Asianet Suvarna News Asianet Suvarna News

ಬೆಂಗಳೂರು: ಆರ್‌ಎಸ್‌ಎಸ್‌ ಜ್ಯೇಷ್ಠ ಪ್ರಚಾರಕ ಮದನ್‌ದಾಸ್‌ ದೇವಿ ಇನ್ನಿಲ್ಲ

ಬೆಂಗಳೂರಿನ ಸಂಘದ ಕಾರ್ಯಾಲಯ ‘ಕೇಶವ ಕೃಪಾ’ದಲ್ಲಿ ಸಂಘದ ಪ್ರಮುಖರು ಹಾಗೂ ಬಿಜೆಪಿ ಮುಖಂಡರು ಮದನ್‌ದಾಸ್‌ ದೇವಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಇಂದು ಬೆಳಗ್ಗೆ 11ಗಂಟೆಗೆ ಮಹಾರಾಷ್ಟ್ರದ ಪುಣೆಯ ವೈಕುಂಠ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

Veteran RSS Leader Madan Das Devi Passed Away in Bengaluru grg
Author
First Published Jul 25, 2023, 7:29 AM IST | Last Updated Jul 25, 2023, 7:29 AM IST

ಬೆಂಗಳೂರು(ಜು.25):  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದ, ಜ್ಯೇಷ್ಠ ಪ್ರಚಾರಕ ಹಾಗೂ ಈ ಹಿಂದೆ ಎಬಿವಿಪಿಯ ಸಂಘಟನಾ ಕಾರ್ಯದರ್ಶಿಗಳಾಗಿದ್ದ ಮದನ್‌ದಾಸ್‌ ದೇವಿ ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು.

ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರ್ಮಾಳ ಗ್ರಾಮದಲ್ಲಿ 1942ರ ಜುಲೈ 9ರಂದು ಜನಿಸಿದ್ದ ಅವರು ಎಂ.ಕಾಂ., ಎಲ್‌ಎಲ್‌ಬಿ ಪದವೀಧರರು. 1964ರಿಂದ ಎಬಿವಿಪಿಯಲ್ಲಿ ತೊಡಗಿಸಿಕೊಂಡ ಅವರು 1970ರಿಂದ 1992ರವರೆಗೆ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ದೇಶಾದ್ಯಂತ ಸಂಘಟನೆ ಬೆಳೆಸಿದರು. 1991ರಿಂದ ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರಕ್‌ ಪ್ರಮುಖ್‌ ಆಗಿ, 1993ರಲ್ಲಿ ಸಂಘದ ಸಹ-ಸರಕಾರ್ಯವಾಹರಾಗಿ, 2009ರಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ವಯೋಸಹಜ ಕಾರಣದಿಂದ ವಿಶ್ರಾಂತಿ ಹಾಗೂ ಆರೈಕೆಯಲ್ಲಿದ್ದ ಮದನ್‌ದಾಸ್‌ ದೇವಿ ಅವರು ಸೋಮವಾರ ಮುಂಜಾನೆ ನಿಧರಾದರು.

ವಿಜಯಪುರ: ಲೋಕಾಯುಕ್ತ ಡಿವೈಎಸ್ಪಿ ಹೃದಯಘಾತದಿಂದ ಸಾವು

ಅಂತಿಮ ದರ್ಶನ:

ಬೆಂಗಳೂರಿನ ಸಂಘದ ಕಾರ್ಯಾಲಯ ‘ಕೇಶವ ಕೃಪಾ’ದಲ್ಲಿ ಸಂಘದ ಪ್ರಮುಖರು ಹಾಗೂ ಬಿಜೆಪಿ ಮುಖಂಡರು ಮದನ್‌ದಾಸ್‌ ದೇವಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮಂಗಳವಾರ ಬೆಳಗ್ಗೆ 11ಗಂಟೆಗೆ ಮಹಾರಾಷ್ಟ್ರದ ಪುಣೆಯ ವೈಕುಂಠ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಸಂತಾಪ:

ಮದನ್‌ದಾಸ್‌ ದೇವಿ ಅವರ ನಿಧನಕ್ಕೆ ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios