ಮೈಸೂರಿಗೆ ಭೇಟಿ ನೀಡಿದ ಕೇಂದ್ರ‌ ಸಚಿವ ರಾಜೀವ್‌ ಚಂದ್ರಶೇಖರ್ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳೊಂದಿಗೆ  ಮಾತುಕತೆ ನಡೆಸಿದರು.  ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ವಿಚಾರ ಮೆಲುಕು‌ ಹಾಕಿದರು.

ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್

ಮೈಸೂರು (ಮಾ.24): ಶರ ವೇಗದಲ್ಲಿ ಬೆಳೆಯುತ್ತಿರುವ ನವ ಭಾರತದಲ್ಲಿ ಯುವ ಪೀಳಿಗೆಗೆ ವಿಫುಲ ಅವಕಾಶಗಳು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಮೈಸೂರಿನ ಜೆಎಸ್‌ಎಸ್ ಕಾಲೇಜು ವಿಧ್ಯಾರ್ಥಿಗಳೊಂದಿಗೆ ಸಂವಾಸ ನಡೆಸಿದ ಅವರು ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಳಿಕ ಸುತ್ತೂರು ಶಾಖಾ ಮಠಕ್ಕೆ ಭೇಟಿ ಕೊಟ್ಟರು.

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭಾಗವಹಸಿ ಮಾತನಾಡಿದರು. ಭಾಷಣ ಆರಂಭಿಸಿದ ಸಚಿವ ರಾಜೀವ್‌ ಚಂದ್ರಶೇಖರ್ ಭಾಷಣ‌ ಇದು ನನ್ನ‌ 46ನೇ ಕಾಲೇಜಿನ ಸಂವಾದ ವಾಗಿದ್ದು ದೇಶದ ಉದ್ದಗಲಕ್ಕೂ ಎಲ್ಲಾ ದಿಕ್ಕುಗಳಲ್ಲೂ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡಿದ್ದೇನೆ ಎಂದರು.

ಎಲ್ಲರಿಗೂ ನಾನು ಹೇಳುತ್ತಿರುವುದು ಒಂದೇ. ನೀವು ನಿಮ್ಮ ತಂದೆ, ತಾಯಿ, ಅಜ್ಜಿ, ತಾತನಿಗಿಂತ ತುಂಬಾ ಅದೃಷ್ಟವಂತರು. ನವ ಭಾರತ ವಿದ್ಯಾರ್ಥಿಗಳು ತುಂಬಾ ಅದೃಷ್ಟಶಾಲಿಗಳು ಎಂದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಸ್ತುತ ವಿಫುಲವಾದ ಅವಕಾಶಗಳು ನಿಮಗಿವೆ. ಹಿಂದೆಯೂ ಅವಕಾಶಗಳು ಇದ್ದವು. ಆದರೆ ಅವು ಕೆಲವರಿಗೆ ಸೀಮಿತವಾಗಿದ್ದವು. ರಾಜೀವ್‌ಗಾಂಧಿ ಕಾಲದಲ್ಲಿ 100 ರೂ ಬಿಡುಗಡೆ ಆದರೆ ಜನರಿಗೆ 15 ರೂಪಾಯಿ‌ ಸಿಗುತ್ತಿತ್ತು. ಸೋರಿಕೆ, ಭ್ರಷ್ಟಾಚಾರಕ್ಕೆ ಅವಕಾಶಗಳು ವಿಫುಲವಾಗಿದ್ದವು. 2014ರಲ್ಲಿ ನರೇಂದ್ರಮೋದಿ ಪ್ರಧಾನಿ ಆದರು. ಈಗ 100 ರೂಪಾಯಿ ಬಿಡುಗಡೆ ಆದರೆ ಜನರಿಗೆ 100 ರೂಪಾಯಿ ಸಿಗುತ್ತಿದೆ. ಯಾವುದೇ ಭ್ರಷ್ಟಾಚಾರ ಇಲ್ಲ, ಸೋರಿಕೆ ಇಲ್ಲ. ಇದು ನವ ಭಾರತದ ಶಕ್ತಿ ಎಂದು ವಿವರಿಸಿದರು.

ಹಳೆ ಭಾರತದಲ್ಲಿ ಲಿಮಿಟೆಡ್ ಅವಕಾಶಗಳು ಇದ್ದವು. ಆಗ ಅವಕಾಶಗಳು ಕೆಲವೇ ಕುಟುಂಬಗಳು, ಕೆಲವೇ ವರ್ಗಕ್ಕೆ ಸಿಗುತ್ತಿತ್ತು. ಅವಕಾಶಗಳು ಇಂದು ಎಲ್ಲರಿಗೂ ಸಿಗುವಂತಾಗಿದೆ. ನವ ಭಾರತದಲ್ಲಿ 90 ಸಾವಿರ ಸ್ಟಾರ್ಟಪ್ ಆಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 30% ಹೆಚ್ಚು ತೆರಿಗೆ ಟಾರ್ಗೆಟ್ ಆಗಿದೆ. ಇಂದು ರಕ್ಷಣಾ ಕ್ಷೇತ್ರ, ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತ ಮಹತ್ತರ ಅಭಿವೃದ್ಧಿ ಸಾಧಿಸಿದೆ.

30 ವರ್ಷಗಳಲ್ಲಿ ಟೆಕ್ನಾಲಜಿ ಕೊಳ್ಳುವ ಭಾರತ ಆಗಿತ್ತು. ಈಗ ಯುವ ಪೀಳಿಗೆಯ ಕಾರ್ಯ ಕ್ಷಮತೆಯಿಂದ ಪ್ರೊಡ್ಯುಸ್ ಇಂಡಿಯಾ ಆಗಿದೆ. ಈಗ ಆ್ಯಪಲ್, ಸ್ಯಾಮ್‌ಸಂಗ್‌ ಸೇರಿ ಹಲವು ಮೊಬೈಲ್ ಕಂಪನಿಗಳು ನಮ್ಮಲ್ಲೇ ಮೊಬೈಲ್ ತಯಾರಿಕೆ ಮಾಡುತ್ತಿವೆ. ಇಡೀ ವಿಶ್ವದಲ್ಲೇ ಕೋವಿಡ್ ಮಹಾ ಮಾರಿಯನ್ನ ಸಮರ್ಥವಾಗಿ ನಿಬಾಯಿಸಿದ್ದು ಭಾರತ. ಪ್ರಪಂಚದ ನಾನಾ ದೇಶಗಳು ಭಾರತ ತಯಾರಿಸಿದ ವ್ಯಾಕ್ಸಿನ್ ಬಳಸಿವೆ. ಇದು ನವ ಭಾರತದ ಶಕ್ತಿಯಾಗಿದೆ ಎಂದರು. ನೀವುಗಳೂ ಕೂಡ ಭವಿಷ್ಯದ ಸಧೃಡ ಭಾರತಕ್ಕೆ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಇನ್ನು ಮಕ್ಕಳ ಜೊತೆ ಸಂವಾದ ಮಾಡಿದ ಸಚಿವರು ಯಾವುದೇ ಕಾಲಕ್ಕೂ ಆಧುನೀಕರಣ, ಹೊಸ ಟೆಕ್ನಾಲಜಿ ಮುಖ್ಯ. ಟೆಕ್ನಾಲಜಿ ಅಭಿವೃದ್ಧಿ 18 ಲಕ್ಷ ಉದ್ಯೋಗ ಸೃಷ್ಟಿ ಮಾಡಿದೆ. ಆದರೆ ಬಹುತೇಕರನ್ನ ಹೊರ ದೇಶಗಳಿಂದ ಕರೆ ತರಲಾಗಿದೆ. ಇದಕ್ಕೆ ಕೌಶಲ್ಯವೇ ಮುಖ್ಯವಾಗಿದೆ. ನೀವೂ ಕೂಡ ಕೌಶಲ್ಯವನ್ನ ಮೈಗೂಡಿಸಿಕೊಳ್ಳಬೇಕು.

