Asianet Suvarna News Asianet Suvarna News

ಹೊಸ ಕೆಲಸ ಹುಡುಕಿಕೊಂಡಾದರೂ ಪತ್ನಿಗೆ ಜೀವನಾಂಶ ನೀಡಬೇಕು: ಹೈಕೋರ್ಟ್‌

ದುಡಿಯಲು ಸಾಮರ್ಥ್ಯವಿರುವ ಪತಿ, ತನ್ನ ಪತ್ನಿ ಮತ್ತು ಮಗುವನ್ನು ಪೋಷಣೆ ಮಾಡಬೇಕು. ಉದ್ಯೋಗ ಇಲ್ಲದಿದ್ದರೆ ಉದ್ಯೋಗ ಹುಡುಕಿಕೊಂಡು ಸಂಪಾದನೆ ಮಾಡಿ ಪೋಷಣೆ ಮಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ. 

Unemployment No Excuse For Able Bodied Man Must Find Avocation To Maintain Wife and Children Says Karnataka High Court gvd
Author
First Published Feb 14, 2023, 4:40 AM IST

ಬೆಂಗಳೂರು (ಫೆ.14): ದುಡಿಯಲು ಸಾಮರ್ಥ್ಯವಿರುವ ಪತಿ, ತನ್ನ ಪತ್ನಿ ಮತ್ತು ಮಗುವನ್ನು ಪೋಷಣೆ ಮಾಡಬೇಕು. ಉದ್ಯೋಗ ಇಲ್ಲದಿದ್ದರೆ ಉದ್ಯೋಗ ಹುಡುಕಿಕೊಂಡು ಸಂಪಾದನೆ ಮಾಡಿ ಪೋಷಣೆ ಮಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ. ವಿಚ್ಛೇದನ ಪಡೆಯುವ ಹಾದಿಯಲ್ಲಿರುವ ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ವಾಸು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ತಾನು ಹಲವು ಕಾಯಿಲೆಗಳಿಂದ ನರಳುತ್ತಿದ್ದೇನೆ. ಸರಿಯಾದ ಉದ್ಯೋಗವಿಲ್ಲ. ತಿಂಗಳಿಗೆ 15 ಸಾವಿರಕ್ಕಿಂತ ಹೆಚ್ಚು ದುಡಿಯಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಪತ್ನಿ ಮತ್ತು ನಾಲ್ಕು ವರ್ಷದ ಮಗನಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬ ಮೇಲ್ಮನವಿದಾರ ವಾಸು ವಾದ ಮಂಡಿಸಿದ್ದರು. ಆ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್‌, ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂಬ ಪತಿಯ ವಾದ ಒಪ್ಪಲಾಗದು. ದುಡಿಯಲು ಸಮರ್ಥನಿರುವ ಪತಿಗೆ ಉದ್ಯೋಗವಿಲ್ಲದಿದ್ದರೆ ಉದ್ಯೋಗವನ್ನು ಹುಡುಕಿಕೊಂಡು ದುಡಿದು ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡಲೇಬೇಕು. ಪತಿ ಮತ್ತು ಮಗುವಿಗೆ 10 ಸಾವಿರ ರು. ಜೀವನಾಂಶ ನೀಡಬೇಕೆನ್ನುವುದು ದುಬಾರಿಯಲ್ಲ ಎಂದು ಅಭಿಪ್ರಾಯಪಟ್ಟಿತು.

ಶಾಸಕ ಕುಮಾರ್‌ ಭ್ರಷ್ಟ ಶಾಸ​ಕ: ಮಧು ಬಂಗಾರಪ್ಪ ಆರೋಪ

ತಿಂಗಳ ಜೀವನಾಂಶ 10 ಸಾವಿರ ಹಣ ಹೊಂದಿಸಲಾಗದು ಎಂಬ ಪತಿಯ ವಾದ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದೇ ಆಗಿದೆ. ಅಲ್ಲದೆ, ಪತಿ ತಾನೂ ಯಕೃತ್‌ ಸಂಬಂಧಿ ರೋಗದಿಂದ ಬಳಲುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ಪುಷ್ಟೀಕರಿಸಲು ವಾಸು ಒದಗಿಸಿರುವ ದಾಖಲೆಗಳು ತೃಪ್ತಕರವಾಗಿಲ್ಲ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡಲೇಬೇಕು. ಕೌಟುಂಬಿಕ ನ್ಯಾಯಾಲದ ಆದೇಶದಂತೆ ಅರ್ಜಿದಾರರು ಪ್ರತಿ ತಿಂಗಳು ಪತ್ನಿಗೆ 6,000 ಹಾಗೂ ನಾಲ್ಕು ವರ್ಷದ ಮಗುವಿಗೆ 4,000 ಜೀವನಾಂಶ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

Follow Us:
Download App:
  • android
  • ios