ಮೇ 30 ರಂದು ಬೆಳ್ಳಿಯಂತೆ ಹೊಳೆಯಲಿದೆ ಶುಕ್ರಗ್ರಹ: ಬರಿಗಣ್ಣಿಂದಲೂ ನೋಡಬಹುದು
ಸುಮಾರು 19 ತಿಂಗಳಿಗೊಮ್ಮೆ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಗ್ರಹ ಮೇ 30 ರಂದು ಭೂಮಿಗೆ ಸಮೀಪದಲ್ಲಿ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯಲಿದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಉಡುಪಿ (ಮೇ 29): ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಗ್ರಹ ಮೇ 30 ರಂದು ಭೂಮಿಗೆ ಸಮೀಪದಲ್ಲಿ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯಲಿದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಮೇ 30ರಿಂದ ಜುಲೈ ಅಂತ್ಯದವರೆಗೂ ಹೊಳೆಯುತ್ತಾ ಆಗಸ್ಟ್ ಪ್ರಾರಂಭದಲ್ಲಿ ಕಣ್ಮರೆಯಾಗುತ್ತದೆ. ಆಗಸ್ಟ್ 8 ರಿಂದ ಆಗಸ್ಟ್ 19 ರವರೆಗೆ ಸೂರ್ಯನಿಗೆ ನೇರ ಬಂದು ಕಾಣದಾದಾಗ “ ಅಸ್ತ “ಎನ್ನುವರು.ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಗೋಚರವಾಗಲಿದೆ. ಈಗ ಮೇ 30 ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ , ಪ್ರಭೆ ಹೆಚ್ಚಿಸಿ ಕೊಳ್ಳುತ್ತಾ ಜುಲೈ 7ರಂದು ಅತೀ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ. ಶುಕ್ರ ಈಗ ಭೂಮಿಯಿಂದ ಸುಮಾರು 15 ಕೋಟಿ ಕಿಮೀ ದೂರದಿಂದ ಆಗಸ್ಟ್ 8ರ ಹೊತ್ತಿಗೆ 4 ಕೋಟಿ ಕಿ.ಮೀ. ಗೆ ಸಮೀಪಿಸುತ್ತದೆ.
ಮದುವೆಯಾದ್ರೆ ನೀವಿಬ್ರೂ ಉಳಿಯಲ್ಲ, ಹೆಂಗ್ ಮದ್ವೆ ಆಗ್ತೀರೋ ಆಗ್ರಿ: ಪ್ರೇಮಿಗಳಿಗೆ ಪ್ರಾಣ ಬೆದರಿಕೆ
ಸೂರ್ಯನಿಂದ 11 ಕೋಟಿ ಕಿ.ಮೀ ದೂರದಲ್ಲಿರುವ ಶುಕ್ರಗ್ರಹ: ಹೀಗೆ ಶುಕ್ರ ಗ್ರಹ ಕಾಣಿಸಲು ಪ್ರಮುಖ ಕಾರಣ ಶುಕ್ರ ಮತ್ತು ಬುಧ ಗ್ರಹದಂತೆ ಸೂರ್ಯ ಭೂಮಿಯ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಗ್ರಹ ಸುಮಾರು 6 ಕೋಟಿ ಕಿ.ಮೀ, ಶುಕ್ರ 11 ಕೋಟಿ ಕಿಮೀ ಹಾಗೂ ಭೂಮಿ 15 ಕೋಟಿ ಕಿಮೀ ದೂರವಿದೆ. ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಕಾಣುತ್ತದೆ. ಸಂಜೆ ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂಬುಧ 27 ಡಿಗ್ರಿ ಎತ್ತರದಲ್ಲಿ ಎಂದು ತಿಳಿಸಿದ್ದಾರೆ.
ಅತೀ ಸಮೀಪದ ಅಂತರದಲ್ಲಿ 4 ಕೋಟಿ ಕಿ.ಮೀ ಶುಕ್ರ ಪ್ರತ್ಯಕ್ಷ: ಮತ್ತೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಲಿದೆ. ಸೂರ್ಯನಿಂದ ಶುಕ್ರ ಸುಮಾರು 11 ಕೋಟಿ ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತೀ ಸಮೀಪದ ಅಂತರದಲ್ಲಿ 4 ಕೋಟಿ ಕಿ.ಮೀ. ( ಆಗಸ್ಟ್ 13 ಇನ್ಫೀರಿಯರ್ ಕಂಜಂಕ್ಷನ್ ) ನಂತರ 2025ರ ಜನವರಿಯಲ್ಲಿ ಅತ್ಯಂತ ದೂರ 26 ಕೋಟಿ ಕಿ.ಮೀ. ( ಸುಪೀರಿಯರ್ ಕಂಜಂಕ್ಷನ್.) ಗ್ರಹಗಳಲ್ಲಿ ಬರೀಗಣ್ಣಿಗೆ ಶುಕ್ರನೇ ಚೆಂದ ಕಾಣಿಸುತ್ತಾನೆ.
ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಎಡವಟ್ಟು, ಮೋದಿ ಬದಲು ನರಸಿಂಹರಾಯರು ಎಂದ ಸಿಎಂ!
ಸುಮಾರು 95% ಇಂಗಾಲದ ಆಕ್ಸೈಡುಗಳ ವಾತಾವರಣ ಸ್ವಲ್ಪ ರಂಜಕದ ಡೈಆಕ್ಸೈಡುಗಳಿಂದ ಅತೀ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಫಳ ಫಳ ಹೊಳೆಯುತ್ತದೆ.ದೂರದರ್ಶಕದಲ್ಲೀಗ ಶುಕ್ರಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗಲಿದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.