Asianet Suvarna News Asianet Suvarna News

Kodagu ರಾಷ್ಟ್ರಮಟ್ಟದ ಸುದ್ದಿಯಾಯ್ತು ಭಜರಂಗದಳದಿಂದ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ

  • ಕೊಡಗಿನ ಸಾಯಿ ಶಂಕರ ಶಾಲೆಯಲ್ಲಿ ನಡೆಯಿತಾ ಬಜರಂಗ ದಳದಿಂದ ತರಬೇತಿ
  • ಹಿಜಾಬ್ ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ  ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದೇಗೆ
  • ಭಜರಂಗದಳದ ತರಬೇತಿಯಲ್ಲಿ ನೂರಾರು ಯುವಕರು ಭಾಗಿ 
  • ತರಬೇತಿಯಲ್ಲಿ ಯುವಕರಿಗೆ ತ್ರಿಶೂಲ ದೀಕ್ಷೆ ನೀಡಿರುವ ಫೋಟೋಗಳು ವೈರಲ್
VHP Bajrang Dal give gun training  and Trishula deekshe at kodagu  gow
Author
Bengaluru, First Published May 16, 2022, 3:38 PM IST

ಕೊಡಗು (ಮೇ.16): ಮಡಿಕೇರಿಯಲ್ಲಿ (Madikeri) ಭಜರಂಗದಳ (Bajrang Dal) ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ (Trishula Deekshe),  ಶಸ್ತ್ರಾಸ್ತ್ರ ತರಬೇತಿ (Weapon training)  ನಡೆದಿದ್ದು, ಕೊಡಗಿನ ಸಾಯಿ ಶಂಕರ ಶಾಲೆಯಲ್ಲಿ ನಡೆದಿರುವ ಈ ಕಾರ್ಯಕ್ರಮ ಈಗ ರಾಷ್ಟ್ರಮಟ್ಟದಲ್ಲಿ ಚರ್ಚಿತ ವಿಷಯವಾಗಿದೆ. ಶಾಲಾವರಣದ ಒಳಗೆ ಹಿಜಾಬ್ ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ ಸಂಘ ಪರಿವಾರದಿಂದ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದೇಗೆ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ.

"

ಮೇ .5ರಿಂದ 11ರವರೆಗೆ ನಡೆದಿದ್ದ ಈ ತರಬೇತಿಯಲ್ಲಿ ನೂರಾರು ಯುವಕರು ಭಾಗಿಯಾಗಿದ್ದರು. ತರಬೇತಿಯಲ್ಲಿ ಯುವಕರಿಗೆ ತ್ರಿಶೂಲ ದೀಕ್ಷೆ  ಜೊತೆಗೆ ಗನ್ ಟ್ರೈನಿಂಗ್ (gun training) ಕೂಡ ನೀಡಲಾಗಿತ್ತು. ಈ ಕುರಿತ ಫೋಟೋಗಳನ್ನು ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ  ಶಿಕ್ಷಣ ಸಚಿವ ಬಿ. ಸಿ ನಾಗೇಶ್ (BC Nagesh) ಅವರಿಗೆ ಜೊತೆಗೆ  ಕೊಡಗು (Kodagu) ಎಸ್ ಪಿ ಸೇರಿದಂತೆ ಪ್ರಮುಖರೆಲ್ಲರಿಗೆ ಟ್ಯಾಗ್ ಮಾಡಿದ್ದರು.

 

ವಿಚಾರ ಹಬ್ಬುತ್ತಿದ್ದಂತೆಯೇ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ  ಭಜರಂಗದಳ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ, 116 ಕಾರ್ಯಕರ್ತರಿಗೆ ಶಾರೀರಿಕ, ಮಾನಸಿಕ ಸದೃಢಕ್ಕೆ ಶಿಬಿರ ಏರ್ಪಡಿಸಿದ್ದೆವು. ಬೆಳಗ್ಗೆ 4.15ರಿಂದ ರಾತ್ರಿ 10.15ರವರಗೆ ಶಿಬಿರ ತರಬೇತಿ ಇತ್ತು. ಅಲ್ಲಿ ಬಳಸಿರುವುದು ಏರ್ ಗನ್, ನಾರ್ಮ್ಸ್ ಆಕ್ಟ್ ನಲ್ಲಿ ಬರಲ್ಲ. ತ್ರಿಶೂಲವೂ ನಾರ್ಮ್ಸ್ ಆಕ್ಟ್ ನಲ್ಲಿ ಬರಲ್ಲ, ಶಾರ್ಪ್ ಇಲ್ಲ, ಧರ್ಮ ಚಿಂತನೆಯಲ್ಲಿ ಕೊಟ್ಟಿದ್ದೇವೆ. ದೇಶದ 33 ರಾಜ್ಯದ ಎಲ್ಲಾ ಕಡೆ ಪ್ರತಿವರ್ಷ ಈ ತರಬೇತಿ  ನಡೆಯುತ್ತದೆ.  ಹಿಜಾಬ್ ಹಾಗೂ ಈ ವಿಚಾರಕ್ಕೆ ಯಾವುದೇ ಸಂಬಂಧವಿಲ್ಲ. ಹುಬ್ಬಳ್ಳಿಯಲ್ಲಿ ಮುಲ್ಲಾ ಕಮಿಷನರ್ ಗಾಡಿ ಮೇಲೆ ನಿಂತು ಪ್ರಚೋದನೆ ಕೊಡುತ್ತಾನೆ. ಪೊಲೀಸರು ಬಂದೂಕು ಇಟ್ಕೊಂಡು ಕಾನೂನಿಗೆ ತಲೆಬಾಗಿ ಸಮಾಧಾನದಲ್ಲಿದ್ದರು.  ಪಿ.ಎಫ್.ಐ, ಎಸ್.ಡಿ.ಪಿ.ಐ ಅವರಿಗೆ ಭಜರಂಗದಳದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಭಜರಂಗದಳ ಯಾವುದೇ ಕಾರಣಕ್ಕೂ ಕಾನೂನನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Udupi ನಮ್ಮದೇವಾಲಯ ಬಿಟ್ಟುಕೊಡಿ, ನಿಮ್ಮ ಮಸೀದಿ ಬಿಟ್ಟು ಕೊಡೋಣ

ಇನ್ನು ಈ ವಿವಾದದ ಬಗ್ಗೆ ಮಾತನಾಡಿರುವ ಕೊಡಗು ಡಿಡಿಪಿಐ ವೇದಮೂರ್ತಿ, ಸಂಘಪರಿವಾರದ ಶೌರ್ಯ ಪ್ರಶಿಕ್ಷಾ ವರ್ಗ ಶಿಬಿರಕ್ಕೆ ಶಿಕ್ಷಣ ಇಲಾಖೆ ಅನುಮತಿ ಕೊಟ್ಟಿಲ್ಲ. ಇಂದೇ ಶಾಲೆಗೆ ನೋಟಿಸ್  ನೀಡಲಾಗುವುದು. ನಮ್ಮ ಗಮನಕ್ಕೆ ಬಂದ ತಕ್ಷಣವೇ ಆ ಶಾಲೆಗೆ ನೋಟಿಸ್ ನೀಡುತ್ತಿದ್ದೇವೆ.  ನೋಟಿಸ್ ನೀಡಿ ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇಂತಹ ಶಿಬಿರಗಳಿಗೆ ಶಾಲೆಗಳಲ್ಲಿ ನಾವು ಅನುಮತಿ‌ ನೀಡುವ ಹಾಗೆ ಇಲ್ಲ.  ನಮ್ಮ ಬಳಿ‌ ಅವರು ಅನುಮತಿಯೂ ಕೇಳಿಲ್ಲ, ನಾವು ಅವರಿಗೆ ಅನುಮತಿ ನೀಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಮುಂದಾಯ್ತಾ ಕರ್ನಾಟಕ ಶಿಕ್ಷಣ ಇಲಾಖೆ!?

ವಿವಾದಕ್ಕೆ ಸಂಬಂಧಿಸಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರು ಮಾತನಾಡಿ, ಸಂಘಪರಿವಾರದ ಶೌರ್ಯ ಪ್ರಶಿಕ್ಷಾ ವರ್ಗ ಶಿಬಿರ ವಿಚಾರ ಸಾಮಾಜಿಕ ಜಾಲತಾಣದಿಂದ ತಿಳಿದುಬಂದಿದೆ. ಅವರು ಶಾಲೆಯಿಂದ‌ ಅನುಮತಿ ಪಡೆದುಕೊಂಡು ಶಿಬಿರವನ್ನು ನಡೆಸಿದ್ದಾರೆ. ಅವರು ಶಸ್ತ್ರಾಸ್ತ್ರ ತರಬೇತಿ ಕೊಟ್ಟಿಲ್ಲ, ಈ ಬಗ್ಗೆ ಯಾರೂ ನಮಗೆ ದೂರನ್ನೂ ಕೊಟ್ಟಿಲ್ಲ. ಅವರು ಶಿಬಿರದಲ್ಲಿ ಬಳಸಿರುವ ಏರ್ ಗನ್ ಖರೀದಿ ಮತ್ತು ಬಳಕೆಗೆ ಅನುಮತಿ ಬೇಕಿಲ್ಲ. ಅವರು ಶಿಬಿರದಲ್ಲಿ ಬಳಸಿರುವ ಏರ್ ಗನ್ ಖರೀದಿ ಮತ್ತು ಬಳಕೆಗೆ ಅನುಮತಿ ಬೇಕಿಲ್ಲ. ಈ ಬಗ್ಗೆ ಸಾಮಾಜಿಕ‌ ಜಾಲತಾಣದ ಮೂಲಕ ಪೊಲೀಸ್ ಇಲಾಖೆಗೆ ಮಾಹಿತಿ ಸಿಕ್ಕಿದೆ. ಈಗಾಗಲೇ  ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ.  ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios