ಹನಿಮೂನ್ ಮೊಟಕುಗೊಳಿಸಿ ದೇಶಸೇವೆಯ ಪಣತೊಟ್ಟು ಯುದ್ಧ ಭೂಮಿಯತ್ತ ಹೊರಟ ಯೋಧನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ನಿವಾಸಿವಾದ ಯೋಧ ಜಯಂತ್ ಎಂಬುವವರೇ ಇದೀಗ ದೇಶಸೇವೆಗೆ ತೆರಳಿದ ಯೋಧ. 

ಕಾರವಾರ (ಮೇ.11): ಹನಿಮೂನ್ ಮೊಟಕುಗೊಳಿಸಿ ದೇಶಸೇವೆಯ ಪಣತೊಟ್ಟು ಯುದ್ಧ ಭೂಮಿಯತ್ತ ಹೊರಟ ಯೋಧನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ನಿವಾಸಿವಾದ ಯೋಧ ಜಯಂತ್ ಎಂಬುವವರೇ ಇದೀಗ ದೇಶಸೇವೆಗೆ ತೆರಳಿದ ಯೋಧ. ಜಯಂತ್‌ ಛತ್ತೀಸಘಡದ ಸಿ.ಆರ್.ಪಿ.ಎಫ್ ಬೆಟಾಲಿಯನ್‌ನಲ್ಲಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಜಯಂತ್‌ ಮದುವೆಯಾಗಿ 9 ದಿನವಷ್ಟೇ ಕಳೆದಿದ್ದು, ಪತ್ನಿಯನ್ನು ಬಿಟ್ಟು ಛತ್ತೀಸ್‌ಗಢದ ತನ್ನ ಬೆಟಾಲಿಯನ್‌ ಯುದ್ಧಕ್ಕಾಗಿ ತೆರಳಿದ್ದಾರೆ. 

ಕಳೆದ ಮೇ 1ರಂದು ಮದುವೆಯಾಗಿ ಊಟಿಗೆ ಹನಿಮೂನ್‌ಗೆ ತೆರಳಲು ನಿರ್ಧರಿಸಿದ್ದ ಜಯಂತ್ ದಂಪತಿ, ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲೇ ಸೈನ್ಯದಿಂದ ಸೇವೆಗೆ ಸೇರಲು ತುರ್ತು ಕರೆ ಬಂದಿದೆ. ಆಗಲೇ ಕುಟುಂಬಸ್ಥರಿಗೆ ವಿಷಯ ತಿಳಿಸಿ ಕರ್ತವ್ಯದ ಕರೆಗೆ ಓಗೊಟ್ಟಿದ್ದಾರೆ. ವಿಷಯ ತಿಳಿದ ಸಿದ್ಧಾಪುರ ಜನರು, ಕುಟುಂಬಸ್ಥರೊಡಗೂಡಿ ಯೋಧನಿಗೆ ಸನ್ಮಾನ ಮಾಡಿ, ‘ಯುದ್ಧದಲ್ಲಿ ಗೆದ್ದು ಬಾ’ ಎಂದು ಹಾರೈಸಿ ಬೀಳ್ಕೊಟ್ಟಿದ್ದಾರೆ.

ರಾಜ್ಯಾದ್ಯಂತ ಭದ್ರತೆಗೆ ಕಠಿಣ ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ

ಸೇನೆಯಿಂದ ತುರ್ತು ಬುಲಾವ್: ಕುಟುಂಬದವರ ಜೊತೆ ಕಾಲ ಕಳೆಯಲು ಒಂದು ತಿಂಗಳ ರಜೆಯ ಮೇಲೆ ತವರಿಗೆ ಬಂದಿದ್ದ ಕಲಬುರಗಿ ಯೋಧ ಗುರುರಾಜ ಹಡಗಿಲಗೆ ಸೇನೆಯಿಂದ ತುರ್ತು ಬುಲಾವ್ ಬಂದಿದೆ. ಈ ಹಿನ್ನೆಲೆಯಲ್ಲಿ ಯೋಧ ಗುರುರಾಜ ಅವರು ದೇಶ ಸೇವೆಗೆ ಹೊರಡಲು ಸಿದ್ಧಾರಾಗಿದ್ದಾರೆ. ಗುರುರಾಜ ಅವರು ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿದ್ದು, ರಜೆ ಮೇಲೆ ಊರಿಗೆ ಬಂದಿದ್ದರು. ಪಾಕಿಸ್ತಾನದ ಜೊತೆಗೆ ಯುದ್ಧ ಆರಂಭವಾದ್ದರಿಂದ ಪುನಃ ದೇಶ ಸೇವೆಗೆ ವಾಪಸ್‌ ತೆರಳಿದ್ದಾನೆ.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಾವಳಗಿ ನಿವಾಸಿ ಗುರುರಾಜ ಹಡಗಿಲ ಅವರೇ ಸೈನ್ಯದಲ್ಲಿದ್ದವರು. ಭಾರತ ಮಾತೆಯ ರಕ್ಷಣೆಯ ಸೇವೆ ಮಿಗಿಲೆಂದು ತಮ್ಮ ಕರ್ತವ್ಯಕ್ಕೆ ತೆರಳಿದ್ದಾರೆ. ಒಂದು ತಿಂಗಳ ರಜೆ ಪಡೆದು ಗ್ರಾಮಕ್ಕೆ ಆಗಮಿಸಿ, ಕೆವಲ 4 ದಿನ ಕಳೆದಿದ್ದವು. ಸೇನೆಯಿಂದ ಸಂದೇಶ ಬಂದ ಹಿನ್ನೆಲೆ ಗಡಿ ಕಾಯಲು ಸಿದ್ಧರಾಗಿ ಹೊರಟಿದ್ದಾರೆ. ಇವರು ಪಂಜಾಬ ಗಡಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸೇಡಂ ನಿಂದ ಸೇವೆಗೆ ತೆರಳಲಿದ್ದಾರೆ.