300 ಲಂಚ ಪಡೆದು ಕೆಲಸ ಕಳೆದುಕೊಂಡ ಟೈಪಿಸ್ಟ್!
ಗಣೇಶ್ ಶೆಟ್ಟಿ ಎಂಬುವರ ಕೆಲಸವೊಂದು ಮಾಡಿಕೊಡಲು ಆತನಿಂದ 300 ರು ಲಂಚ ಪಡೆದ ಆರೋಪ ಕಾಂತಿಯ ಮೇಲಿತ್ತು. ಈ ಕುರಿತು ಗಣೇಶ್ ಶೆಟ್ಟಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದು ಇಲಾಖೆ ವಿಚಾರಣೆಯಲ್ಲಿ ಸಾಬೀತಾಗಿತ್ತು. ಇದರಿಂದ ಆಕೆಯನ್ನು ಸೇವೆಯಿಂದ ವಜಾಗೊಳಿಸಿ 2014ರ ಜು.24ರಂದು ಸರ್ಕಾರ ಆದೇಶಿಸಿತ್ತು.
ಬೆಂಗಳೂರು(ಅ.19): 300 ರು. ಲಂಚ ಪಡೆದ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಕಚೇರಿಯ ಟೈಪಿಸ್ಟ್ ಅನ್ನು (ಬೆರಳಚ್ಚುಗಾರ್ತಿ) ಸೇವೆಯಿಂದ ವಜಾಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮೈಸೂರು ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯಲ್ಲಿ ಬೆರಳಚ್ಚುಗಾರ್ತಿಯಾಗಿದ್ದ ಕಾಂತಿ ಎಂಬಾಕೆಯನ್ನು ಸಾರ್ವಜನಿಕರೊಬ್ಬರಿಂದ 300 ರು. ಲಂಚ ಸ್ವೀಕರಿಸಿದ ಆರೋಪದ ಮೇಲೆ ಸೇವೆಯಿಂದ ವಜಾಗೊಳಿಸಿ ರಾಜ್ಯ ಹಣಕಾಸು ಇಲಾಖೆ ಆದೇಶಿಸಿತ್ತು. ಆದರೆ, ಕಾಂತಿ ಅವರ ವಜಾ ಆದೇಶವನ್ನು ಕಡ್ಡಾಯ ನಿವೃತ್ತಿಯಾಗಿ ಕರ್ನಾಟಕ ಆಡಳಿತಾತ್ಮಕ ಮಾರ್ಪಡಿಸಿತ್ತು.
ಫಲಭರಿತ ತೆಂಗಿನ ಮರ ಕಡಿಯದಂತೆ ಹೈಕೋರ್ಟ್ ತಡೆ!
ನ್ಯಾಯಾಧಿಕರಣ (ಕೆಎಟಿ) ಈ ಆದೇಶ ರದು ಕೋರಿ ರಾಜ್ಯ ಸರ್ಕಾರದ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಇಲಾಖೆ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. .ಜಿ.ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ ಕಾಂತಿ ಅವರನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಪುರಸ್ಕರಿಸಿದೆ. ಪ್ರಕರಣದ ಇಲಾಖಾ ವಿಚಾರಣೆಯಲ್ಲಿ ಕಾಂತಿ ಲಂಚ ಪಡೆದುಕೊಂಡಿರುವ ಅಂಶ ಸಾಬೀತಾಗಿದೆ. ಅದರಿಂದಲೇ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಆರೋಪಿ ಮಹಿಳೆ ಲಂಚಕ್ಕೆ ಬೇಡಿಕೆಯಿಟ್ಟಿರುವುದು ಮತ್ತು ಪಡೆದಿರುವುದು ಗಂಭೀರ ಸಾಮಾಜಿಕ ನೈತಿಕ ತೆಯ ವಿಷಯವಾಗಿದೆ. ಹೀಗಿದ್ದರೂ ಆರೋಪಿಯನ್ನು ಸೇವೆಯಿಂದ ವಜಾಗೊ ಳಿಸಿದ ಆದೇಶವನ್ನು ಕಡ್ಡಾಯ ನಿವೃತ್ತಿಯಾಗಿ ಮಾರ್ಪಡಿಸಿದ ನ್ಯಾಯಾಧೀಕರಣದ ಕ್ರಮ ನಿಜಕ್ಕೂ ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತದೆ ಎಂದು ವಿಭಾಗೀಯ ಪೀಠ ಬೇಸರ ವ್ಯಕ್ತಪಡಿಸಿದೆ. ಅಲ್ಲದೆ, ಕಾಂತಿ ಅವರನ್ನು ಸೇವೆಯಿಂದ ವಜಾಗೊಳಿ ಸಿರುವ ಸರ್ಕಾರದ ಆದೇಶವನ್ನು ಮಾರ್ಪಡಿಸಿರುವುದಕ್ಕೆ ನ್ಯಾಯಾಧೀಕರಣ ಸಕಾರಣ ನೀಡಿಲ್ಲ. ಈ ಕ್ರಮ ನಿಜಕ್ಕೂ ಅಸಮರ್ಥನೀಯ ಹಾಗೂ ಅಸಮಂಜಸ. ಇಂತಹ ಆದೇಶವನ್ನು ಒಪ್ಪಲಾಗದು. ಪ್ರಕರಣದಲ್ಲಿ ರಾಜ್ಯ ಸರ್ಕಾ ರದ ಆದೇಶ ಸೂಕ್ತವಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಕೆಎಟಿ ಈ ಆದೇಶವನ್ನು ರದ್ದುಪಡಿಸಿದೆ.
300 ರು. ಲಂಚಕ್ಕೆ ಹೋಯ್ತು ಕೆಲಸ:
ಗಣೇಶ್ ಶೆಟ್ಟಿ ಎಂಬುವರ ಕೆಲಸವೊಂದು ಮಾಡಿಕೊಡಲು ಆತನಿಂದ 300 ರು ಲಂಚ ಪಡೆದ ಆರೋಪ ಕಾಂತಿಯ ಮೇಲಿತ್ತು. ಈ ಕುರಿತು ಗಣೇಶ್ ಶೆಟ್ಟಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದು ಇಲಾಖೆ ವಿಚಾರಣೆಯಲ್ಲಿ ಸಾಬೀತಾಗಿತ್ತು. ಇದರಿಂದ ಆಕೆಯನ್ನು ಸೇವೆಯಿಂದ ವಜಾಗೊಳಿಸಿ 2014ರ ಜು.24ರಂದು ಸರ್ಕಾರ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕಾಂತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ, ಕಾಂತಿ ಅವರು 11 ವರ್ಷ 5 ತಿಂಗಳು ಸೇವೆ ಸಲ್ಲಿಸಿದ್ದಾರೆ. ಮೇಲಾಗಿ ಆರೋಪಿತಳು ಮಹಿಳೆಯಾಗಿದ್ದಾರೆ ಎಂಬ ಕಾರಣ ನೀಡಿ ಸೇವೆಯಿಂದ ವಜಾಗೊಳಿಸಿದ್ದ ಸರ್ಕಾ ರದ ಆದೇಶವನ್ನು ಕಡ್ಡಾಯ ನಿವೃತ್ತಿಯಾಗಿ ಮಾರ್ಪ ಪಡಿಸಿತ್ತು.
ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸರ್ಕಾರ, ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಕಾರಣ ಸೇವೆಯಿಂದ ವಜಾ ಮಾಡಲಾಗಿದೆ. ಆದರೂ ಕೆಎಟಿಯು ವಜಾ ಆದೇಶವನ್ನು ಕಡ್ಡಾಯ ನಿವೃತ್ತಿ ಶಿಕ್ಷೆಯಾಗಿ ಬದಲಾ ಯಿಸಿರುವುದು ಕಾನೂನು ಬಾಹಿರ ಎಂದು ವಾದಿಸಿತ್ತು.