ನವದೆಹಲಿ, (ಜ.29): ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕಕ್ಕೆ 949.49 ಕೋಟಿ ರೂ. ಬರ ಪರಿಹಾರ ನೀಡಲು ಅನುಮೋದನೆ ಸಿಕ್ಕಿದೆ. 

ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ  6 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಒಟ್ಟು 7,214 ಕೋಟಿ ನೆರವು ನೀಡುವ ಸಂಬಂಧ ಒಪ್ಪಿಗೆ ಸಿಕ್ಕಿದೆ.

152 ತಾಲೂಕುಗಳಿಗೆ 50 ಕೋಟಿ ರೂಪಾಯಿ ಬಿಡುಗಡೆ!

2018-19ರ ಸಾಲಿನಲ್ಲಿ ಉಂಟಾದ ಬರ, ಭೂಕುಸಿತ, ಮಳೆ, ಸೈಕ್ಲೋನ್​​ ಗಜಾ ಹಾಗೂ ಪ್ರವಾಹಕ್ಕೆ ಕೇಂದ್ರದಿಂದ ಪರಿಹಾರ ನೀಡುವ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. 

ಅದರಂತೆ  ಒಟ್ಟು 7,214 ಕೋಟಿ ನೆರವು ನೀಡಲು ಒಪ್ಪಿಗೆ ಸಿಕ್ಕಿದ್ದು, ಈ ಪೈಕಿಕರ್ನಾಟಕಕ್ಕೆ ಬರಗಾಲ ಪರಿಹಾರದ ಅಡಿಯಲ್ಲಿ ಬರೊಬ್ಬರಿ 949.49 ಕೋಟಿ ರೂ. ನೀಡಿದೆ. 

ರೆಸಾರ್ಟ್ ಮೋಜು-ಮಸ್ತಿ ಮುಗಿಸಿಬಂದ ಬಿಜೆಪಿಯಿಂದ ಬರಗಾಲ ವೀಕ್ಷಣೆ ಟೂರ್

ಇನ್ನುಳಿದಂತೆ ಹಿಮಾಚಲಪ್ರದೇಶಕ್ಕೆ ನೆರೆ ಹಾಗೂ ಭೂಕುಸಿತದ ಪರಿಹಾರವಾಗಿ 317 ಕೋಟಿ ರೂ., ಉತ್ತರಪ್ರದೇಶಕ್ಕೆ 191 ಕೋಟಿ ನೆರೆ ಪರಿಹಾರ, ಆಂಧ್ರಪ್ರದೇಶಕ್ಕೆ 900 ಕೋಟಿ ಬರ ಪರಿಹಾರ, ಗುಜರಾತ್​ಗೆ 127 ಕೋಟಿ ಬರ ಪರಿಹಾರ, ಮಹಾರಾಷ್ಟ್ರಕ್ಕೆ 4,714 ಕೋಟಿ ಬರ ಪರಿಹಾರ ಹಾಗೂ ಪುದುಚೆರಿಗೆ ಸೈಕ್ನೋನ್​​ ಹಾನಿಯ ಪರಿಹಾರಕ್ಕೆ 13 ಕೋಟಿ ರೂ. ನೀಡಲಾಗಿದೆ. 

ಮಹಾರಾಷ್ಟ್ರಕ್ಕೆ 4,714 ಕೋಟಿ ರೂ. ಬರ ಪರಿಹಾರ ನೀಡಿದ್ದು ಕರ್ನಾಟಕಕ್ಕೆ ಕೇವಲ 949.49 ಕೋಟಿ ರೂ. ನೀಡಲಾಗಿದೆ. ಕೇಂದ್ರ ಸರ್ಕಾರ ಏಕೆ ತಾರತಮ್ಯ ಮಾಡುತ್ತಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.