Asianet Suvarna News Asianet Suvarna News

ಹಿಂದುತ್ವಕ್ಕಾಗಿ ರಾಜಕೀಯಕ್ಕೆ ಬಂದ ನನ್ನ ಹೋರಾಟಕ್ಕೆ ಸೋಲಿಲ್ಲ: ಸಿ.ಟಿ.ರವಿ

ಹಿಂದುತ್ವದ ಸಿದ್ದಾಂತ, ತತ್ತ್ವಕ್ಕಾಗಿ ರಾಜಕೀಯಕ್ಕೆ ಬಂದಿರುವ ನನಗೆ ಚುನಾವಣೆಯಲ್ಲಿ ಸೋಲಾಗಿರಬಹುದು, ಆದರೆ, ನನ್ನ ಹೋರಾಟಕ್ಕೆ ಸೋಲೇ ಇಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

I did not lose my fight to join politics for Hindutva Says CT Ravi gvd
Author
First Published Sep 12, 2023, 1:00 AM IST

ಚಿಕ್ಕಮಗಳೂರು (ಸೆ.12): ಹಿಂದುತ್ವದ ಸಿದ್ದಾಂತ, ತತ್ತ್ವಕ್ಕಾಗಿ ರಾಜಕೀಯಕ್ಕೆ ಬಂದಿರುವ ನನಗೆ ಚುನಾವಣೆಯಲ್ಲಿ ಸೋಲಾಗಿರಬಹುದು, ಆದರೆ, ನನ್ನ ಹೋರಾಟಕ್ಕೆ ಸೋಲೇ ಇಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಹಿರೇಮಗಳೂರಿನಲ್ಲಿ ನಡೆದ ನಾಲ್ಕನೇ ವಾರ್ಡಿನ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿ, ದತ್ತಪೀಠದ ಮುಕ್ತಿಗಾಗಿ ನಿರಂತರವಾದ ಹೋರಾಟದಲ್ಲಿ ಹಿಂದುಗಳಿಗೆ ನ್ಯಾಯ ಕೊಡಿಸಿದೆ. ಜನಪರವಾಗಿ ನಡೆಸಿದ ಹೋರಾಟಗಳಲ್ಲಿ 64ಕ್ಕೂ ಹೆಚ್ಚು ಪೊಲೀಸ್ ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿದ್ದವು. ಆದರೆ, ಚುನಾವಣೆಯಲ್ಲಿ ಅಪಪ್ರಚಾರಗಳಿಗೆ ಮಣೆ ಹಾಕಿದ ಜನರು ನನ್ನನ್ನು ಸೋಲಿಸಿದರು ಎಂದರು.

ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಸ್ತೆಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯ, ಕಾಲೇಜುಗಳ ಉನ್ನತೀಕರಣ, ದೇವಾಲಯಗಳ ಜೀರ್ಣೋದ್ಧಾರ, ಯಾತ್ರಿ ನಿವಾಸಗಳ ನಿರ್ಮಾಣ, ಕ್ರೀಡಾಂಗಣ ಉನ್ನತೀಕರಣ, ಕ್ಷೇತ್ರದಾದ್ಯಂತ ಪರಿಶಿಷ್ಟ ಜಾತಿ, ವರ್ಗ ಸೇರಿದಂತೆ ಎಲ್ಲಾ ಜಾತಿ ಜನಾಂಗದವರಿಗೆ ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 5300 ಕೋಟಿ ರು. ಗಳನ್ನು ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ನಾನು ಲೋಕ​ಸಭಾ ಚುನಾ​ವಣೆ ಟಿಕೆಟ್‌ ಆಕಾಂಕ್ಷಿ ಅಲ್ಲ: ಎಂಟಿಬಿ ನಾಗರಾಜ್

ನನ್ನ ಅವಧಿಯಲ್ಲಿ ಒಂದೇ ಒಂದು ಕೋಮುಗಭೆಗಳು ಈ ಕ್ಷೇತ್ರದಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟಿಲ್ಲ. ಯಾರ ವಿರುದ್ಧವೂ ದ್ವೇಷ ಸಾಧಿಸಲಿಲ್ಲ. ಕಾನೂನು ಮತ್ತು ಜಿಲ್ಲಾಡಳಿತದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಒಬ್ಬ ಮುಖ್ಯಮಂತ್ರಿ ತನ್ನ ಕ್ಷೇತ್ರದಲ್ಲಿ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ, ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳು ಚರ್ಚೆಗೆ ಬರುವ ಬದಲು ನನ್ನ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರಗಳನ್ನು ನಡೆಸುವ ಮೂಲಕ ಸೋಲಿಸಿದರು ಎಂದು ಹೇಳಿದರು.

ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಸಿದ್ದನಗೌಡ ಹಾಗೂ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ: ಯಾಕೆ ಗೊತ್ತಾ?

ಶಾಸಕರಾಗಿ ಆಯ್ಕೆಯಾದ ತಮ್ಮಯ್ಯಗೆ ಮೂರೇ ದಿನದಲ್ಲಿ ಪತ್ರ ಬರೆದು ಅಭಿನಂದನೆಗಳನ್ನು ತಿಳಿಸಿದ್ದೇನೆ. ಜೊತೆಗೆ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿ ಪ್ರಗತಿ ಸಾಧಿಸಲು ಸಲಹೆ ಮಾಡಿದ್ದೇನೆ ಎಂದ ಅವರು, ನಾನು ಸೋತಿದ್ದರೂ ಎಲ್ಲಾ ಕಡೆಗಳಲ್ಲಿ ಕಾರ್ಯಕರ್ತರು ನಿರೀಕ್ಷೆಗೂ ಮೀರಿದ ಆಸಕ್ತಿ ತೋರಿಸುತ್ತಿರುವುದು ಹೋರಾಟಕ್ಕೆ ಹೊಸ ಸ್ಫೂರ್ತಿ ನೀಡಿದೆ. ನಿಮ್ಮ ಜೊತೆ ನಾನಿದ್ದು ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಜಾನಯ್ಯ, ರೇವನಾಥ್, ಎಚ್.ಎಂ.ನಾರಾಯಣ್, ಬಸವರಾಜ್, ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ನಗರ ಘಟಕ ಅಧ್ಯಕ್ಷ ಮಧುಕುಮಾರ ರಾಜಅರಸ್ ಮಾತನಾಡಿದರು. ಮುಖಂಡ ಕೋಟೆ ರಂಗನಾಥ್, ಜಿಲ್ಲಾ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸೀತಾರಾಮ ಭರಣ್ಯ ಉಪಸ್ಥಿತರಿದ್ದರು.

Follow Us:
Download App:
  • android
  • ios