ಬೆಂಗಳೂರು(ಜ,06): ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ ರವರ ಪತ್ನಿ ಹಾಗೂ ಶ್ರೀ ದಿನೇಶ್ ಗುಂಡೂರಾವ್ ರವರ ತಾಯಿಯವರಾದ ಶ್ರೀಮತಿ ವರಲಕ್ಷ್ಮಿ ಗುಂಡೂರಾವ್ ಅವರು ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಬುಧವಾರ 6.1.2021 ರಂದು ಅವರ ದೇವನಹಳ್ಳಿ ತೋಟದಲ್ಲಿ ನಡೆಸಲು ಕುಟುಂಬದವರು ನಿಶ್ಚಯಿಸಿದ್ದಾರೆ. ಇಂದು ದೇವನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಎಂಜಿನಿಯರಿಂಗ್‌ ಸೀಟು ಪಡೆಯಲು ಕೊನೆಯ ಅವಕಾಶ

ದಿನೇಶ್ ಗುಂಡು ರಾವ್ ಐಎನ್‌ಸಿಯ ಗೋವಾ, ತಮಿಳುನಾಡು ಮತ್ತು ಪುದುಚೇರಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಸ್ತುತ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು.