ಉದ್ಧವ್ ಉದ್ಧಟತನ ಹೇಳಿಕೆ: ಮತ್ತೆ ಬೆಳಗಾವಿ ಗಡಿ ವಿವಾದ ಕೆದಕಿದ ಮಹಾ ಸಿಎಂ

ಮಹಾರಾಷ್ಟ್ರ ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ಕರ್ನಾಟಕದ ತಂಟೆಗೆ ಬಂದಿದ್ದಾರೆ. ಉದ್ಧಟತನ ಹೇಳಿಕೆ ಮೂಲಕ ಮತ್ತೆ ಬೆಳಗಾವಿ ಗಡಿ ವಿವಾದ ಕೆದಕಿದ್ದಾರೆ.

Uddhav Thackeray vows to incorporate Karnataka occupied areas into Maharashtra rbj

ಮುಂಬೈ, (ಜ.17): ಬಹುಸಂಖ್ಯೆಯಲ್ಲಿರುವ ಮರಾಠಿ ಭಾಷಿಗರ ಮತ್ತು ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿವರ್ಷ ಆಯೋಜಿಸುವ ಜನವರಿ 17 ರ ಹುತಾತ್ಮರ ದಿನ ಕಾರ್ಯಕ್ರಮದ ಪ್ರಮುಕ್ತ ಟ್ವೀಟ್ ಮಾಡಿರುವ ಉದ್ಧವ್ ಠಾಕ್ರೆ, ಮರಾಠಿ ಮಾತನಾಡುವ ಜನರು ಬಹುಸಂಖ್ಯೆಯಲ್ಲಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ. ಬಹುಸಂಖ್ಯೆಯಲ್ಲಿ ಮರಾಠಿ ಸಂಸ್ಕೃತಿ ಹೊಂದಿರುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮಹಾ ಡಿಸಿಎಂ ಪವಾರ್‌ ಹೇಳಿಕೆಗೆ ಪಕ್ಷಾತೀತ ಆಕ್ರೋಶ, ಕರ್ನಾಟಕ ಕೆಂಡ!

ಕರ್ನಾಟಕದ ಪ್ರದೇಶಗಳನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇವೆ ಎನ್ನುವ ಮೂಲಕ ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿ ವಿವಾದವನ್ನು ಮತ್ತೆ ಕೆದಕಿದೆ.

Latest Videos
Follow Us:
Download App:
  • android
  • ios