ಹುಷಾರ್‌: ಕೇರಳದಲ್ಲಿನ ತಿಂಡಿಗಳಲ್ಲಿ ಕೃತಕ ಬಣ್ಣ ಬಳಕೆ!

90 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಅವುಗಳಲ್ಲಿ 31 ಮಾದರಿಗಳಲ್ಲಿ ಅಲ್ಯುರಾ ರೆಡ್, ಕಾರಮೊಸೈನ್, ಸನೆಟ್ ಎಲ್ಲೋ, ಟಾರ್ಟ್‌ರಾಜೈನ್‌ ಬಣ್ಣಗಳ ಬಳಕೆ ಖಚಿತವಾಗಿದೆ: ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್‌ 
 

Use of artificial colors in snacks in Kerala grg

ಬೆಂಗಳೂರು(ನ.09):  ಕೇರಳದಲ್ಲಿ ತಯಾರಿಸಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಮಿಕ್‌ಸ್ಟರ್, ಚಿಪ್ಸ್, ಹಲ್ವಾ, ಮುರುಕು, ಸಿಹಿ ತಿಂಡಿಗಳ 90 ಮಾದರಿಗಳ ಪೈಕಿ 31 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇರಳದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಪತ್ರ ಬರೆದಿರುವುದಾಗಿ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್‌ ತಿಳಿಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 90 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಅವುಗಳಲ್ಲಿ 31 ಮಾದರಿಗಳಲ್ಲಿ ಅಲ್ಯುರಾ ರೆಡ್, ಕಾರಮೊಸೈನ್, ಸನೆಟ್ ಎಲ್ಲೋ, ಟಾರ್ಟ್‌ರಾಜೈನ್‌ ಬಣ್ಣಗಳ ಬಳಕೆ ಖಚಿತವಾಗಿದೆ. ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲ. ತಯಾರಿಕಾ ದಿನಾಂಕವನ್ನು ಮುಂಚಿತವಾಗಿ ನಮೂದು ಮಾಡಿರುವುದು, FSSAI ನೋಂದಣಿ/ಪರವಾನಗಿ ಸಂಖ್ಯೆ ಮುದ್ರಿತವಾಗಿಲ್ಲ ಎಂದಿದ್ದಾರೆ. 

ನೀವು ಬಾಯಿ ಚಪ್ಪರಿಸಿ ತಿನ್ನೋ ಈ ಆಹಾರ ಕೊಕೇನ್‌ಗಿಂತ ಡೇಂಜರ್!

ರಾಜ್ಯಾದ್ಯಂತ ಬೆಳ್ಳುಳ್ಳಿ ಪರೀಕ್ಷೆ: 

ಚೀನಾ ದೇಶದಿಂದ ಸರಬರಾಜು ಆಗುತ್ತಿರುವುದಾಗಿ ಹೇಳಲಾದ ಕೃತಕ/ನಿಷೇಧಿತ ಬೆಳ್ಳುಳ್ಳಿಯ ಕುರಿತು ವಿಶೇಷ ಆಂದೋಲನ ನಡೆಸಿ ರಾಜ್ಯಾದ್ಯಂತ 154 ಬೆಳ್ಳುಳ್ಳಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಅವುಗಳಲ್ಲಿ 147 ಮಾದರಿಗಳು ಸುರಕ್ಷಿತವಾಗಿದ್ದು, 7 ಮಾದರಿಗಳಲ್ಲಿ ಫಂಗಸ್ ಬೆಳೆದಿದ್ದರಿಂದ ಅಸುರಕ್ಷಿತ ಎಂದು ವರದಿ ನೀಡಲಾಗಿದೆ. ಕೃತಕ ಬೆಳ್ಳುಳ್ಳಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios