಸಿ ಆ ಮೂಲಕ ನೀರು ಹರಿಸಲು ರೈತರು ಆಗ್ರಹಿಸಿದ್ದಾರೆ. ಆದ್ರೆ ಅಧಿಕಾರಿಗಳು ಮತ್ತು ಈ ಭಾಗದ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ನೀರು ಬಂದಿಲ್ಲ.

Bijapur Sainik School ಹೆಣ್ಮಕ್ಕಳಿಗೂ ಪ್ರವೇಶ ಅವಕಾಶ

20 ಹಳ್ಳಿಗಳು, 25 ಸಾವಿರ ಏಕರೆಗೆ ಸಿಗಬೇಕಿದೆ ನೀರು:
 ಕಾಲುವೆಗೆ ನೀರು ಬಂದಿದ್ದೇ ಆದಲ್ಲಿ ಇಂಡಿ ತಾಲೂಕಿನ ತಾಂಬಾ ತಾಂಬಾ, ಬನ್ನಿಹಟ್ಟಿ, ಗೊರನಾಳ, ತೆನ್ನಿಹಳ್ಳಿ, ಮಸಳಿ, ರೂಗಿ, ಜೈನೂರ, ಸಾಲೊಟಗಿ, ಶಿವಪುರ ಸೇರಿದಂತೆ 20ಹಳ್ಳಿಗಳಿಗೆ ಅನುಕೂಲ ಆಗಲಿದೆ. ಬರ ಪ್ರದೇಶದಲ್ಲಿರುವ 25ಸಾವಿರ ಎಕರೆ ಭೂಮಿ ನೀರಾವರಿ ಆಗಲಿದೆ. ನೀರಾವರಿ ಆದ್ರೆ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಲಿಂಬೆ, ದಾಳಿಂಬೆ, ದ್ರಾಕ್ಷಿ, ಕಬ್ಬು ಬೆಳೆಗಳಿಗೆ ಅನುಕೂಲ ಆಗಲಿದೆ.

Follow Us:
Download App:
  • android
  • ios