ದಸರಾ ವೇಳೆ ದೇಶದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಉತ್ತರಭಾರತದಲ್ಲಿ ಇತ್ತೀಚೆಗೆ ಪೊಲೀಸರು ಬಂಧಿಸಿರುವ 6 ಮಂದಿ ಶಂಕಿತ ಉಗ್ರರಲ್ಲಿ ಉಪ್ಪಿನಂಗಡಿಯ ವ್ಯಕ್ತಿ

ಮಂಗಳೂರು (ಸೆ.21):  ದಸರಾ ವೇಳೆ ದೇಶದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದ ಮೇರೆಗೆ ಉತ್ತರಭಾರತದಲ್ಲಿ ಇತ್ತೀಚೆಗೆ ಪೊಲೀಸರು ಬಂಧಿಸಿರುವ 6 ಮಂದಿ ಶಂಕಿತ ಉಗ್ರರಲ್ಲಿ ಉಪ್ಪಿನಂಗಡಿಯಲ್ಲಿ ಕೆಲ ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೂ ಸೇರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಮೂರು ತಿಂಗಳ ಹಿಂದೆ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಅವರು ಮೂಲತಃ ಉತ್ತರಪ್ರದೇಶ ಮೂಲದವರು ಎನ್ನಲಾಗಿದೆ. ಇಲ್ಲೇ ಯುವತಿಯೊಬ್ಬಳನ್ನು ಮದುವೆಯಾಗಿದ್ದರು ಎಂದು ಹೇಳಲಾಗಿದೆ. ಕೆಲಸದ ಮೇರೆಗೆ ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ಅವರು ಮೂರು ತಿಂಗಳಿಂದ ನಾಪತ್ತೆಯಾಗಿದ್ದರು.

ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ : ಬೆಂಗಳೂರಲ್ಲಿ ವ್ಯಕ್ತಿ ಅರೆಸ್ಟ್

ಹಿಂದಿ, ಉರ್ದುವಿನಲ್ಲಿ ಸಾಮಾನ್ಯವಾಗಿ ಮಾತನಾಡುತ್ತಿದ್ದ ಈತ ನಿರ್ದಿಷ್ಟಪೋನ್‌ ಕರೆಗೆ ಮಾತ್ರ ಸ್ಥಳೀಯರು ಈತನಕ ಕೇಳದ ಭಾಷೆಯಲ್ಲಿ ಮಾತನಾಡುತ್ತಿದ್ದ. ಈತನ ವರ್ತನೆ ಕುರಿತು ಹಿಂದೊಂದು ದಿನ ಪೊಲೀಸರಿಗೂ ದೂರು ನೀಡಲಾಗಿತ್ತು ಎನ್ನಲಾಗಿದೆ.