ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಷಿ ತಲೆಮರೆಸಿಕೊಂಡಿದ್ದಾರೆ; ಗೃಹ ಸಚಿವ ಪರಮೇಶ್ವರ

ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವವರ ಸಹೋದರ ಗೋಪಾಲ್ ಜೋಷಿ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲು. ಮಾಜಿ ಶಾಸಕ ದೇವಾನಂದ್ ಚೌಹಾಣ್ ಪತ್ನಿ ಸುನೀತಾ ಚೌಹಾಣ್ ದೂರು ನೀಡಿದ್ದು, ಗೋಪಾಲ್ ಜೋಷಿ ತಲೆಮರೆಸಿಕೊಂಡಿದ್ದಾರೆ.

Union Minister brother Gopal Joshi absconded says Home Minister Parameshwar sat

ಬೆಂಗಳೂರು (ಅ.18): ಲೋಕಸಭಾ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಗೋಪಾಲ್ ಜೋಷಿ ಎಂಬುವರು ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಷಿ ಅವರ ಪಾತ್ರ ಇರುವುದು ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರನ ವಿರುದ್ಧದ‌ ಪ್ರಕರಣದ‌ ಕುರಿತು ಪ್ರತಿಕ್ರಿಯಿಸಿ, ದೂರು ಬಂದಾಗ ಗಂಭೀರವಾಗಿ ತೆಗೆದುಕೊಳ್ಳಬೇಕಲ್ಲವೇ? ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಗೋಪಾಲ್ ಜೋಷಿ ಎಂಬುವರು ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಷಿ ಅವರ ಪಾತ್ರ ಇರುವುದು ನನಗೆ ಗೊತ್ತಿಲ್ಲ. ಬಂಧಿತರನ್ನು ವಿಚಾರಣೆ ನಡೆಸಿ, ಹೇಳಿಕೆ ಪಡೆದಾಗ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ. ತನಿಖೆಗೆ ಮೊದಲು ಹೇಳುವುದು ಸರಿಯಲ್ಲ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ವರದಿ ಬಾರದೆ ಏನು ಹೇಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಅಂತೂ ಇಂತೂ ಮುತ್ತಪ್ಪ ರೈ 2ನೇ ಹೆಂಡ್ತಿ ಅನುರಾಧಗೆ ಸಿಕ್ತು ನೂರಾರು ಕೋಟಿ ಆಸ್ತಿ!

