ಮಸ್ತು ಮಸ್ತು ಹುಡುಗಿ ಬಂದ್ಳು..! ತುಮಕೂರು ಡಿಸಿ ಸಮ್ಮುಖದಲ್ಲೇ ವಸತಿ ಶಾಲೆ ಬಾಲಕಿಯರೊಂದಿಗೆ ಅಧಿಕಾರಿಗಳ ಭರ್ಜರಿ ಡ್ಯಾನ್ಸ್!
ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಬಾಲಕಿಯರೊಂದಿಗೆ ಅಧಿಕಾರಿಗಳು ಐಟಂ ಸಾಂಗ್‌ಗೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು (ಡಿ.2): ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಬಾಲಕಿಯರೊಂದಿಗೆ ಅಧಿಕಾರಿಗಳು ಐಟಂ ಸಾಂಗ್‌ಗೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು ಬಿ.ಎಚ್. ರಸ್ತೆಯಲ್ಲಿರುವ ಹಾಸ್ಟೆಲ್. ಕಳೆದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದಿದ್ದ ಕಾರ್ಯಕ್ರಮದಲ್ಲಿ ರಾತ್ರಿ ವೇಳೆ ವಸತಿ ನಿಲಯಕ್ಕೆ ಹೋಗಿದ್ದ ಅಧಿಕಾರಿಗಳು. ಬಾಲಕಿಯರೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್. ತುಮಕೂರು ಡಿಸಿ ಶ್ರೀನಿವಾಸ್ ಸಮ್ಮುಖದಲ್ಲೇ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ಕೃಷ್ಣಪ್ಪ ಹಾಗೂ ತುಮಕೂರು ಎಸಿ , ತುಮಕೂರು ತಹಶಿಲ್ದಾರ್ ಸಿದ್ದೇಶ್ ರಿಂದ ನೃತ್ಯ. ಮನಿ ಮನಿ ಕನ್ಯಾ ಮನಿ ಹಾಗೂ ಮಸ್ತ್ ಮಸ್ತ್ ಹುಡುಗಿ ಬಂದ್ಲೂ, ಸುಂಟರಗಾಳಿ ಹಾಗೂ ಜಿಂಗಲಕ್ಕಿ ಬಾ ಹಾಡಿಗೆ ಡ್ಯಾನ್ಸ್ ಮಾಡಿರುವ ಅಧಿಕಾರಿಗಳ ವೃಂದ. ಈ ವೇಳೆ ವಿದ್ಯಾರ್ಥಿನಿಯರ ಮಧ್ಯೆ ಜಿಲ್ಲಾಧಿಕಾರಿ ಶ್ರೀನಿವಾಸರನ್ನು ಹೆಗಲ ಮೇಲೆ ಎತ್ತಿ ಕುಣಿದಿರೋ ಅಧಿಕಾರಿಗಳು.
ತುಮಕೂರು 5 ಮಂದಿ ಆತ್ಮಹತ್ಯೆ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ
ಕನ್ನಡದ ಐಟಮ್ ಸಾಂಗ್, ಕೆಟ್ಟ ಹಾಡುಗಳಿಗೆ ವಿದ್ಯಾರ್ಥಿನಿಯರೊಂದಿಗೆ ಅಧಿಕಾರಿಗಳು ಡ್ಯಾನ್ಸ್ ಮಾಡಿರುವ ಸಂಬಂಧ ಸಮಾಜಿಕ ಹೋರಾಟಗಾರ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಬಾಲಕಿಯರ ವಸತಿ ನಿಲಯಕ್ಕೆ ಹೋಗಿ ಡ್ಯಾನ್ಸ್ ಮಾಡಿರುವ ಅಧಿಕಾರಿಗಳು ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಅಧಿಕಾರಿಗಳು ಅಪ್ರಾಪ್ತ ಬಾಲಕಿಯರ ಮುಂದೆ ಆ ರೀತಿ ಡ್ಯಾನ್ಸ್ ಮಾಡಿರುವುದು ತಪ್ಪು. ಅದು ಕೂಡ ಐಟಮ್ ಸಾಂಗ್ ಗಳಿಗೆ ಡ್ಯಾನ್ಸ್ ಮಾಡಿರುವ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯ ಕೇಳಿಬಂದಿದೆ.
ತುಮಕೂರು: ಹಾವು ಕಚ್ಚಿದ್ದು ಗೊತ್ತಾಗದೇ ವೈದ್ಯ ವಿದ್ಯಾರ್ಥಿ ಸಾವು!