ಹಳೆಯ ಹಾಗೂ ನವ ಭಾರತದ ವ್ಯತ್ಯಾಸ ತಿಳಿಯಲೇ ಬೇಕು. ತಮ್ಮ ಸ್ವಂತ ಅನುಭವ ಬಿಚ್ಚಿಟ್ಟ ಸಚಿವರು. ನಾನು ನನ್ನ 30ನೇ ವಯಸ್ಸಿನಲ್ಲಿ ಸ್ವಂತ ನೆಟ್ವರ್ಕ್ ಆರಂಭ ಮಾಡಿದೆ. ಮೊದಲ ನೆಟ್ವರ್ಕ್ ಆರಂಭ ಆಗಿದ್ದು ಮುಂಬೈನಲ್ಲಿ. ಆಗ ಅದನ್ನು ಸಂಬಂಧಿಸಿದ ಮಂತ್ರಿ ಬಳಿ ತೆಗೆದುಕೊಂಡು ಹೋಗಿದ್ದೆ. ಅವರು ಮನೆಗೆ ಬಂದು ಭೇಟಿ ಮಾಡಲು ಹೇಳಿದರು. ಬಹಳ ಖುಷಿಯಿಂದ ಅವರ ಮನೆಗೆ ಹೋಗಿ ಪ್ರಸೆಂಟೇಷನ್ ಕೊಟ್ಟೆ. ಕೇಳಿಸಿಕೊಂಡು ಮತ್ತೆ ಬರಲು ಹೇಳಿದರು. ಮತ್ತೆ ಹೋಗಿ ಪ್ರಸೆಂಟೇಷನ್ ಕೊಟ್ಟೆ. ಮತ್ತೆ ಬರಲು ಹೇಳಿದರು. 10 ದಿನಗಳ ನಂತರ ಹೋದೆ. ಆಗಲೂ ಕೇಳಿಸಿಕೊಂಡರು, ಫೈಲ್‌ಗೆ ಸಹಿ ಆಗಲಿಲ್ಲ. ಅವರು ನಿರೀಕ್ಷೆ ಮಾಡಿದ್ದು ಹಣವನ್ನ. ಆದರೆ ಈಗ ಅಂತಹ ಸನ್ನಿವೇಶ ಇಲ್ಲ. ಅದಕ್ಕಾಗಿ ನೀವುಗಳು ಅಧೃತಷ್ಟವಂತರು ಎಂದಿದ್ದು. ಅಬ್ದುಲ್‌ಕಲಾಂ ಕಾಲದಿಂದಲೂ ಸ್ಕಿಲ್ ವಿಫುಲವಾಗಿ ಇತ್ತು.

ಆದರೆ ಅವಕಾಶಗಳು ಕಡಿಮೆ ಇತ್ತು. ಹಿಂದಿ ಹಾಗೂ ಇಂದು ಎರಡೂ ಕಾಲದಲ್ಲೂ ವಿದೇಶಗಳಿಗೆ ವಿದ್ಯಾರ್ಥಿಗಳ ವಲಸೆ ಇತ್ತು. ಹಿಂದೆ ಸಕ್ಸಸ್ ರೇಟ್ ವಿದೇಶ ಎನ್ನುತ್ತಿದ್ದರು. ಆದರೆ ಇಂದು ದೂರದ ಅಮೇರಿಕದಲ್ಲಿರುವ ಭಾರತೀಯರು ಇಂದೇ ದೇಶಕ್ಕೆ ಬಂದರೂ ನಾಳೆಯೇ‌ ಅವರಿಗೆ ಉದ್ಯೋಗ ಸಿಗುತ್ತೆ. ಆ ಮಟ್ಟದ ಅವಕಾಶಗಳು‌ ದೇಶದಲ್ಲಿ‌ ಇದೆ. ಇಂದೂ ಸಹಾ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುತ್ತಿರಬಹುದು. ಆದರೆ ಸಕ್ಸಸ್ ರೇಟ್ ನಮ್ಮ ದೇಶದಲ್ಲೇ ಜಾಸ್ತಿ ಇದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಮಾರ್ಕೆಟ್ ಕನೆಕ್ಟಿವಿಟಿ ಬಗ್ಗೆ ಹೆಚ್ಚು ಹೊತ್ತು ನೀಡಿದ್ದಾರೆ ಎಂದು ವಿದ್ಯಾರ್ಥಿಗಳ ಸಂವಾದದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ವಿದ್ಯಾರ್ಥಿಗಳಿಗೆ ಊಟ ಮುಖ್ಯವೋ, ಕೌಶಲ್ಯ ಮುಖ್ಯವೋ?
ವಿದ್ಯಾರ್ಥಿನಿ ಪ್ರಶ್ನೆಗೆ ನಾಜೂಕು ಉತ್ತರ ನೀಡಿದರು ಸಚಿವ ರಾಜೀವ್ ಚಂದ್ರಶೇಖರ್. ಭವಿಷ್ಯದ ಬಗ್ಗೆ ಯೋಚನೆ ಮಾಡಿದರೆ ಕೌಶಲ್ಯ ಮುಖ್ಯ. ಆಗಂತ ಊಟ ಬಿಟ್ಟು ಕೆಲಸ ಮಾಡುವುದು ಅಂತಲ್ಲ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಕಾರ್ಯಕ್ರಮಗಳು. ಐಟಿ ಬಿಟಿ, ಕೃಷಿ, ಕಮ್ಮಾರ, ಹೈನುಗಾರಿಕೆ ಸೇರಿ ಎಲ್ಲಾ ವರ್ಗವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. 6 ಸಾವಿರದಲ್ಲಿ 75ಕ್ಕೂ ಅಧಿಕ ಕೃಷಿ, ಹೈನುಗಾರಿಕೆ ಸಂಬಂಧಿಸಿದ ಕೌಶಲಗಳು ಇದೆ. ಇದು ಕೇವಲ ಐಟಿ ಬಿಟಿಗಾಗಿ ಮಾಡಿದ ಕೌಶಲ್ಯಭಿವೃದ್ದಿ ಕಾರ್ಯಕ್ರಮಗಳಲ್ಲ ಎಂದು ಸ್ಪಷ್ಟಪಡಿಸಿದರು.

ಸುತ್ತೂರು ಶಾಖಾ ಮಠಕ್ಕೆ ಭೇಟಿಕೊಟ್ಟ ಕೇಂದ್ರ‌ ಸಚಿವ ರಾಜೀವ್‌ಚಂದ್ರಶೇಖರ್.
 ಸಂವಾದದ ಬಳಿಕ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಚಿವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳೊಂದಿಗೆ ಸಚಿವರ ಮಾತುಕತೆ ನಡೆಸಿದ ಸಚಿವರು ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ವಿಚಾರ ಮೆಲುಕು‌ ಹಾಕಿದರು. ಕೌಶಲ್ಯ ಅಭಿವೃದ್ಧಿಗೆ ಕೈಗಾರಿಕೆಗಳ ಸಂಪರ್ಕ ಹೆಚ್ಚಾಗಬೇಕು. ಈ ವೇಳೆ ಸ್ವಾಮೀಜಿ ಪಿಎಂ ಕೇರ್ ಹೊರತು ಪಡಿಸಿ ಉಳಿದ ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ ಲೋನ್ ಶುಲ್ಕ ಖಡಿತ ಮಾಡಬೇಕು ಎಂದು ಮನವಿ ಮಾಡಿದದರು. ಇದಕ್ಕುತ್ತರಿದ ಸಚಿವರು ಶೀಘ್ರದಲ್ಲೇ ಹೊಸ ಘೋಷಣೆಗಳೊಂದಿಗೆ ಅದಕ್ಕೆ‌ ಶುಲ್ಕ ವಿನಾಯಿತಿ ನೀಡಲಾಗುವುದು ಎಂದರು. ಸಮಾಲೋಚನೆ ಮುಗಿಸಿ ಮಠದಲ್ಲೇ ಪ್ರಸಾದ ಸ್ವೀಕರಿಸಿದ ಸಚಿವರು ಬೆಂಗಳೂರಿನತ್ತ ತೆರಳಿದರು.