30 ಅಧಿಕಾರಿಗಳ ಎತ್ತಂಗಡಿ: ಚುರುಕು ಮುಟ್ಟಿಸಿದ ಸಭಾಪತಿ

* ವಿಧಾನಪರಿಷತ್ ಸಚಿವಾಲಯದಲ್ಲಿ ಭಾರೀ ವರ್ಗಾವಣೆ
* ಎ , ಬಿ ಶ್ರೇಣಿಯ ಅಧಿಕಾರಿಗಳು ಮತ್ತು ಸಿ ದರ್ಜೆಯ ನೌಕರರ ವರ್ಗಾವಣೆ ಮಾಡಿ ಆದೇಶ
* 14 ಅಧಿಕಾರಿಗಳು ಮತ್ತು 16 ನೌಕರರ ವರ್ಗಾವಣೆ

Vidhana Parishad Chairman Basavaraj Horatti orders Transfer of more than 30 officers rbj

ಬೆಂಗಳೂರು, (ಆ.20): ವಿಧಾನಪರಿಷತ್ ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, 30 ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ವಿಧಾನ ಪರಿಷತ್​ನ 30 ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆದೇಶಿಸಿದ್ದಾರೆ.  ಈ ಮೂಲಕ ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಯತ್ನಕ್ಕೆ ಮುಂದಾಗಿದ್ದಾರೆ.

ಹಾರ-ತುರಾಯಿ, ಪೊಲೀಸ್ ಗೌರವ ವಂದನೆಗೆ ಬ್ರೇಕ್ ಬೆನ್ನಲ್ಲೇ ಸಿಎಂ ಮತ್ತೊಂದು ಮಹತ್ವದ ನಿರ್ಧಾರ

14 ಎ , ಬಿ  ಅಧಿಕಾರಿಗಳು ಮತ್ತು 16  ಸಿ ದರ್ಜೆ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಅವರ ನಿರ್ದೇಶನದ ಮೇರೆಗೆ ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಆದೇಶ ಹೊರಡಿಸಿದ್ದಾರೆ.

ಸಹಾಯಕರನ್ನೊಳಗೊಂಡ 30 ಜನರನ್ನು ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ. ಸಿಬ್ಬಂದಿಯ ವರ್ಗಾವಣೆ ಕುರಿತು ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅಧಿಕೃತ ಆದೇಶ ಪ್ರಕಟಿಸಿದ್ದಾರೆ.

Latest Videos
Follow Us:
Download App:
  • android
  • ios