Asianet Suvarna News Asianet Suvarna News

RTI ಹೋರಾಟಗಾರನ ಮನೆಯಲ್ಲಿ 1 ಕೋಟಿ ರೂ. ಖೋಟಾ ನೋಟು!

ಬೆಳಗಾವಿಯಲ್ಲಿ ನಕಲಿ ನೋಟು ಮುದ್ರಿಸುವ ಬೃಹತ್ ಜಾಪ ಪತ್ತೆ| ಆರ್‌ಟಿಐ ಹೋರಾಟಗಾರ ಎಂದು ಹೇಳಿಕೊಂಡು ಖೋಟಾ ನೋಟು ಮುದ್ರಣ| ಮನೆಯಲ್ಲೇ ಖೋಟಾ ನೋಟು ತಯಾರಿಸುತ್ತಿದ್ದ ಖದೀಮರು| ರಫೀಕ್ ದೇಸಾಯಿ, ಆಸೀಫ್ ಶೇಖ್ ಅವರನ್ನು ಬಂಧಿಸಿದ ಪೊಲೀಸರು| ದಾಳಿ ವೇಳೆ 1 ಕೋಟಿಗೂ ಅಧಿಕ ಬೆಲೆಯ ಖೋಟಾ ನೋಟು ಪತ್ತೆ| ಪ್ರಕರಣವನ್ನು ಸಿಐಡಿಗೆ ವಹಿಸಲು ಬೆಳಗಾವಿ ಪೊಲೀಸ್ ಆಯುಕ್ತ ರಾಜಪ್ಪ ನಿರ್ಧಾರ

Two Held With Fake Currency Value Rs 1 crore in Belagavi
Author
Bengaluru, First Published Dec 25, 2018, 4:59 PM IST

ಬೆಳಗಾವಿ(ಡಿ.25): ಜನರಿಗೆ ಈತ ಮಾಹಿತಿ ಹಕ್ಕು ಹೋರಾಟಗಾರ ಎಂದೇ ಚಿರಪರಿಚಿತ. ಆದರೆ ಈತನ ಮನೆಯಲ್ಲಿ ಖೊಟಾ ನೋಟುಗಳ ರಾಶಿ ಸಿಕ್ಕಾಗ ಇಡೀ ನಗರ ಬೆಚ್ಚಿ ಬಿದ್ದಿದೆ.

ಹೌದು, ಬೆಳಗಾವಿಯಲ್ಲಿ ಬೃಹತ್ ಖೋಟಾ ನೋಟು ಜಾಲವನ್ನು ಹೆಡೆಮುರಿ ಕಟ್ಟಿರುವ ಪೊಲೀಸರು, ಆರ್‌ಟಿಐ ಕಾರ್ಯಕರ್ತ ಎಂದು ಸೋಗು ಹಾಕಿಕೊಂಡಿದ್ದ ಖದೀಮನೋರ್ವನನ್ನು ಆತನ ಸಹಚರನೊಂದಿಗೆ ಬಂಧಿಸಿದ್ದಾರೆ.

ಇಲ್ಲಿನ ರಫೀಕ್ ದೇಸಾಯಿ ಎಂಬಾತ ಆರ್‌ಟಿಐ ಕಾರ್ಯಕರ್ತ ಎಂದು ಹೇಳಿಕೊಂಡು ತನ್ನ ಮನೆಯಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಫೀಕ್ ಜೊತೆ ಆತನ ಸಹಚರ ಆಸೀಫ್ ಶೇಖ್ ಎಂಬಾತನನ್ನೂ ಬಂಧಿಸಲಾಗಿದೆ.

"

ದಾಳಿ ವೇಳೆ ರಫೀಕ್ ಮನೆಯಲ್ಲಿ 1 ಕೋಟಿ, 81 ಸಾವಿರ ಖೋಟಾ ನೋಡು ಪತ್ತೆಯಾಗಿದ್ದು, 2,000 ಮುಖಬೆಲೆಯ 4969 ಖೋಟಾ ನೋಟುಗಳು ಮತ್ತು 500 ರೂ. ಮುಖಬೆಲೆಯ 195 ನೋಟುಗಳನ್ನು ಜಪ್ತಿ ಮಾಡಲಾಗಿದೆ.

ಇದೇ ವೇಳೆ ಖೊಟಾ ನೋಟುಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದ 2 ದ್ವಿಚಕ್ರ ವಾಹನಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ಆಯುಕ್ತ ರಾಜಪ್ಪ, ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

Follow Us:
Download App:
  • android
  • ios