ಪ್ರಕರಣದ ಹಿನ್ನೆಲೆಯೇನು?
ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಷಿ ಸಹೋದರನ ವಿರುದ್ದ ವಂಚನೆ ಆರೋಪ ಕೇಳಿಬಂದಿದೆ. ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ 2 ಕೋಟಿ ರೂ. ಪಡೆದು ವಂಚಿಸಿರುವುದಾಗಿ ದೂರು, FIR ದಾಖಲು ಆಗಿದೆ. ಗೋಪಾಲ್ ಜೋಷಿ ಸೇರಿದಂತೆ ಸಹೋದರಿ ವಿಜಯಲಕ್ಷ್ಮಿ ಜೋಷಿ, ಪುತ್ರ ಅಜಯ್ ಜೋಷಿ ವಿರುದ್ಧ ಸುನೀತಾ ಚೌಹಾಣ್ ಎಂಬುವರಿಂದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ದೂರು ನೀಡಿದವರು ಮಾಜಿ ಶಾಸಕ ದೇವನಂದ್ ಚೌಹಣ್ ಪತ್ನಿ ಸುನೀತಾ ಚೌವ್ಹಾಣ್ ಅವರು. 2018ರಲ್ಲಿ ನಾಗಠಾಣಾ ಕ್ಷೇತ್ರದಿಂದ JDS ಶಾಸಕರಾಗಿದ್ದ ದೇವನಾಂದ್ ಚೌವ್ಹಾಣ್ ಅವರು 2023ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಪರಿಚಯಸ್ಥ ಶೇಖರ್ ನಾಯಕ್ ಮೂಲಕ ಗೋಪಾಲ್ ಜೋಷಿ ಪರಿಚಯವಾಗಿದ್ದರು. ಹುಬ್ಬಳ್ಳಿಯಲ್ಲಿ ಗೋಪಾಲ್ ಜೋಷಿ ಭೇಟಿ ಮಾಡಿದ್ದ ಚೌವ್ಹಾಣ್ ದಂಪತಿಗೆ, 2024ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೋಸ ತಿಳಿದರೂ ಮತ್ತೆ ನಂಬಿಸಿ ಹಣ ಪಡೆದರು:
ನನ್ನ ತಮ್ಮನಿಗೆ ಕೇಂದ್ರ ಸರ್ಕಾರದಲ್ಲಿ ವರ್ಚಸ್ಸು ಚೆನ್ನಾಗಿದೆ. ನಮ್ಮ ತಮ್ಮ ಹೇಳಿದಂತೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕೇಳುತ್ತಾರೆ. ಹೀಗಾಗಿ ಬಿಜಾಪುರ ಕ್ಷೇತ್ರದಿಂದ ನಿಮಗೆ ಬಿಜೆಪಿ ಟಿಕೆಟ್ ಕೊಡಿಸಲಾಗುವುದು. ಒಂದು ಟಿಕೆಟ್‌ಗೆ ಬರೋಬ್ಬರಿ 5 ಕೋಟಿ ರೂ. ಆಗಬಹುದು ಎಂದು ಕೇಂದ್ರ ಸಚಿವರ ಕಚೇರಿಯಲ್ಲಿಯೇ ಡೀಲದ ಮಾಡಿದ್ದರಂತೆ. ಆದರೆ, ಚೌವ್ಹಾಣ್ ದಂಪತಿ 5 ಕೋಟಿ ರೂ. ಕೊಡಲು ಸಾಧ್ಯವಿಲ್ಲವೆಂದು ಎದ್ದು ಹೋಗಿದ್ದರು. ಪುನಃ ಗೋಪಾಲ್ ಜೋಷಿ ಅವರು ಚೌವ್ಹಾಣ್ ದಂಪತಿಗೆ ಕರೆ ಮಾಡಿ 2 ಕೋಟಿ ರೂ.ಗೆ ಡೀಲ್ ಒಪ್ಪಿಸಿ, ಸದ್ಯಕ್ಕೆ 25 ಲಕ್ಷ ರೂ. ಕೊಟ್ಟು ಉಳಿದ ಹಣಕ್ಕೆ ಚೆಕ್ ಕೊಡಿ ಎಂದು ಮನವೊಲಿಸಿದ್ದರು. ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ವಿಜಯಲಕ್ಷ್ಮಿ ಮನೆಗೆ ತಂದು‌ ಹಣ ನೀಡಿದ್ದರು.

ಇದನ್ನೂ ಓದಿ: ಸೂಕ್ತ ದಾಖಲೆ ನೀಡದ ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ

ಆದರೆ, ಮಾಜಿ ಸಚಿವ ದೇವಾನಂದ್ ಅವರಿಗೆ ಗೋಪಾಲ್ ಜೋಷಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲಿಲ್ಲ. ಹೀಗಾಗಿ ತಮ್ಮ ಹಣ ಮತ್ತು 25 ಲಕ್ಷ ರೂ. ಹಣ ನೀಡುವಂತೆ ಸುನೀತಾ ಚೌವ್ಹಾಣ್ ಕೇಳಿದ್ದಾರೆ. ಇದಾದ ಬಳಿಕ ಚೆಕ್‌ಗಳನ್ನು ವಾಪಸ್ ನೀಡಿದ್ದು, ಹಣ ವಾಪಸ್ ಕೊಟ್ಟಿರಲಿಲ್ಲ. ಇದಾದ ನಂತರ ಸರ್ಕಾರದಿಂದ 200 ಕೋಟಿ ರೂ. ಪ್ರಾಜೆಕ್ಟ್ ಹಣ ಬರುವುದಿದೆ. ಮುಂದಿನ ಚುನಾವಣೆಗೆ ಸಹಾತ ಮಾಡುವುದಾಗಿ ನಂಬಿಸಿ ಪುನಃ 1.75 ಕೋಟಿ ರೂ. ಹಣವನ್ನು ಪಡೆದಿದ್ದಾರೆ. ಆದರೆ, ಯಾವುದೇ ಹಣ ಕೊಡದಿದ್ದಾಗ ಪೊಲೀಸರಿಗೆ ಮಾಜಿ ಶಾಸಕರ ಪತ್ನಿ ಸುನೀತಾ ಚೌವ್ಹಾಣ್ ಪೊಲೀಸರಿಗೆ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios