Asianet Suvarna News Asianet Suvarna News

ಮೀಸಲಾತಿ ಹೋರಾಟಕ್ಕೆ ಬೆಂಬಲ: ವಾಲ್ಮೀಕಿ ಶ್ರೀಗಳಿಂದ ಸಿದ್ದುಗೆ ಧನ್ಯವಾದ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಧನ್ಯವಾದ ಸಲ್ಲಿಸಿದ್ದಾರೆ.

valmiki swamiji congratulated siddaramaiah over support reservation struggle gvd
Author
First Published Oct 28, 2022, 3:15 AM IST

ಬೆಂಗಳೂರು (ಅ.28): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಧನ್ಯವಾದ ಸಲ್ಲಿಸಿದ್ದಾರೆ.

ಗುರುವಾರ ಸಿದ್ದರಾಮಯ್ಯ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ ಪ್ರಸನ್ನಾನಂದಪುರಿ ಸ್ವಾಮೀಜಿ, ಎಸ್ಟಿಮೀಸಲಾತಿಯನ್ನು ನಾಗಮೋಹನ ದಾಸ್‌ ಸಮಿತಿ ವರದಿ ಶಿಫಾರಸಿನ ಅನ್ವಯ ಶೇ.3 ರಿಂದ 7ಕ್ಕೆ ಹೆಚ್ಚಳ ಮಾಡುವಂತೆ ಸುದೀರ್ಘ ಹೋರಾಟ ನಡೆಸಿದೆವು. ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಸಹಕರಿಸಿದ ನಿಮಗೆ ಧನ್ಯವಾದ ತಿಳಿಸುತ್ತೇವೆ. ಜತೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಮೋಹನ ದಾಸ್‌ ಸಮಿತಿ ರಚನೆಯಲ್ಲೂ ನಿಮ್ಮ ಪಾತ್ರ ಇದೆ. ಇದನ್ನು ನಮ್ಮ ಸಮಾಜ ಮರೆಯಲು ಸಾಧ್ಯವಿಲ್ಲ ಎಂದು ಧನ್ಯವಾದ ಸಲ್ಲಿಸಿ ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿದ್ದಾರೆ ತಿಳಿದುಬಂದಿದೆ.

ರಾಹುಲ್‌ ಗಾಂಧಿಯಂತಹ ಸಾಹಸ ಯಾರೂ ಮಾಡಿಲ್ಲ: ಸಿದ್ದರಾಮಯ್ಯ

ಮೀಸಲಾತಿ ಹೆಚ್ಚಳಕ್ಕೆ ನಾಗಮೋಹನ ದಾಸ್‌ ಸಮಿತಿ ವರದಿಯೇ ಆಧಾರ. ಈ ವರದಿ ಆಧಾರದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರಕವಾಗಿ ಸ್ಪಂದಿಸಿ ಸುಗ್ರೀವಾಜ್ಞೆ ಮೂಲಕ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಇದಕ್ಕೆ ಸರ್ಕಾರ ಹಾಗೂ ಪ್ರತಿಪಕ್ಷ ನಾಯಕರು ಇಬ್ಬರೂ ಅಭಿನಂದನೆಗೆ ಅರ್ಹರು ಎಂದು ಸ್ವಾಮೀಜಿ ಅವರು ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿದರು ಎಂದು ಮೂಲಗಳು ತಿಳಿಸಿವೆ.

ಮೀಸಲಾತಿ ಹೆಚ್ಚಳಕ್ಕೆ ಸರ್ಕಾರಕ್ಕೆ ಕೃತಜ್ಞತೆ: ಪರಿಶಿಷ್ಟ ಸಮುದಾಯಗಳ ದಶಕಗಳ ಬೇಡಿಕೆ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಶಿವಪುತ್ರ ಮೇತ್ರಿ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟಸಮುದಾಯಗಳ ಬಹುದಶಕಗಳ ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟ ಸಹೋದ್ಯೊಗಿಗಳ ಸಹಕಾರದಿಂದ ಪರಿಶಿಷ್ಟಜಾತಿಗೆ 15 ರಿಂದ 17 ಹಾಗೂ ಪರಿಶಿಷ್ಟಪಂಗಡಗಳಿಗೆ 3 ರಿಂದ 7 ರವರೆಗೆ ಮೀಸಲಾತಿ ಹೆಚ್ಚಿಸಿ ಸುಗ್ರಿವಾಜ್ಞೆಯ ಮೂಲಕ ರಾಜ್ಯಪಾಲರ ಅಂಕಿತ ಪಡೆದು ಜಾರಿಗೆ ತಂದ ಮುಖ್ಯಮಂತ್ರಿಗಳ ಕಾರ್ಯಅಭಿನಂದನಿಯ ಎಂದು ತಿಳಿಸಿದರು.

ಮತ್ತೊಮ್ಮೆ ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಸಿದ್ದು ಆಪ್ತ ಹೊಳಬಸು ಶೆಟ್ಟರ

ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ದಲಿತ, ಅಲ್ಪಸಂಖ್ಯಾತ ಹಿಂದುಳಿದ ಸಮುದಾಯಗಳನ್ನು ಓಟ್‌ ಬ್ಯಾಂಕ್‌ನ್ನಾಗಿ ಬಳಸಿಕೊಂಡು ಪರ್ಯಾಯವಾಗಿ ಆ ಸಮುದಾಯಗಳನ್ನು ಕಡೆಗಣಿಸುತ್ತ ಬಂದಿದೆ. ಆದರೆ, ನಮ್ಮ ಬಿಜೆಪಿ ಸರ್ಕಾರ ದೇಶದ ಪ್ರತಿಯೊಂದು ಸಮುದಾಯವನ್ನು ಗಣನೆಗೆ ತೆಗೆದುಕೊಂಡು ಅವುಗಳನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಪ್ರಶಾಂತ ಪವಾರ್‌, ಪಪಂ ಸದಸ್ಯ ಬಾಬು ಬಜಂತ್ರಿ, ಪಪಂ ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಬ್ಯಾಲ್ಯಾಳ, ಗೋವಿಂದದೇವಕರ್‌, ತ್ರಿಮೂರ್ತಿ ಶಿಲ್ಪಿ, ಭೀಮಶಿ ಕುನಬಕಡ್ಡಿ ಇತರರು ಇದ್ದರು.

Follow Us:
Download App:
  • android
  • ios