Asianet Suvarna News Asianet Suvarna News

ಆಸ್ಪತ್ರೆಯಿಂದ ಡಿಸ್ಚಾರ್ಜ್: ಆರಾಮಾಗಿದ್ದೇನೆ, ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದ ಕುಮಾರಸ್ವಾಮಿ

ಯಾರು ಆತಂಕಕ್ಕೆ ಒಳಗಾಗೋದು ಅವಶ್ಯಕತೆ ಇಲ್ಲ. ನಮ್ಮ ಕಾರ್ಯಕರ್ತರು ಅಭಿಮಾನಿಗಳಿಗೆ ಮನವಿ ಮಾಡೋದು, ನಿಮ್ಮ ಶುಭ ಹಾರೈಕೆ ಇದುವರೆಗೆ ಕಾಪಾಡಿದೆ. ಭಗವಂತನ ಆಶೀರ್ವಾದ, ತಂದೆ ತಾಯಿ ಇರೋವರೆಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ ಕುಮಾರಸ್ವಾಮಿ. 

union minister hd kumaraswamy discharged from hospital in bengaluru grg
Author
First Published Jul 28, 2024, 9:50 PM IST | Last Updated Jul 29, 2024, 11:45 AM IST

ಬೆಂಗಳೂರು(ಜು.28): ಮೂಗಿನಿಂದ ರಕ್ತಸೋರಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇಂದು(ಭಾನುವಾರ) ಸುದ್ದಿಗೋಷ್ಟಿ ನಡೆಸುವ ಸಂದರ್ಭದಲ್ಲಿ ಮೂಗಿನಲ್ಲಿ ರಕ್ತ ಸೋರಿಕೆಯಾಗಿತ್ತು, ಹೀಗಾಗಿ ಜಯನಗರದ ಅಪೋಲೋ ಅಸ್ಪತ್ರೆಗೆ ದಾಖಲಾಗಿದ್ದರು. 

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಯಾರು ಆತಂಕಕ್ಕೆ ಒಳಗಾಗೋದು ಅವಶ್ಯಕತೆ ಇಲ್ಲ. ನಮ್ಮ ಕಾರ್ಯಕರ್ತರು ಅಭಿಮಾನಿಗಳಿಗೆ ಮನವಿ ಮಾಡೋದು, ನಿಮ್ಮ ಶುಭ ಹಾರೈಕೆ ಇದುವರೆಗೆ ಕಾಪಾಡಿದೆ. ಭಗವಂತನ ಆಶೀರ್ವಾದ, ತಂದೆ ತಾಯಿ ಇರೋವರೆಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ. 

ಕೇಂದ್ರ ಸಚಿವ ಕುಮಾರಸ್ವಾಮಿ ಮೂಗಿನಿಂದ ರಕ್ತ ಸೋರಿಕೆ: ಆಸ್ಪತ್ರೆಗೆ ದಾಖಲು

ಮೂರು ಬಾರಿ ವಾಲ್ ರಿಪ್ಲೇಸ್ ಮೆಂಟ್ ಆಗಿದೆ. ಬ್ಲಡ್ ತಿನ್ನರ್ ಮಾತ್ರೆ ತಗೊತ್ತಿನಿ. ಆ ಬ್ಲಡ್ ತಿನ್ನರ್ ತೆಗೆದುಕೊಳ್ಳೋದು ಬ್ಲಡ್ ಕ್ಲಾಟ್‌ ಆಗಬಾರದ್ದು ಅಂತ. ಒತ್ತಡಗಳು ಜಾಸ್ತಿಯಾದಾಗ, ರೆಸ್ಟ್ ಲೆಸ್ ಕೆಲಸ ಮಾಡಿದಾಗ. ಮೂಗಿನಿಂದ ರಕ್ತ ಸ್ರಾವ ಆಗೋದು ಸಹಜ ಆಗಿದೆ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನನಗೆ ಸಿಕ್ಕಿರುವ ಸಮಯ ಒಂದೊಂದು ಕ್ಷಣವು ಮುಖ್ಯ. ಜನರಿಗೆ ಏನಾದ್ರು ಒಂದು ಸಹಾಯ ಮಾಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಜನರ ಕೊಡುಗೆ ಕೊಡಬೇಕು. ಜನತೆ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು. ಅದರಿಂದ ಒಂದು ತಾತ್ಕಾಲಿಕ ಸಮಸ್ಯೆ ಆಗಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. 

ರೆಸ್ಟ್ ಮಾಡಬೇಕಾಗಿರೋದು ಸೂಕ್ತ ಅಂತ ಡಾಕ್ಟರ್ ಹೇಳಿದ್ದಾರೆ. 92 ವರ್ಷಗಳ ದೇವೇಗೌಡರು ಕಾವೇರಿ ವಿಚಾರ ನಾಳೆ ಪ್ರಸ್ತಾಪ ಮಾಡ್ತಾರೆ. ಡಿಎಂಕೆ ಮತ್ತು ಇತರು ಅಡ್ಡಿಪಡಿಸುವ ಕೆಲಸ ಮಾಡ್ತಾರೆ. ಆ ಸಂದರ್ಭದಲ್ಲಿ ನಾನು ಅವರ ಜೊತೆಗೆ‌ ಇರಬೇಕು. ರಾತ್ರಿ ನನ್ನ ದೇಹದಲ್ಲಿನ ಏರುಪೇರು ನೋಡಿಕೊಂಡು ದೆಹಲಿ ಪ್ರವಾಸ ನಿರ್ಧಾರ ಮಾಡ್ತೀನಿ. ವೈದ್ಯರಿಗೂ ಈ ಬಗ್ಗೆ ಮಾಹಿತಿ ನೀಡ್ತೀನಿ. ಪಾದಯಾತ್ರೆ ಮಾಡಲಿಕ್ಕೆ ಆರೋಗ್ಯ ಸಂಪೂರ್ಣ ಕೆಟ್ಟಿಲ್ಲ. ಪಾದಯಾತ್ರೆಗೆ ಇನ್ನು ಒಂದು ವಾರ ಇದೆ. ನಾನು ಇಲ್ಲದಿದ್ದರೆ ನಿಖಿಲ್ ಕುಮಾರಸ್ವಾಮಿ ನಮ್ಮ ಶಾಸಕರ ಜೊತೆ ಪಾದಯಾತ್ರೆ ಮಾಡ್ತಾರೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios