ತುಮಕೂರು 5 ಮಂದಿ ಆತ್ಮಹತ್ಯೆ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ

ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧ ಇಬ್ಬರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

Tumkur 5 suicide case: 2 judicial custody snr

ತುಮಕೂರು: ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧ ಇಬ್ಬರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಆರೋಪಿಗಳಾದ ಖಲಂದರ್(45) ಪತ್ನಿ ಜರೀನಾ(38) ಎಂಬುವರಿಗೆ ನ್ಯಾಯಾಂಗ ಬಂಧನಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಒಟ್ಟು ಐವರು ಆರೋಪಿಗಳ ಹೆಸರನ್ನು ಡೆತ್ ನೋಟಲ್ಲಿ ಮೃತ ಗರೀಬ್‌ ಸಾಬ್ ಬರೆದಿದ್ದರು. ಕಳೆದ ಭಾನುವಾರ ಸದಾಶಿವನಗರದ ಬಾಡಿಗೆ ಮನೆಯಲ್ಲಿ ಗರೀಬ್‌ ಸಾಬ್‌ ದಂಪತಿ ಸಾವಿಗೆ ಶರಣಾಗಿದ್ದರು.

ಐವರು ಆತ್ಮಹತ್ಯೆ

ತುಮಕೂರು (ನ.26): ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಸದಾಶಿವನಗರದ ಮನೆಯೊಂದರಲ್ಲಿ ನಡೆದಿದೆ. ಪತಿ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30) ,ಮಗಳು ಹಾಜಿರಾ (14), ಗಂಡು ಮಕ್ಕಳಾದ ಮೊಹ್ಮದ್ ಸುಭಾನ್ (10), ಮೊಹಮದ್ ಮುನೀರ್ (8) ಮೃತರು. 4 ತಿಂಗಳುಗಳ ಹಿಂದೆ ತುಮಕೂರು ನಗರದ ಸದಾಶಿವನಗದ 3ನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.  ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಎರಡು ಪುಟಗಳ ಡೆತ್‌ನೋಟ್​ನಲ್ಲಿ ಉಲ್ಲೇಖಿಸಲಾಗಿದೆ. ಕುಟುಂಬದವರು  ‌ನಗರದ ಮೇಳೆಕೊಟೆಯಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಆತ್ಮಹತ್ಯೆಗೂ ಮೊದಲು ವಿಡಿಯೋ ಸಹ ಮಾಡಿದ್ದರು. ಸದ್ಯ ಸ್ಥಳಕ್ಕೆ ಎಸ್‌ಪಿ ಅಶೋಕ್ ವೆಂಕಟ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಿಲಕ್‌ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ: ನಮಗೆ 7.30ಗೆ ಕರೆ ಬಂದಿದೆ.  ಒಂದೇ ಮನೆಯಲ್ಲಿ ಐವರು ಇಬ್ಬರು ನೇಣಿಗೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿಬಂತು. ಐದು ನಿಮಿಷಕ್ಕೆ ನಾವು ಸ್ಥಳಕ್ಕೆ‌ಬಂದಿದ್ವಿ. ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಮೂವರು ಮಕ್ಕಳ ಮೃತ ದೇಹ ಹಾಸಿಗೆಯಲ್ಲಿವೆ. ಮೃತರು ಶಿರಾ ತಾಲ್ಲೂಕು ಲಕ್ಕನಹಳ್ಳಿಯವರು. 

ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್

ಸಾಯುವ ಮುನ್ನ ಸಂಬಂಧಿಕರಿಗೆ ವಿಡಿಯೋ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಕಬಾಬ್ ಅಂಗಡಿ ಇಟ್ಟುಕೊಂಡಿದ್ದರು.  ಒಂದು ವರ್ಷದಿಂದ ಸದಾಶಿವನಗರದಲ್ಲಿ ವಾಸಿಸುತ್ತಿದ್ದರು ಎಂದು ತುಮಕೂರು ಎಸ್ಪಿ ಅಶೋಕ್ ಕೆ.ವಿ ಹೇಳಿಕೆ ನೀಡಿದ್ದಾರೆ.

ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದ ಗರೀಬ್ ಸಾಬ್: ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದೆ, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ. ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ. ಊಟ ಮಾಡೋಕು ಕಷ್ಟ ಆಗಿದೆ. ಊರಲ್ಲಿದ್ದಾಗ ಹೆಂಡತಿ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ರು. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ. ಮನೆ ವಸ್ತುಗಳನ್ನ ನೀವು ತಗೋಳಿ. 

ಹದಿನೈದು ಸಾವಿರಾನ ಜರಿನ ಆಂಟಿಗೆ ಕೊಡಿ. ನಮ್ಮ ಬೈಕ್ ನ ನಮ್ಮ ಹಿರಿಯಣ್ಣ ಅಜಾಜ್ ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ. ದೊಡ್ಡಮ್ಮ ಬೇಕಾದ ವಸ್ತುಗಳನ್ನ ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು. ತುಂಬಾ ವಿಷಯ ಇದೆ, ಆದ್ರೆ ಇದ್ರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ. ಮತ್ತರ್ ಮಾಮನಿಗೆ ಕೊನೆಯ ನಮಸ್ಕಾರಗಳು. ನಮಗೆ ಊಟ ಅಕ್ಕಿ ಕೊಟ್ಟಿದ್ದೀರಾ, ಅದಕ್ಕೆ ನಿಮಗೇ ಮೆಳೇಕೋಟೆಯಲ್ಲಿರೋ ಅಂಗಡಿಯಲ್ಲಿರೋ ಸಾಮಾನುಗಳು, ಮತ್ತೆ ಅದರಲ್ಲಿ ಐದು ಸಾವಿರ ಇಟ್ಟಿದ್ದೀವಿ. ಒಂದು ತಿಂಗಳು ಬಾಡಿಗೆ 2000 ರೂಪಾಯಿ ಕೊಡಬೇಕು. ಸದಾಶಿವನಗರದ ಮೂರನೇ ಬಿ ಮುಖ್ಯರಸ್ತೆಯಲ್ಲಿರುವ, ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದೀರಾ. ನಮಗೆ ಯಾರಾದ್ರೂ ಸಹಾಯ ಮಾಡಿದ್ರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದ್ರು. 

ನಾವು ಅವರು ಹೇಳಿದಂತೆ ಕೇಳಬೇಕಿತ್ತು, ಇಲ್ಲವಾದ್ರೆ ಅವರು ನಮ್ಮ ಜೊತೆ ಜಗಳ ಮಾಡ್ತಿದ್ರು. ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಾಳೆ. ನಮ್ಮ ಸಾವಿಗೆ ಐದು ಜನರೇ ಕಾರಣ. ನಮ್ಮ ಮನೆಯ ಕೆಳಗಿನ ಖಲಂದರ್, ಅವನ ಮಗಳು ಸಾನಿಯಾ, ಅವನ ಹಿರಿಯ ಮಗ, ಮಹಡಿ ಮನೆಯ ಶಬಾನಾ, ಮತ್ತು ಅವಳ ಮಗಳು ಸಾನಿಯಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ. ನಮ್ಮ ಸಾವಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ. ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ಕೊತ್ತೀವಿ. ನಮ್ಮ ದೇಹವನ್ನ ಪೋಸ್ಟ್ ಮಾರ್ಟಮ್ ಮಾಡಬಾರದು. ಇನ್ನೂ ವಿಷಯ ಫೋನ್ ನಲ್ಲಿದೆ. ಇಂತಿ ನಿಮ್ಮ ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

Latest Videos
Follow Us:
Download App:
  • android
  • ios