ಉರಿಗೌಡ-ನಂಜೇಗೌಡ ಮುಗಿದ ಅಧ್ಯಾಯ: ಸಿಎಂ ಬೊಮ್ಮಾಯಿ
ಉರಿಗೌಡ ಹಾಗೂ ನಂಜೇಗೌಡ ವಿಚಾರ ಮುಗಿದ ಅಧ್ಯಾಯವಾಗಿದ್ದು, ಅದಕ್ಕೆ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳು ಮುನಿರತ್ನ ಅವರ ಜೊತೆಗೆ ಮಾತನಾಡಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮಾ 21): ಉರಿಗೌಡ ಹಾಗೂ ನಂಜೇಗೌಡ ವಿಚಾರ ಮುಗಿದ ಅಧ್ಯಾಯವಾಗಿದ್ದು, ಅದಕ್ಕೆ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳು ಮುನಿರತ್ನ ಅವರ ಜೊತೆಗೆ ಮಾತನಾಡಿದ್ದಾರೆ, ಸೂಕ್ತವಾಗಿ ಏನು ಹೇಳಬೇಕೋ ಅದನ್ನ ಶ್ರೀಗಳು ಹೇಳಿದ್ದಾರೆ, ಮುನಿರತ್ನ ಸೇರಿದಂತೆ ನಾವೆಲ್ಲಾ ಅವರ ಸಲಹೆಯನ್ನು ಒಪ್ಪಿಕೊಂಡಿದ್ದೇವೆ, ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಮಾತನಾಡಿದ ಅವರು, ಈ ವಿಚಾರ ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದರು. ಈ ಇಬ್ಬರನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಪಠ್ಯದಲ್ಲಿ ಸೇರಿಸಲು ಅದರದೆ ಅದ ಕೆಲ ಕ್ರಮಗಳಿವೆ, ಅದಕ್ಕೆ ತನ್ನದೇ ಆದ ಕಮಿಟಿ ಇದೆ, ಈ ಕಮಿಟಿಯಲ್ಲಿ ಚರ್ಚೆ ಆಗಲಿದೆ ಎಂದು ಹೇಳಿದರು.
ಜಾರಕಿಹೊಳಿ, ಸವದಿ, ಕುಮಟಳ್ಳಿ ಜೊತೆಗೆ ಮಾತನಾಡಿದ್ದೇನೆ:
ಗೋಕಾಕದಿಂದ ಸ್ಪರ್ಧೆ ಮಾಡಲ್ಲ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಈ ವಿಚಾರವನ್ನು ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ, ಸರಿ ಮಾಡುತ್ತೇವೆ. ಅದೇನು ದೊಡ್ಡ ವಿಚಾರವಲ್ಲ ರಮೇಶ ಜಾರಕೊಹೋಳಿ ಮಹೇಶ ಕುಮಟಳ್ಳಿ ಹಾಗೂ ಲಕ್ಷ್ಮಣ ಸವದಿಯವರೊಂದಿಗೆ ಮಾತನಾಡಿದ್ದೇನೆ ಇವರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಪಕ್ಷಾಂತರದಿಂದ ನಮಗೆ ಸಮಸ್ಯೆ ಇಲ್ಲ:
ಚುನಾವಣಾ ಆರಂಭಕ್ಕೂ ಮುನ್ನ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಸಾಮಾನ್ಯ, ಅವರವರ ಕ್ಷೇತ್ರ ಅವರವರ ಇಚ್ಛೆ. ಈ ವಿಚಾರದಲ್ಲಿ ಕೆಲ ಮುಖಂಡರು ಈ ಕಡೆಯಿಂದ ಆ ಕಡೆಗೆ ವಾಲುತ್ತಾರೆ. ಆದರೆ ಜನರು ಬಹಳ ಬುದ್ಧಿವಂತರಿದ್ದಾರೆ, ಜನರು ಸ್ಥಿರವಾಗಿದ್ದರೆ ಸಾಕು. ಪಕ್ಷಾಂತರ ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜನರನ್ನ ಯಾಮಾರಿಸಲು ತೀರ್ಮಾನಿಸಿದಂತಿದೆ:
