'ನೀವು ಸಾಬರಿಗೆ ಮುತ್ತು ಕೊಡ್ತಾ ಇರಿ, ಕಿಸ್ಸಿಂಗ್ ಮಿನಿಸ್ಟರ್ ಆಗ್ತೀರಿ, ಗೃಹ ಸಚಿವ ವಿರುದ್ಧ ಯತ್ನಾಳ್ ವಾಗ್ದಾಳಿ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ, ಸಾಬರಿಗೆ ಮುತ್ತು ಕೊಡಿ ಎಂದು ಗೃಹ ಸಚಿವ ಪರಮೇಶ್ವರ್ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯಪುರ (ಜ.11): ನೀವು ಸಾಬರಿಗೆ ಮುತ್ತು ಕೊಡಿ, ಕೆಜಿ ಹಳ್ಳಿ ಡಿಜೆ ಹಳ್ಳಿ ಆರೋಪಿಗಳಿಗೆ ಮುತ್ತು ಕೊಡಿ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಮುತ್ತುಕೊಡಿ. ಅವರಿಗೆ ದಿನಾ ಮುತ್ತು ಕೊಡ್ತಾ ಹೋಗಿ 'ಮುತ್ತು ಕೊಡುವ ಗೃಹ ಮಂತ್ರಿ ಆಗುತ್ತೀರಿ ಎಂದು ಗೃಹ ಸಚಿವ ಪರಮೇಶ್ವರ್ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.
ಹಿಂದೆ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದ ವೇಳೆ ಲಾಠಿ ಚಾರ್ಜ್ ನಡೆಸದೇ ಮುತ್ತು ಕೊಡಬೇಕಿತ್ತಾ? ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿರುದ್ಧ ಮುತ್ತು ಕೊಡುವ ಗೃಹ ಮಂತ್ರಿ ಎಂದು ವ್ಯಂಗ್ಯ ಮಾಡಿದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಾಗಿ ಲಾಠಿ ಚಾರ್ಜ್ ಮಾಡಲಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಮೇಲೆ ಲಾಠಿ ಚಾರ್ಜ್ ಮಾಡಲಿಲ್ಲ. ಮೀಸಲಾತಿ ಕೇಳಿದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿದರು. ಸಾಬರಿಗೆ ಹೀಗೆ ಮುತ್ತು ಕೊಡ್ತಾ ಇರಿ, ಮುತ್ತು ಕೊಡುವ ಗೃಹ ಮಂತ್ರಿ ಆಗ್ತೀರಿ ಎಂದು ವ್ಯಂಗ್ಯ ಮಾಡಿದರು.
ವಕ್ಫ್ ಮಂಡಳಿ ದೇಶಕ್ಕಂಟಿದ ಕ್ಯಾನ್ಸರ್ ಇದ್ದಂತೆ, ಅದನ್ನು ದೇಶದಿಂದ ತೊಲಗಿಸಬೇಕು: ಶಾಸಕ ಯತ್ನಾಳ್
ಮಾಧ್ಯಮಗಳ ವಿರುದ್ಧ ಯತ್ನಾಳ್ ಗರಂ
ಯತ್ನಾಳ್ ಬಣದ ವಿರುದ್ಧ ವಿಜಯೇಂದ್ರ ಶಕ್ತಿ ಪ್ರದರ್ಶನ ವಿಚಾರ ಮಾಧ್ಯಮಗಳ ಪ್ರಸಾರ ಕಂಡು ಗರಂ ಆದ ಯತ್ನಾಳರು, ನಾನು ಮಾಧ್ಯಮಗಳಲ್ಲಿ ಸುದ್ದಿ ನೋಡಿ ಅಂಜಿ ಹೋದೆ, ನಡುಗಿ ಹೋದೆ, ಅಖಾಡಕ್ಕಿಳಿದ ಯಡಿಯೂರಪ್ಪ, ಯತ್ನಾಳ್‌ಗೆ ಭಾರೀ ಹಿನ್ನಡೆ ಎಂದೆಲ್ಲ ಸುದ್ದಿ ಮಾಡಿದ್ರಿ, ವಾಹ್ ರೇ ವಾಹ್ ಮಾಧ್ಯಮಗಳೇ ಎಂದು ಗರಂ ಆದರು ಮುಂದುವರಿದು, ಯಾರು ಅಖಾಡಕ್ಕಿಳಿದ್ರೆ ಆಗೋದೇನಿದೆ? ಯತ್ನಾಳ್‌ಗೆ ಯಾರೂ ಏನೂ ಮಾಡೋಕೆ ಆಗೋಲ್ಲ ನೀವು ಎರಡು ದಿನ ಇದೇ ಸುದ್ದಿ ಹೊಡೀರಿ ಎಂದ ಯತ್ನಾಳ್.