'ನೀವೇನೂ ಮಾಡೋದು ಬೇಡ ಸುಮ್ಮನಿದ್ದರೆ ಸಾಕು..'  ಬಾಂಬ್ ಕಟ್ಟಿಕೊಂಡು ಪಾಕಿಸ್ತಾನ ಗಡಿಗೆ ಹೋಗಿ ಹೋರಾಡ್ತಿನಿ ಎಂಬ ಸಚಿವ ಜಮೀರ್ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದರು.


'ವಿಜಯಪುರ: 'ನೀವೇನೂ ಮಾಡೋದು ಬೇಡ ಸುಮ್ಮನಿದ್ದರೆ ಸಾಕು..' ಬಾಂಬ್ ಕಟ್ಟಿಕೊಂಡು ಪಾಕಿಸ್ತಾನ ಗಡಿಗೆ ಹೋಗಿ ಹೋರಾಡ್ತಿನಿ ಎಂಬ ಸಚಿವ ಜಮೀರ್ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದರು.

ಇಂದು ವಿಜಯಪುರದ ಲಕ್ಷ್ಮೀ ನರಸಿಂಹ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಜಮೀರ್ ಭಾಷಣ ಬೇಡ ಮಿಲಿಟರಿಯನ್ನ ನಂಬಿ ಸುಮ್ಮನಿರಿ, ಶಾಂತವಾಗಿರಿ ಸಾಕು ಎಂದು ತಿರುಗೇಟು ನೀಡಿದರು.

ನಮ್ಮ ದೇಶದ ಸೇನೆ ಬಲವಾಗಿ, ಸೈನ್ಯದ ಶಕ್ತಿ, ಸೈನಿಕರು, ಇಂಟೆಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ತೋಚಿದಂತೆ ಹೇಳಿಕೆ ಕೊಡದೆ ಬಾಯಿಮುಚ್ಚಿಕೊಂಡಿದ್ದರೆ ಸಾಕು. ಜಮೀರ್ ಯಾವುದೇ ಹೇಳಿಕೆ ಕೊಡದೇ ಶಾಂತವಾಗಿರೋದೇ ದೇಶಕ್ಕೆ ಮಾಡುವ ದೊಡ್ಡ ಸೇವೆ ಎಂದರು ಮುಂದುವರಿದು, ಜಮೀರ್ ದೊಡ್ಡ ತ್ಯಾಗಕ್ಕೆ ಹೊರಟಿದ್ದಾರೆ. ಅವರಂಥ ದೊಡ್ಡ ತ್ಯಾಗದವರು ಯಾರೂ ಇಲ್ಲ. ನೀವು ನಿಮ್ಮ ಪಕ್ಷದವರು ಮೊದಲು ಶಾಂತವಾಗಿರಿ. ಜಮೀರ್, ಸಂತೋಷ ಲಾಡ್, ಖರ್ಗೆ, ಸಿದ್ದರಾಮಯ್ಯ ಸುಮ್ಮನಿದ್ದರೆ, ಡಿಕೆ ಶಿವಕುಮಾರ ಟೆರರಿಸ್ಟ್‌ಗಳನ್ನ ಬ್ರದರ್ಸ್ ಅನ್ನದಿದ್ರೆ ಸಾಕು, ಭಾರತೀಯ ಸೇನೆ ಎಲ್ಲವನ್ನೂ ನಿಭಾಯಿಸುತ್ತೆ ಎಂದರು.

ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲ: ಸರ್ಕಾರಿ ಬಸ್ ಚಾಲಕನಿಗೇ ಮಚ್ಚು ತೋರಿಸಿ ಪುಂಡನ ರೌಡಿಸಂ!

ಈಗ ಕರ್ನಾಟಕದಲ್ಲಿ ಪ್ರಕ್ಷುಬ್ಧ ವಾತಾವರಣ:

ಕರ್ನಾಟಕದಲ್ಲಿ ಪ್ರಸ್ತುತ ಪ್ರಕ್ಶುಬ್ದ ವಾತಾವರಣ ಸೃಷ್ಟಿಯಾಗಿದೆ. ಒಂದು ರೀತಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಡೆಯುತ್ತಿದೆ. ಹೇಳಿಕೆಗಳು ಹಲ್ಲೆಗಳ ಬಹಳ ಮನಸಿಗೆ ನೋವುಂಟು ಮಾಡಿದೆ. ರಾಜಕಾರಣಕ್ಕಾಗಿ ಕೆಲ ರಾಜಕಾರಣಿಗಳು ಯಾವ ಮಟ್ಟಕ್ಕೂ ಇಳಿಯುತ್ತಿದ್ದಾರೆ. ಒಬ್ಬರು ಹೇಳ್ತಾರೆ ಮುಸಲ್ಮಾನರಿಗೆ ತೊಂದರೆ ಆಗಿದ್ದಕ್ಕೆ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗ್ತಾರೆ ಅಂತಾ. ಆದರೆ ಅವರು ಹಾಗೆ ಕೂಗಲು ನೂರಾ ಎಂಟು ಕಾರಣಗಳಿವೆ ಅಂತಾ ಹೇಳಿದ್ದಾರೆ ನಮ‌್ ಧಾರವಾಡ ಜಿಲ್ಲಾ ಮಂತ್ರಿ. ಅಂದ್ರೆ ಹಿಂದೆ ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇತ್ತಲ್ಲ? ಆಗಲೂ ಕೂಗ್ತಿದ್ದರಲ್ಲ ಆಗ ಏನು ಕಾರಣ ಇತ್ತು? ಎಂದು ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ವಿರುದ್ಧ ವಾಗ್ದಾಳಿ ನಡೆಸಿದರು.

