ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸುವಂತೆ ಸಿಎಂಗೆ ಖಾದರ್ ಪತ್ರ
* ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕನ್ನಡಿಗರ ಬಗ್ಗೆ ಯುಟಿ ಖಾದರ್ ಪತ್ರ
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಖಾದರ್
* ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನ ತವರಿಗೆ ವಾಪಸ್ ಕರೆತರುವ ಬಗ್ಗೆ ಪತ್ರ

ಬೆಂಗಳೂರು/ಮಂಗಳೂರು, (ಆ.18): ಅಫ್ಘಾನಿಸ್ತಾನದಲ್ಲಿ ದಿನೇ ದಿನೇ ತಾಲಿಬಾನಿಗಳ ತಾಲಿಬಾನ್ ದಬ್ಬಾಳಿಕೆ ಶರುವಾಗಿದೆ. ಒಂದೆಡೆ ಹೇಗಾದರೂ ಮಾಡಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳು ನಡೆಯುತ್ತಿವೆ.
ಇನ್ನು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ತವರಿಗೆ ವಾಪಸ್ಸು ಕರೆ ತರುವಂತೆ ಮಾಜಿ ಸಚಿವ ಯು.ಟಿ ಖಾದರ್ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಅಫ್ಘನ್‌ನಲ್ಲಿದ್ದ 150 ಭಾರತೀಯರ ರೋಚಕ ಏರ್‌ಲಿಫ್ಟ್, ಸಾಹಸದ ಹಿಂದೆ ಇವರೇ ಕಿಂಗ್!
ಕರ್ನಾಟಕ ರಾಜ್ಯದ ಹಲವಾರು ಜನ ಅಫ್ಘಾನಿಸ್ತಾನದಲ್ಲಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಹಲವರು ವಿವಿಧ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ತಾಲಿಬಾನ್ ಬೆಳವಣಿಗೆಯಿಂದ ಜನ ಕಂಗಾಲಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ವಾಪಸ್ ಕರೆತರಬೇಕು ಎಂದು ಖಾದರ ಪತ್ರದ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರ ಕುಟುಂಬಸ್ಥರ ಮಾಹಿತಿಗಾಗಿ ಉನ್ನತ ಮಟ್ಟದ ಅಧಿಕಾರಿಯನ್ನು ನೇಮಿಸಿ. ಈ ಮೂಲಕ ಎಲ್ಲರಿಗೂ ಧೈರ್ಯ ತುಂಬಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಕನ್ನಡಿಗರನ್ನು ಕೇಂದ್ರದ ಸಚಿವರ, ಕೇಂದ್ರ ಸರ್ಕಾರದ ಸಹಾಯದಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಕರೆ ತರುವ ಕೆಲಸ ಆಗಬೇಕು. ಈ ವಿಚಾರವಾಗಿ CM ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿ ಆಗಿದ್ದೇನೆ. ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.