Asianet Suvarna News Asianet Suvarna News

ಬೀದರ್‌, ರಾಮನಗರದ 2 ಗ್ರಾಮ ಸ್ವಯಂ ಲಾಕ್‌ಡೌನ್‌!

ಬೀದರ್‌, ರಾಮನಗರದ 2 ಗ್ರಾಮ ಸ್ವಯಂ ಲಾಕ್‌ಡೌನ್‌| ಬಾವಗಿ, ಕುದೂರು 10-15 ದಿನ ಬಂದ್‌ಗೆ ಜನರ ನಿರ್ಧಾರ| ಅಗತ್ಯ ವಸ್ತು ಖರೀದಿಗೆ ಸಮಯ, ಹೊರಗಿನವರಿಗೆ ನಿಷೇಧ

Two Villages From Bidar And Ramanagar Declarre Self Lockdown Outsiders Entry Ban pod
Author
Bangalore, First Published Apr 20, 2021, 7:47 AM IST

ರಾಮನಗರ(ಏ.20): ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡುತ್ತದೆಯೋ ಅಥವಾ ಇತರೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತದೆಯೋ ಎಂಬುದು ಮಂಗಳವಾರ ತಿಳಿದುಬರಲಿದೆ. ಈ ನಡುವೆ ಬೀದರ್‌ ತಾಲೂಕಿನ ಬಾವಗಿ ಮತ್ತು ರಾಮನಗರ ಜಿಲ್ಲೆಯ ಕುದೂರು ಗ್ರಾಮಸ್ಥರು ತಮ್ಮ ಊರಿನಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್‌ ಜಾರಿಗೊಳಿಸಿದ್ದಾರೆ.

ಬೀದರ್‌ ತಾಲೂಕಿನ ಸಂಗೊಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಗಿ ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆ ಇದ್ದು, ಈಗಾಗಲೇ 6 ಜನರಿಗೆ ಸೋಂಕು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ 6 ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮದ ಹಿರಿಯರೆಲ್ಲರೂ ಸೇರಿ ಮುಂದಿನ 10 ದಿನಗಳವರೆಗೆ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಬೆಳಗ್ಗೆ ಹಾಗೂ ಸಂಜೆ 6ರಿಂದ 8ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಮಕ್ಕೆ ಯಾರೊಬ್ಬರೂ ಹೊರಗಿನವರು ಬರದಂತೆ ಎಚ್ಚರ ವಹಿಸಲು ತೀರ್ಮಾನಿಸಲಾಗಿದೆ.

ಕುದೂರಲ್ಲಿಯೂ ಲಾಕ್‌ಡೌನ್‌:

ರಾಮನಗರ ಜಿಲ್ಲೆ ಕುದೂರು ಗ್ರಾಮದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏ.20ರಿಂದ 15 ದಿನಗಳ ಕಾಲ ಪ್ರತಿ​ನಿತ್ಯ ಮಧ್ಯಾಹ್ನ 1 ಗಂಟೆಯ ನಂತರ ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲು ಸ್ಥಳೀಯ ಗ್ರಾ.ಪಂ. ಹಾಗೂ ವರ್ತಕರ ಸಂಘ ನಿರ್ಧ​ರಿ​ಸಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವ್ಯಾಪಾರ ವಹಿವಾಟುಗಳು ಇರುತ್ತವೆ. ನಂತರ ಮೆಡಿಕಲ್‌ ಸ್ಟೋರ್‌, ಆಸ್ಪತ್ರೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟು, ಹೋಟೆಲ್‌ಗಳು ಬಂದ್‌ ಆಗಲಿವೆ.

Follow Us:
Download App:
  • android
  • ios