*  ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ*  ನೀರನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪಾರು*  ನಿರಂತರ ಮಳೆಗೆ ಕುಸಿದು ಬಿದ್ದ ಮನೆ 

ಚಿಕ್ಕಮಗಳೂರು(ನ.20): ಸ್ಕೂಟಿಯಲ್ಲಿ ಹಳ್ಳಿಗೆ ಹೋಗುವಾಗ ವ್ಯಕ್ತಿಯೊಬ್ಬರು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ತರೀಕೆರೆ(Tarikere) ತಾಲೂಕಿನ ಹುಲಿತಿಮ್ಮಾಪುರ ಗ್ರಾಮದ ಬಳಿ ಇಂದು(ಶನಿವಾರ) ನಡೆದಿದೆ. ಪೊನ್ನಸ್ವಾಮಿ(45) ಎಂಬುವರೇ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ ಎಂದು ತಿಳಿದು ಬಂದಿದೆ. 

ಹುಲಿತಿಮ್ಮಾಪುರದ ಹಳ್ಳದ ಕಿರು ಸೇತುವೆ(Bridge) ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ(Rain) ಕಿರುಸೇತುವೆಯ ಮೇಲೆ ಹರಿಯುತ್ತಿದ್ದ ಭಾರೀ ಪ್ರಮಾಣದಲ್ಲಿ ನೀರು(Water) ಹರಿಯುತ್ತಿದೆ.

ಪೊನ್ನಸ್ವಾಮಿ ಅವರು ಲಿಂಗದಹಳ್ಳಿಯಿಂದ ಸಿದ್ದರಹಳ್ಳಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದರು. ಕೊಚ್ಚಿ ಹೋದ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಮೃತದೇಹ(Deadbody) ಪತ್ತೆಯಾಗಿದೆ. 

Andhra Pradesh Rains: ಅಣೆಕಟ್ಟು ಒಡೆದು ಕೊಚ್ಚಿ ಹೋಯ್ತು 50 ಪ್ರಯಾಣಿಕರಿದ್ದ ಬಸ್!

ಅಗ್ನಿಶಾಮಕ ದಳ(Fire Department) ಹಾಗೂ ಪೊಲೀಸರ ಶೋಧ ಕಾರ್ಯಕ್ಕೆ ಸ್ಥಳೀಯರೂ ಕೂಡ ಸಾಥ್ ಕೊಟ್ಟಿದ್ದರು. ಈ ಸಂಬಂಧ ಲಿಂಗದಹಳ್ಳಿ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ. 
ನೀರಿನಲ್ಲಿ ಕೊಚ್ಚಿಹೋದ ಮಹಿಳೆ ಶವ ಪತ್ತೆ

ದೊಡ್ಡಹಳ್ಳದ ಸೇತುವೆ ಸೇತುವೆ ಕುಸಿದು ನೀರುಪಾಲಾಗಿದ್ದ ಮಹಿಳೆ

ಕೋಲಾರ(Kolar) ಜಿಲ್ಲೆಯ ಶ್ರೀನಿವಾಸಪುರ(Srinivaspur) ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ರಾಯಲ್ಪಾಡು ಹೋಬಳಿಯ ಬಹುತೇಕ ಕೆರೆಗಳು ಭೊರ್ಗೆರೆಯುತ್ತ ಅಬ್ಬರಿಸುತ್ತಿವೆ ಇದರ ಪರಿಣಾಮ ಹಳ್ಳ ಕೊಳ್ಳಗಳು ತುಂಬಿಹರಿಯುತ್ತಿವೆ. ಗುರುವಾರ ತಡ ಸಂಜೆ ನಡೆದ ಅವಘಡದಲ್ಲಿ ಸೇತುವೆಯೊಂದರ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆ ಹಾಗೂ ಯುವಕ ಸೇತುವೆ ಕುಸಿದು ವಾಹನ ಚಲಾಯಿಸುತ್ತಿದ್ದ ಯುವಕ ಅದೃಷ್ಟವಶಾತ್‌ ಪಾರಾಗಿದ್ದು, ಮಹಿಳೆ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಶುಕ್ರವಾರ ಸುಮಾರು 100 ಮೀಟರ್‌ ದೂರದಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.

ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆಯನ್ನು ಎ.ಕೊತ್ತೂರು ಗ್ರಾಮದ ಅಮರಾವತಮ್ಮ (65) ಗುರತಿಸಲಾಗಿದೆ. ಈಕೆ ಜಿಪಂ ಮಾಜಿ ಸದಸ್ಯ ದಿವಂಗತ ಕೆ.ಎಸ್‌.ರೆಡ್ದಪ್ಪನವರ ಪತ್ನಿ. ಗುರುವಾರ ಏಕಾದಶಿ ದೀಪಾವಳಿ ಇದ್ದ ಹಿನ್ನೆಲೆಯಲ್ಲಿ ಅಮರಾವತಮ್ಮ ತಾನು ವಾಸವಿರುವ ತೋಟದ ಮನೆಯಿಂದ ಗ್ರಾಮವಾದ ಎ.ಕೊತ್ತೂರು ಗ್ರಾಮದಲ್ಲಿನ ಸಂ​ಕರ ಮನೆಗೆ ಹಬ್ಬ ಆಚರಿಸಲು ಹೋಗಿ ತೋಟದ ಮನೆಗೆ ಹಿಂತಿರುಗಲು ಪರಿಚಯಸ್ಥ ಯುವಕನ ದ್ವಿಚಕ್ರವಾಹನದಲ್ಲಿ ಬರುತ್ತಿರುವಾಗ ತೋಟದ ಮನೆ ಬಳಿಯ ದೊಡ್ಡಹಳ್ಳದ ಸೇತುವೆ ದಾಟುವ ಸಂದರ್ಭದಲ್ಲಿ ಸೇತುವೆ ಕುಸಿದು ಬಿದ್ದಿದೆ. ಆಗ ಸೇತುವೆ ಮೇಲೆ ಬೈಕ್‌ನಲ್ಲಿ¨ದ್ದಿವರಿಬ್ಬರೂ ಬೈಕ್‌ ಸಮೇತ ಹಳ್ಳದಲ್ಲಿ ಬಿದ್ದಿದ್ದಾರೆ.

ಕತ್ತಲಲ್ಲಿ ಯುವಕ ಈಜಿಕೊಂಡು(Swimming) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಮಹಿಳೆ(Women) ಹಾಗೂ ಬೈಕ್‌(Bike) ನೀರಿನಲ್ಲಿ ಕೊಚ್ಚಿಹೋಗಿದ್ದು ಕತ್ತಲು ಹಾಗು ಮಳೆಯಿಂದಾಗಿ ರಾತ್ರಿ ಹುಡುಕಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ರಾಯಲ್ಪಾಡು ಪೊಲೀಸರು ಹಾಗು, ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿ ಮಹಿಳೆಯ ಶವವನ್ನು ತೋಟದ ಮನೆಯಿಂದ ಸುಮಾರು 100 ಮಿ.ದೂರದಲ್ಲಿ ಪತ್ತೆ ಮಾಡಿದ್ದಾರೆ.

Karnataka Rain ಮತ್ತೆ ಮೂರು ದಿನ ಭಾರೀ ಮಳೆ : ಕಂಗಾಲಾಯ್ತು ಕರುನಾಡು

ನೀರನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪಾರು

ಕೋಲಾರ: ಸುರಿಯುತ್ತಿರುವ ಮಹಾ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರು ಅದೃಷ್ಟವಶಾತ್‌ ಅಪಾಯದಿಂದ ಪಾರಾದ ಘಟನೆ ಶ್ರೀನಿವಾಸಪುರ ತಾಲೂಕಿನ ಎ.ಕೊತ್ತೂರು ಬಳಿ ಗುರುವಾರ ನಡೆದಿದೆ.
ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸ್ವಗ್ರಾಮ ಅಡ್ಡಗಲ್‌ ಗ್ರಾಮದ ಬಳಿ ಆಂಧ್ರಪ್ರದೇಶಕ್ಕೆ(Andhra Pradesh) ಹರಿಯುವ ಬಜ್ಜಪಲ್ಲಿ ನೀರಿನ ಕಾಲುವೆ ಇದ್ದು ಮಳೆಯಿಂದ ನೀರು ಜೋರಾಗಿ ಹರಿಯುತ್ತಿದ್ದಾಗ ರೆಡ್ಡಪ್ಪ ಎಂಬುವರ ಪತ್ನಿ ಅಮರಾವತಮ್ಮ(65) ಹಾಗೂ ಬಾಬುರೆಡ್ಡಿ ಎಂಬುವವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್‌ ಇವರಿಬ್ಬರೂ ಅಲ್ಲಿದ್ದ ಮರವೊಂದನ್ನು ಹಿಡಿದುಕೊಂಡು ರಕ್ಷಣೆ ಪಡೆದುದರಿಂದ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಮನೆ ಕುಸಿತ:

ಕೋಲಾರ ಹೊರವಲಯದ ಗದ್ದೇಕಣ್ಣೂರು ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು ಗಂಡ ಮತ್ತು ಹೆಂಡತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೋರು ಮಳೆಗೆ ಮನೆ ಕುಸಿದಿದ್ದು ಲಕ್ಷಾಂತರ ರೂ ನಷ್ಟಉಂಟಾಗಿದೆ, ಮನೆಯಲ್ಲಿ ನಾಗೇಶ್‌ ಅವರ ಪತ್ನಿ ಹಾಗು ಅವರ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಇವರೆಲ್ಲರು ಮನೆ ಇಲ್ಲದೆ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಕೋಲಾರದ ಕೀಲುಕೋಟೆ ಬಳಿಯ ರೈಲ್ವೆ ಅಂಡರ್‌ ಪಾಸ್‌ನಲ್ಲಿ ನಿಂತಿದ್ದ ನೀರಿನಲ್ಲಿ ಕಾರೊಂದು ಸಿಲುಕಿಕೊಂಡಿದ್ದು ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.