ಕಾಂಗ್ರೆಸ್ ಪಕ್ಷದ ನಾಲ್ಕನೇ ಘೋಷಣೆ ಬಗ್ಗೆ ಮಾತನಾಡಿದ ಸಿಎಂ, ಕಾಂಗ್ರೆಸ್ ಪಕ್ಷ ಇಂಥ ಇನ್ನೂ ನಾಲ್ಕು ಘೋಷಣೆ ಮಾಡಲಿ. ಯಾವುದೇ ತೊಂದರೆ ಇಲ್ಲ, ಅದಕ್ಕೂ ಮೊದಲು ಯಾವ ಯಾವ ರಾಜ್ಯದಲ್ಲಿ ಯಾವ ಯಾವ ಘೋಷಣೆ ಮಾಡಿದ್ದಾರೆ ಎಂಬ ಟ್ರ್ಯಾಕ್ ರೆಕಾರ್ಡ್ ಇದೆ. ಹಿಂದಿನ ರಾಜ್ಯದಲ್ಲಿ ಮಾಡಿಲ್ಲ ಮುಂದಿನ ರಾಜ್ಯದಲ್ಲಿ ಮಾಡುತ್ತಿವೆ ಎಂಬ ಘೋಷಣೆಯನ್ನು ಜನರು ನಂಬುವುದಿಲ್ಲ. ಕಾಂಗ್ರೆಸ್ ನವರು ಜನರನ್ನ ಯಾಮಾರಿಸುವ ತೀರ್ಮಾನವನ್ನು ಮಾಡಿದ್ದಾರೆ. ಸೋಲುವ ಭೀತಿಯಿಂದ ಈ ಥರ ಮಾಡುತ್ತಿದ್ದಾರೆ, ಆದರೆ ಇದು ಕರ್ನಾಟಕ ಇಂಥ ಮಾತಿಗೆ ಮರಳಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ಕೊಪ್ಪಳದಲ್ಲಿ ಬಾಣಂತಿ ಹತ್ಯೆ, ಅಮವಾಸ್ಯೆ ಹಿನ್ನೆಲೆ ನಿಧಿಗಾಗಿ ನಡೆಯಿತಾ ಭೀಕರ ಕೊಲೆ!?
ಪಾರ್ಲಿಮೆಂಟರಿ ಬೋರ್ಡನಲ್ಲಿ ಟಿಕೇಟ್ ನಿರ್ಧಾರ:
ಅಭ್ಯರ್ಥಿಗಳ ಟಿಕೆಟ್ ಘೋಷಣೆ ಯಾವಾಗ ಮಾಡಬೇಕು ಎಂಬುದು ನಮ್ಮ ಪಕ್ಷಕ್ಕೆ ಗೊತ್ತಿದೆ, ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ಪಾರ್ಲಿಮೆಂಟ್ ಬೋರ್ಡ್ ನಲ್ಲಿ ಚರ್ಚೆಯಾಗಿ ಟಿಕೆಟ್ ಘೋಷಣೆ ಆಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಅರ್ಹತಾ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕಡೆಗಣನೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ
ಕಾಂಗ್ರೆಸ್ ಘೋಷಣೆಗಳ ಬಗ್ಗೆ ಸಿಎಂ ವ್ಯಂಗ್ಯ:
ಕಾಂಗ್ರೆಸ್ ಪಕ್ಷ ಇಂಥ ಇನ್ನೂ ನಾಲ್ಕು ಘೋಷಣೆ ಮಾಡಲಿ. ಯಾವುದೇ ತೊಂದರೆ ಇಲ್ಲ, ಅದಕ್ಕೂ ಮೊದಲು ಯಾವ ಯಾವ ರಾಜ್ಯದಲ್ಲಿ ಯಾವ ಯಾವ ಘೋಷಣೆ ಮಾಡಿದ್ದಾರೆ ಎಂಬ ಟ್ರ್ಯಾಕ್ ರೆಕಾರ್ಡ್ ಇದೆ. ಹಿಂದಿನ ರಾಜ್ಯದಲ್ಲಿ ಮಾಡಿಲ್ಲ ಮುಂದಿನ ರಾಜ್ಯದಲ್ಲಿ ಮಾಡುತ್ತಿವೆ ಎಂಬ ಘೋಷಣೆಯನ್ನು ಜನರು ನಂಬುವುದಿಲ್ಲ. ಕಾಂಗ್ರೆಸ್ ನವರು ಜನರನ್ನ ಯಾಮಾರಿಸುವ ಕೆಲಸ ಮಾಡ್ತಿದ್ದಾರೆ.