ಕೊರೋನಾ ಬಗ್ಗೆ ಮತ್ತಷ್ಟು ನಿಗಾವಹಿಸಲು ಸೂಚನೆ: ಕೇಂದ್ರದಿಂದ ಬಂತು ಎಚ್ಚರಿಕೆ ಸಂದೇಶ
* ಕೊರೋನಾ ಬಗ್ಗೆ ಮತ್ತಷ್ಟು ನಿಗಾವಹಿಸಲು ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಗೃಹ ಇಲಾಖೆಯಿಂದ ಪತ್ರ
* ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ
* ಟೆಸ್ಟ್, ಟ್ರ್ಯಾಕ್, ಟ್ರಿಟ್, ವ್ಯಾಕ್ಸಿನ್ ತಂತ್ರಗಾರಿಕೆ ಮುಂದುವರೆಸುವಂತೆ ಸಲಹೆ
ಬೆಂಗಳೂರು, (ಸೆ.28): ಕೊರೋನಾ (Covid19) ಬಗ್ಗೆ ಮತ್ತಷ್ಟು ನಿಗಾವಹಿಸುವಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲ ಅವರು ಕರ್ನಾಟಕ (Karnataka) ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದಾರೆ.
ಪತ್ರದ ಮೂಲಕ ಸೂಚಿಸಿರುವ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲ, ಹಬ್ಬದ ದಿನಗಳಲ್ಲಿ ಕೊರೋನಾ ನಿಯಮಗಳ ಪಾಲನೆ ಕುರಿತು ಎಚ್ಚರ ವಹಿಸುವಂತೆ ಹೇಳಿದ್ದಾರೆ. ಅಲ್ಲದೇ ಟೆಸ್ಟ್, ಟ್ರ್ಯಾಕ್, ಟ್ರಿಟ್, ವ್ಯಾಕ್ಸಿನ್ ತಂತ್ರಗಾರಿಕೆ ಮುಂದುವರೆಸಲು ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಗೆ ಸೂಚನೆ ಕೊಟ್ಟಿದ್ದಾರೆ.
ಬೆಂಗಳೂರು: ಒಂದೇ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್
ಎಲ್ಲ ಜಿಲ್ಲಾ ಮತ್ತು ಇತರ ಸ್ಥಳೀಯ ಆಡಳಿತಾಧಿಕಾರಿಗಳು ಆರೋಗ್ಯ ಇಲಾಖೆಯ ಸೂಚನೆಯಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಂಬರುವ ಹಬ್ಬಸಾಲಿನಲ್ಲಿ ದೊಡ್ಡಮಟ್ಟದಲ್ಲಿ ಜನಸಂದಣಿ ಸೇರದಂತೆ ತಡೆಯಬೇಕು. ಎಚ್ಚರಿಕೆಯಿಂದ ವರ್ತಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದಿದ್ದಾರೆ.
ಪರೀಕ್ಷೆಯ ಪ್ರಮಾಣ ಹೆಚ್ಚಿಸುವುದು, ಸೋಂಕಿತರನ್ನು ಪತ್ತೆ ಮಾಡುವುದು ಮತ್ತು ಲಸಿಕೆ ಹಾಕುವ ಪ್ರಮಾಣ ಜಾಸ್ತಿ ಮಾಡುವ ಬಗ್ಗೆ ಗಮನ ನೀಡಬೇಕು. ಲಸಿಕೆ ಪಡೆಯಲು ಅರ್ಹರಾದ ವಯೋಮಾನಗಳ ಗುಂಪುಗಳನ್ನು ಗುರುತಿಸಿ ಆದ್ಯತೆ ಮೇಲೆ ಎರಡೂ ಡೋಸ್ ಲಸಿಕೆ ಕೊಡಬೇಕು ಎಂದು ತಿಳಿಸಿದ್ದಾರೆ.