ಜನ ಎಲ್ಲ ಬಾಯಿಗೆ ಬಂದ ಹಾಗೆ ಬೈದ ತಕ್ಷಣ ಇವರು ಪಾಕಿಸ್ತಾನ ಮೇಲೆ ಅಟ್ಯಾಕ್ ಮಾಡಬೇಕು ಅಂತಾ ಹೊಸದು ಶುರು ಮಾಡಿದ್ದಾರೆ. ಅಲ್ಲಿ ದೆಹಲಿಯಲ್ಲಿ ಇವರು ಹೇಳ್ತಾರೆ ಸರಕಾರ ನಿರ್ಧಾರಕ್ಕೆ ನಾವು ಬದ್ಧ ಅಂತಾ. ಆದರೆ ಇಲ್ಲಿ ಬರ್ತಾರೆ ಇಂಟಲಿಜೆನ್ಸ್ ಫೇಲ್ಯೂರ್ ಅಂತಾ. ಈ ಹಿಂದೆ ಇಂಟಲಿಜೆನ್ಸ್ ಏನೂ ಫೆಲ್ಯೂರ್ ಆಗಿತ್ತಲ್ಲ. ನಮ್ಮ ಸರ್ಕಾರದಲ್ಲಿ ದೇಶದಲ್ಲಿ ಕಾಶ್ಮೀರದ ಕೆಲ ಸಣ್ಣಪುಟ್ಟ ಪ್ರದೇಶ ಬಿಟ್ರೆ ಹಿಂದಿನ ಇವರ ಸರ್ಕಾರದಲ್ಲಿದ್ದಂತೆ ಮುಂಬೈ ದಾಳಿಯಂತೆ ಎಲ್ಲೂ ಭಯೋತ್ಪಾದಕ ಚಟುವಟಿಕೆ ಇಲ್ಲ. 26 ಜನ ಅಮಾಯಕರು ಸತ್ತಿದ್ದರ ಬಗ್ಗೆ ನಮಗೆ ಬಹಳ ನೋವಿದೆ. ಒರ್ವ ವ್ಯಕ್ತಿ ಸತ್ತಿದ್ದರು ನಮಗೆ ಅಷ್ಟೆ ನೋವಾಗುತ್ತೆ. ಆದ್ರೆ ಈ ಭಯೋತ್ಪಾದನೆಯನ್ನ ನಾವೆಲ್ಲ ಒಟ್ಟಾಗಿ ಪ್ರಯತ್ನ ಮಾಡಿದ್ದರಿಂದ ಬಹಳಷ್ಟು ಕಂಟ್ರೋಲ್ ನಲ್ಲಿದೆ ಎಂದು.

ಇದನ್ನೂ ಓದಿ: Interview | ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್‌

 ಈಗ ದೇಶದೊಳಗೆ ನಕ್ಸಲಿಸಂ ಕೂಡ ಬಹುತೇಕ ಕಡಿಮೆ ಆಗಿದೆ. ಭಯೋದ್ಪಾದನೆ ಕೂಡ ಕಡಿವಾಣ ಹಾಕಲು ನಾವು ಕಠಿಣ ಕ್ರಮ ಕೈಗೊಳ್ತೇವೆ. ಕಾಂಗ್ರೆ್ಸ್‌ವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ,ಏರ್ ಸ್ಟ್ರೀಕ್ ಬಗ್ಗೆ ನಮಗೆ ಡೌಟ್ ಇದೆ ಅಂತಿದ್ದಾರೆ. ಪಾಕಿಸ್ತಾನದವರು ನೀರು ಬಿಡಿ ಅಂತಾ ಕಿರಿ ಕಿರಿ ಶುರುಮಾಡಿದ್ದಾರೆ. ಇತ್ತ ಕಾಂಗ್ರೆಸ್‌ನವರು ನೀರು ಎಲ್ಲಿ ಇಟ್ಟುಕೊಳ್ತೀರಿ ಅಂತಾ ಪರೋಕ್ಷವಾಗಿ ಪಾಕಿಸ್ತಾನಕ್ಕೆ ನೀರು ಬಿಡಿ ಅಂತಾ ಹೇಳ್ತಿದ್ದಾರೆ. ನೀರು ಇಲ್ಲದೆ ಇದ್ರೆ ಏನಾಗುತ್ತೆ ಅಂತಾ ಪಾಕಿಸ್ತಾನದವರಿಗೆ ಗೊತ್ತಿದೆ.ಆದರೆ ಈ ಕಾಂಗ್ರೆಸ್‌ನವರಿಗೆ ಗೊತ್ತಿಲ್ಲ. ಇವರಿಗೆ ಗೊತ್ತಿಲ್ಲಂದ್ರೆ ಸುಮ್ಮನಿರಬೇಕು ಎಂದರು.