Asianet Suvarna News Asianet Suvarna News

ಕೊರೋನಾ ಲಸಿಕೆ ಪ್ರಯೋಗ : ಅಸಮಾಧಾನ ಹೊರಹಾಕಿದ ಯು.ಟಿ ಖಾದರ್

ರಾಜ್ಯಕ್ಕೆ ಕೊರೋನಾ ಲಸಿಕೆ ತರಲಾಗಿದ್ದು ಇದೀಗ ರಾಜ್ಯದ ವಿವಿಧೆಡೆ ಲಸಿಕೆ  ವಿತರಣೆ ನಡೆಯುತ್ತಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಯು ಟಿ ಖಾದರ್ ಅಸಮಾಧಾನ ಹೊರಹಾಕಿದ್ದಾರೆ. 

UT Khader Unhappy Over Corona Vaccination on D Group Employees snr
Author
Bengaluru, First Published Jan 16, 2021, 2:24 PM IST

ಬೆಂಗಳೂರು (ಜ.16):  ಡಿ ಗ್ರೂಪ್ ನೌಕರರ ಮೇಲೆ ಕೊರೋನಾ ಲಸಿಕೆ ಪ್ರಯೋಗಕ್ಕೆ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಕೊರೋನಾ ಲಸಿಕೆ ಪ್ರಯೋಗದ ಬಗ್ಗೆ ಅಸಮಾಧಾನ  ವ್ಯಕ್ತಪಡಿಸಿದ್ದಾರೆ. 

ಲಸಿಕೆ ಬಂದಿರುವುದು ಸಂತೋಷವಾಗಿದೆ.  ಆದರೆ ಬಡಪಾಯಿ ಡಿ.ಗ್ರೂಪ್ ನೌಕರರ ಮೇಲೆ ಲಸಿಕೆಗೆ ಪ್ರಯೋಗ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. 

ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್‌ ಹಿಂದೇಟು ... 

ಡಿ ಗ್ರೂಪ್ ನೌಕರರ ಬದಲು ಮೊದಲಿಗೆ ಆಡಂಬರದಿಂದ ಉದ್ಘಾಟನೆ ಮಾಡುವ ಮಂತ್ರಿಗಳು ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಲಸಿಕೆ ಪಡೆದುಕೊಳ್ಳಲಿ ಎಂದು ಯು ಟಿ ಖಾದರ್ ಹೇಳಿದ್ದಾರೆ. 

 

ಈ ಮೂಲಕ ಲಸಿಕೆ ಪಡೆದು ಮಾದರಿ ಆಗಲಿ ಎಂಬುದು ಜನರ ಪರವಾಗಿ ನನ್ನ ವಿನಂತಿ ಎಂದು ಮಾಜಿ ಸಚಿವರು ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದಾರೆ. 

Follow Us:
Download App:
  • android
  • ios