ಬೆಂಗಳೂರು(ಜೂ.29): ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮತ್ತಿಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಎರಡು ಪರೀಕ್ಷೆ ಬರೆದಿರುವ ಮತ್ತು ಬಳ್ಳಾರಿಯಲ್ಲಿ ಮೊದಲ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಭಾನುವಾರ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಉಳಿದ ಪರೀಕ್ಷೆಗಳಿಗೆ ಕೂರಲು ಈ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

ಕಾಪುವಿನ ವಿದ್ಯಾರ್ಥಿನಿ ಪ್ರತಿಭಾವಂತೆಯಾಗಿದ್ದು, ಶನಿವಾರವಷ್ಟೇ ಈಕೆಯ ತಂದೆಗೆ ಸೋಂಕು ದೃಢಪಟ್ಟಿತ್ತು. ಈ ಹಿಂದೆ ಪರೀಕ್ಷಾ ಕೇಂದ್ರದಲ್ಲಿ ವ್ಯಕ್ತಿಗತ ಅಂತರ, ಸ್ಯಾನಿಟೈಸರ್‌, ಮಾÓ್ಕ… ಇತ್ಯಾದಿ ಸುರಕ್ಷತೆಗಳನ್ನು ಪಾಲಿಸಿರುವುದರಿಂದ ಇತರೆ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಭೀತಿ ಇಲ್ಲ. ಯಾರಿಗೂ ಆತಂಕ ಬೇಡ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಮನೆಯಲ್ಲೇ ಕೊರೋನಾ ಪರೀಕ್ಷೆ ಮಾಡಲು ಬರಲಿದೆ ಹೊಸ ಟೆಸ್ಟ್‌ ಕಿಟ್‌ !

ಅಪಘಾತದ ಬಳಿಕ ಬಯಲು: ಇನ್ನು ಬಳ್ಳಾರಿ ವಿದ್ಯಾರ್ಥಿ ಜೂ.25ರಂದು ವಿಸ್ಡಮ… ಲ್ಯಾಂಡ್‌ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಇಂಗ್ಲಿಷ್‌ ಪರೀಕ್ಷೆ ಬರೆದಿದ್ದ. ನಂತರ ಸ್ನೇಹಿತರ ಜತೆಗೆ ಕಪಗಲ್ಲು ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಬೈಕ್‌ ಸ್ಕಿಡ್‌ ಆಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾಗ ವೇಳೆ ಮಾಡಿದ್ದ ಸ್ವಾ್ಯಬ್‌ ಟೆಸ್ಟ್‌ನಲ್ಲಿ ಇದೀಗ ಕೊರೋನಾ ದೃಢಪಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆತನ ಜತೆಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಬರೆಯಲು ವ್ಯವಸ್ಥೆ ಮಾಡಲಾಗಿದೆ.