ಸೂಕ್ತ ದಾಖಲೆ ನೀಡದ ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ

ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲಾಗಿದೆ. ಸೈಟ್ ಹಂಚಿಕೆ ದಾಖಲೆಗಳು ಮತ್ತು ಹಣ ವರ್ಗಾವಣೆಗಳನ್ನು ಪರಿಶೀಲಿಸಲಾಗುತ್ತಿದ್ದು, ದೂರುದಾರರು ದೊಡ್ಡ ಮಟ್ಟದ ಅಕ್ರಮದ ಆರೋಪ ಮಾಡಿದ್ದಾರೆ.

ED raid on Mysore Muda office for not providing proper documents san

ಬೆಂಗಳೂರು (ಅ.18): ತನಿಖೆ ಆರಂಭವಾದ ಬೆನ್ನಲ್ಲಿಯೇ ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ ನಡೆಸಿದೆ. ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣದ ತನಿಖೆ ಬೆನ್ನಲ್ಲೇ ಬಿಗ್ ಶಾಕ್‌ ಎದುರಾಗಿದೆ. 20ಕ್ಕೂ ಹೆಚ್ಚು ಇ.ಡಿ ಅಧಿಕಾರಿಗಳ ತಂಡ ಆಗಮಿಸಿ ಮುಡಾ ಕಚೇರಿಗೆ ದಾಳಿ ನಡೆಸಿದ್ದು, ದಾಖಲೆಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದೆ. ಮುಡಾ ಸೈಟ್​​ ಹಂಚಿಕೆ ದಾಖಲೆ, ಅಕ್ರಮ ಹಣ ವರ್ಗಾವಣೆ, ಭೂ ಕಬಳಿಕೆ ಕೇಸ್​ ಅನ್ನು ಇಡಿ ದಾಖಲು ಮಾಡಿದ್ದು, ಇದಕ್ಕಾಗಿ ಮುಡಾ ಕಚೇರಿಯನ್ನು ಜಾಲಾಡಿದೆ. ಸಿಎಂ, ಪಾರ್ವತಿ, ಮಲ್ಲಿಕಾರ್ಜುನ ಮೇಲೆ  ಇ.ಡಿ ಕೇಸ್​ ದಾಖಲಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ಬೆನ್ನಲ್ಲೇ ಇ.ಡಿ ರೇಡ್​ ನಡೆದಿದ್ದು, ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮುಡಾ ಕಚೇರಿಗೆ ಹೊಕ್ಕ ಇಡಿ ಅಧಿಕಾರಿಗಳು, ಸೈಟ್‌ ಹಂಚಿಕೆ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹಗರಣದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇಡಿ ಈಗಾಗಲೇ 3 ನೋಟಿಸ್‌ ಹಾಗೂ 1 ಸಮನ್ಸ್‌ ಜಾರಿ ಮಾಡಿತ್ತು.ಆದರೆ, ಇ.ಡಿ ನೋಟಿಸ್​, ಸಮನ್ಸ್‌ಗೆ ಅಧಿಕಾರಿಗಳು ಯಾವುದೇ ಉತ್ತರ ನೀಡಿರಲಿಲ್ಲ. ದಾಖಲೆ ನೀಡದ ಮುಡಾಗೆ ದಾಳಿ ಮೂಲಕ ಇ.ಡಿ. ಶಾಕ್​ ನೀಡಿದೆ. ಮೈಸೂರು ಬೆನ್ನಲ್ಲೇ ಬೆಂಗಳೂರಿನಲ್ಲೂ ಇ.ಡಿ ದಾಳಿ ನಡೆಸಿದೆ.

ದೇವರಾಜು ನಿವಾಸ, ಮೈಸೂರಿನ ತಹಶೀಲ್ದಾರ್‌ ಕಚೇರಿ ಮೇಲೆ ದಾಳಿ: ಇ.ಡಿ ಅಧಿಕಾರಿಗಳು ಕೆಂಗೇರಿಯ ದೇವರಾಜು ನಿವಾಸದಲ್ಲಿ ರೇಡ್‌ ಮಾಡಿದ್ದಾರೆ. ಜಮೀನು ಮಾಲೀಕನಾಗಿರುವ ದೇವರಾಜು ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಪರಿಶೀಲನೆ ಮಾಡಿದ್ದಾರೆ. ಮುಡಾ ಕೇಸ್‌ನಲ್ಲಿ ದೇವರಾಜು ಎ4 ಆರೋಪಿಯಾಗಿದ್ದಾರೆ. ಅದಲ್ಲದೆ, ಮೈಸೂರಿನ ತಹಶೀಲ್ದಾರ್‌ ಕಚೇರಿಯ ಮೇಲೂ ಇಡಿ ದಾಳಿ ಮಾಡಿದೆ.

