ಮಗಳು ಒತ್ತಡದಲ್ಲಿದ್ದಾಳೆ, ಆಕೆಯ ಹೇಳಿಕೆ ಪರಿಗಣಿಸಬೇಡಿ, ಸಮಯ ಕೊಡಿ: ಪೋಷಕರು

ಸೀಡಿ ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುತ್ತಾಳೆ, ಹೇಳಿಕೆ ದಾಖಲಿಸುತ್ತಾಳೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಯುವತಿ ಇಂದು ಹಾಜರಾಗುವುದಿಲ್ಲ, ಅರ್ಜಿ ಪರಿಶೀಲನೆಗೆ ಕಾಲಾವಕಾಶ ಬೇಕು ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. 

Victim Lady Will Not Appear before Magistrate today Says lawyer Jagadish hls

ಬೆಂಗಳೂರು (ಮಾ. 29): ಸೀಡಿ ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುತ್ತಾಳೆ, ಹೇಳಿಕೆ ದಾಖಲಿಸುತ್ತಾಳೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಯುವತಿ ಇಂದು ಹಾಜರಾಗುವುದಿಲ್ಲ, ಅರ್ಜಿ ಪರಿಶೀಲನೆಗೆ ಕಾಲಾವಕಾಶ ಬೇಕು ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. 

ಯುವತಿ ಹೇಳಿಕೆ ಕೇಸ್‌ಗೆ ಟ್ವಿಸ್ಟ್ ಕೊಡಲಿದೆ? ಸಾಧ್ಯತೆಗಳೇನು? ಕಾನೂನು ತಜ್ಞರು ಹೇಳೋದಿದು

ಇನ್ನೊಂದು ಕಡೆ ಬೆಳಗಾವಿಯಲ್ಲಿ ಯುವತಿಯ ಪೋಷಕರು ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಮಗಳು ಒತ್ತಡದಲ್ಲಿದ್ದಾಳೆ. ಆಕೆಯಿಂದ ಹೇಳಿಕೆ ಪಡೆಯಬಾರದು. ಒಂದು ವೇಳೆ ಆಕೆ ಹೇಳಿಕೆ ಕೊಟ್ಟರೂ ಪರಿಗಣಿಸಬಾರದು. ಕಾಲಾವಕಾಶ ಕೊಡಿ' ಎಂದಿದ್ದಾರೆ. ಡಿಕೆಶಿ ಹೇಳಿದಂತೆ ನನ್ನ ಅಕ್ಕ ಮಾಡುತ್ತಿದ್ದಾಳೆ. ಅವರೇ ಒತ್ತಡ ಹೇರುತ್ತಿದ್ದಾರೆ. ಮೊದಲು ಅವರನ್ನು ಒದ್ದು ಒಳಹಾಕಿ ಎಂದು ಸಹೋದರ ಹೇಳಿದ್ದಾರೆ. ನಾವು ಆಕೆಯ ಜೊತೆ ಈಗ ಸಂಪರ್ಕದಲ್ಲಿಲ್ಲ. ಆಕೆಯ ಫೋನ್ ಕಸಿದುಕೊಂಡಿದ್ದಾರೆ. ಸಂಪರ್ಕ ಮಾಡಲು ಬಿಡುತ್ತಿಲ್ಲ. ಡಿಕೆಶಿ ಹೇಳಿದಂತೆ ಕೇಳುತ್ತಿದ್ದಾಳೆ. ನಮ್ಮ ಮಗಳನ್ನು ನಮಗೆ ಒಪ್ಪಿಸಿಬಿಡಿ ಎಂದು ತಾಯಿ ಭಾವುಕರಾದರು. 
 

Latest Videos
Follow Us:
Download App:
  • android
  • ios