* ಕಲ್ಯಾಣ ಕರ್ನಾಟಕದ ಕೆಲಭಾಗಗಳಲ್ಲಿ ಮಳೆ* ಬಿರುಗಾಳಿ, ಆಲಿಕಲ್ಲು ಮಳೆಗೆ ನೆಲಕ್ಕುರುಳಿದ ಕೋಳಿ ಫಾರ್ಮ್ ಶೆಡ್‌ಗಳು* ತೆಲಿಗಿ ಬಳಿ ಸಿಡಿಲಿಗೆ 18 ಕುರಿಗಳ ಸಾವು
ಬೆಂಗಳೂರು(ಏ.23): ಕಲ್ಯಾಣ ಕರ್ನಾಟಕದ(Kalyana Karnataka) ಕೆಲಭಾಗಗಳಲ್ಲಿ ಶುಕ್ರವಾರ ಬೇಸಿಗೆ ಮಳೆಯಾಗಿದ್ದು(Rain) ಬಾಲಕ ಸೇರಿ ಇಬ್ಬರು ಸಿಡಿಲಿಗೆ(Lightning Strike) ಬಲಿಯಾಗಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಬಾಲಕ ನಾಗರಾಜ(11) ಹೊಲಕ್ಕೆ ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ(Death). ಕಲಬುರಗಿ ಜಿಲ್ಲೆ ರೇವನೂರ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಶುಕ್ರವಾರ ಸಂಜೆ ಶೇಂಗಾ ಬಿಡಿಸುತ್ತಿದ್ದ ರೈತ ಮಹಾದೇವಪ್ಪ(44) ಸಿಡಿಲಿಗೆ ಬಲಿಯಾಗಿದ್ದಾರೆ.
ಬಿರುಗಾಳಿ, ಆಲಿಕಲ್ಲು ಮಳೆಗೆ ನೆಲಕ್ಕುರುಳಿದ ಕೋಳಿ ಫಾರ್ಮ್ ಶೆಡ್‌ಗಳು
ಕುರುಗೋಡು: ಬಿರುಗಾಳಿ ಜತೆ ಆಲಿಕಲ್ಲು ಮಳೆ(Rain) ಸುರಿದ ಪರಿಣಾಮ ಹತ್ತಕ್ಕೂ ಹೆಚ್ಚು ಕೋಳಿ ಫಾರ್ಮ್ ಶೆಡ್‌ಗಳು ನೆಲಕ್ಕುರುಳಿ ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಏಳುಬೆಂಚಿ ಗ್ರಾಮದ ಬಳಿ ಜರುಗಿದೆ.
Davanagere: ಅಕಾಲಿಕ ಮಳೆ ಅವಾಂತರ: ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗಿ ಸಂಚಾರಕ್ಕೆ ಪರದಾಟ
ದೇವರಮನಿ ಹೊನ್ನೂರ ಸ್ವಾಮಿ, ಹೋಗಪ್ಪ, ಸಂಪತ್‌ಕುಮಾರ್ ಹಾಗೂ ಮಾರುತಿ ಎಂಬವರಿಗೆ ಸೇರಿದ ಕೋಳಿ ಫಾಮ್‌ರ್‍ನಲ್ಲಿ 35 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಸಾಕಲಾಗಿತ್ತು. ದಿಢೀರನೆ ಸುರಿದ ಆಲಿಕಲ್ಲು ಮಳೆಗೆ ಶೆಡ್‌ಗಳೆಲ್ಲಾ ಸಂಪೂರ್ಣವಾಗಿ ನಾಶವಾಗಿವೆ. ಮೂರು ಸಾವಿರಕ್ಕೂ ಹೆಚ್ಚು ಕೋಳಿಗಳು(Chicken) ಸತ್ತಿವೆ ಹಾಗೂ ಶೆಡ್‌ಗೆ ಹಾನಿಯಾಗಿದೆ. ಶೆಡ್‌ಗಳ ನಿರ್ಮಾಣಕ್ಕೆಂದು ಸಾಕಷ್ಟುಹಣ ಖರ್ಚು ಮಾಡಲಾಗಿತ್ತು, ಭಾರಿ ಪ್ರಮಾಣದಲ್ಲಿ ನಷ್ಟಸಂಭವಿಸಿದೆ. ರೈತರಿಗೆ ಧೈರ್ಯ ತುಂಬಲು ಸರ್ಕಾರ ಆರ್ಥಿಕ ಸಹಾಯ ಮಾಡಬೇಕೆಂದು ಕೋಳಿ ಸಾಕಣೆದಾರರಾದ ಸಂಪತ್‌ಕುಮಾರ್ ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಕುರುಗೋಡು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ತೆಲಿಗಿ ಬಳಿ ಸಿಡಿಲಿಗೆ 18 ಕುರಿಗಳ ಸಾವು
ಹರಪನಹಳ್ಳಿ(Harapanhalli): ಸಿಡಿಲಿಗೆ 18 ಕುರಿಗಳು ಸಾವನ್ನಪ್ಪಿದ ಘಟನೆ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಕೆರೆಯಲ್ಲಿ ಶುಕ್ರವಾರ ಸಂಜೆ ಜರುಗಿದೆ. ತಿಪ್ಪೇಶಪ್ಪ -3, ಮಂಜುನಾಥ -8, ತಳವಾರ ರೇವಣ್ಣಪ್ಪ -6 ಹೀಗೆ ಒಟ್ಟು 17 ಕುರಿಗಳು ಹಾಗೂ ಕುರಿಯಲ್ಲಿದ್ದ 1 ನಾಯಿ ಸಿಡಿಲಿಗೆ ಬಲಿಯಾಗಿವೆ.
ಮೇಯಿಸಿಕೊಂಡು ಕುರಿಗಳನ್ನು ವಾಪಸ್ ಮನೆಗೆ ಕರೆತರುವಾಗ ಕೆರೆಯಲ್ಲಿ ಕುರಿ ಹಿಂಡಿನ ಮೇಲೆ ಸಿಡಿಲು ಬಡಿದಿದೆ. ಕಂದಾಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆ. ಕುರಿಗಳ ಮಾಲಿಕರು ಹಲುವಾಗಲು ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವುದಾಗಿ ತಿಳಿಸಿದ್ದಾರೆ. ಸಾವನ್ನಪ್ಪಿದ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ತೆಲಿಗಿ ಗ್ರಾಮದ ಯುವಮುಖಂಡ ಕೆ. ಯೋಗೀಶ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