ದಾಳಿಯ ಬೆನ್ನಲ್ಲಿಯೇ ಮಾತನಾಡಿರುವ ದೂರುದಾರ ಟಿಜೆ ಅಬ್ರಾಹಂ, 'ಇ.ಡಿ ದಾಳಿ ನಡೆದದ್ದು ಒಳ್ಳೆಯ ಬೆಳವಣಿಗೆ. ಸಿದ್ದರಾಮಯ್ಯ ಕೇಸ್​ ಕೇವಲ 1 ಪರ್ಸೆಂಟ್​ ಮಾತ್ರ. ಮುಡಾದಲ್ಲಿ ಸಿಎಂ ಪ್ರಕರಣ ಮಾತ್ರವಲ್ಲ, ಇನ್ನೂ ಅನೇಕ ಕೇಸ್‌ಗಳಿವೆ. 2 ಸಾವಿರ ಕೋಟಿ ವರೆಗೂ ಅಕ್ರಮ  ನಡೆದಿದೆ. ಸ್ಕ್ಯಾಮ್​ ಅಂತ ಹೇಳೋದೇ ಈ ಕಾರಣಕ್ಕೆ. ಎಲ್ಲಾ ಪಕ್ಷದ ನಾಯಕರ ಬಂಡವಾಳವೂ ಇದೆ. ಭ್ರಷ್ಟಾಚಾರ ಮಾಡಿದ್ದೆಲ್ಲವೂ ಈಚೆ ಬರತ್ತೆ. ಇದು ಮುಡಾ ಅಲ್ಲ, ಎಲ್ಲರ ಬುಡಕ್ಕೆ ಬರಲಿದೆ. ಮುಡಾ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು'ಎಂದು ಹೇಳಿದ್ದಾರೆ. ‘ಪತ್ನಿ ಹೆಸರಲ್ಲಿ ಸಿಎಂ 14 ಸೈಟ್​ ಅಕ್ರಮವಾಗಿ ಪಡೆದಿದ್ದಾರೆ.ಮುಡಾದಲ್ಲಿ 5 ಸಾವಿರ ಕೋಟಿ ರೂಪಾಯಿ ಅಕ್ರಮವಾಗಿದೆ' ಎಂದು ಮತ್ತೊಬ್ಬ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಪತ್ನಿಗೆ ಭೂ ಹಂಚಿಕೆ ವಿವಾದದ ನಡುವೆ MUDA ಮುಖ್ಯಸ್ಥ ಕೆ. ಮರಿಗೌಡ ರಾಜೀನಾಮೆ

ಸಹಕಾರ ನೀಡಲಿದ್ದೇವೆ: 'ಇ.ಡಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.ಇ.ಡಿ ಕೇಳುವ ಎಲ್ಲ ದಾಖಲೆ ಒದಗಿಸುತ್ತೇವೆ' ಎಂದು ಮೈಸೂರು ಮುಡಾ ಕಾರ್ಯದರ್ಶಿ ಪ್ರಸನ್ನ ಹೇಳಿದ್ದಾರೆ. ‘ಇಂದು, ನಾಳೆಯೂ ಇ.ಡಿ. ಮುಂದುವರಿಯಲಿದೆ. ಮುಡಾ ಕಾರ್ಯವೈಖರಿಗೆ ಬಗ್ಗೆ ಪ್ರಾಥಮಿಕ ಮಾಹಿತಿ ಕೇಳಿದೆ.ಇ.ಡಿ ದಾಳಿ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ' ಎಂದು ತಿಳಿಸಿದ್ದಾರೆ.

ಆನೆ ಕದ್ದರೂ ಕಳ್ಳ, ಅಡಿಕೆ ಕದ್ರೂ ಕಳ್ಳಾನೇ, ಅದಕ್ಕೆ ಸಿದ್ದುಗೆ ಜನ ಸೈಟ್ ಕಳ್ಳ, ಸೈಟ್ ಕಳ್ಳ ಅಂತಾರೆ: ಛಲವಾದಿ

Latest Videos
Follow Us:
Download App:
  • android
  • ios