Mandya: ಐಸ್ ಕ್ರೀಮ್ ತಿಂದು ಒಂದೂವರೆ ವರ್ಷದ ಅವಳಿ ಕಂದಮ್ಮಗಳ ಸಾವು?
ಮಂಡ್ಯದಲ್ಲಿ ಒಂದೂವರೆ ವರ್ಷದ ಅವಳಿ ಜವಳಿ ಕಂದಮ್ಮಗಳು ಅನುಮಾನಸ್ಪದವಾಗಿ ಸಾವು ಕಂಡಿದ್ದು ವರದಿಯಾಗಿದೆ. ಐಸ್ ಕ್ರೀಮ್ ತಿಂದ ಬಳಿಕ ಈ ಮಕ್ಕಳು ಅಸ್ವಸ್ಥರಾಗಿದ್ದರು ಎಂದು ಹೇಳಲಾಗಿದೆ.
ಮಂಡ್ಯ (ಏ.18): ರಸ್ತೆ ಬದಿಯಲ್ಲಿ ಇರುವ ತಳ್ಳುವ ಗಾಡಿಯಲ್ಲಿ ಐಸ್‌ಕ್ರೀಮ್ ತಿಂದ ಬಳಿಕ ಅಸ್ವಸ್ಥರಾಗಿದ್ದ ಒಂದೂವರೆ ವರ್ಷದ ಅವಳಿ ಜವಳಿ ಕಂದಮ್ಮಗಳು ಸಾವು ಕಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಜವಳಿ ಕಂದಮ್ಮಗಳು ಸಾವು ಕಂಡಿವೆ. ಮಕ್ಕಳ ಹೆಸರನ್ನು ತ್ರಿಶೂಲ್ ಹಾಗೂ ತ್ರಿಶಾ ಎಂದು ತಿಳಿಸಲಾಗಿದೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತಾಯಿ ಪೂಜಾ ಇಬ್ಬರು ಮಕ್ಕಳಿಗೆ ಐಸ್ ಕ್ರೀಮ್ ತಿನ್ನಿಸಿದ್ದರು. ಅದಾದ ಬಳಿಕ ಇಬ್ಬರೂ ಮಕ್ಕಳು ಹಠಾತ್ ಆಗಿ ಅಸ್ವಸ್ಥರಾಗಿದ್ದರು ಎಂದು ತಿಳಿಸಲಾಗಿದೆ. ತಳ್ಳುವ ಗಾಡಿಯಲ್ಲಿ ಪೂಜಾ ಐಸ್‌ಕ್ರೀಮ್ ತಂದಿದ್ದರು ಎನ್ನಲಾಗಿದೆ. ಇನ್ನು ಐಸ್‌ಕ್ರೀಮ್ ತಿಂದೇ ಅವಳಿ ಜವಳಿ ಮಕ್ಕಳು ಸಾವು ಕಂಡಿದ್ದಾರೆಯೇ ಎನ್ನುವ ಬಗ್ಗೆಯೂ ಅನುಮಾನಗಳಿವೆ. ಏಕೆಂದರೆ, ಇದೇ ಗ್ರಾಮದ ಬೇರೆ ಮಕ್ಕಳು ಕೂಡ ಐಸ್ ಕ್ರೀಂ ಖರೀದಿ ಮಾಡಿ ತಿಂದಿದ್ದರು. ಆದರೆ, ಬೇರೆ ಯಾವ ಮಕ್ಕಳಿಗೂ ಯಾವುದೇ ರಿತಿಯ ಸಮಸ್ಯೆ ಆಗಿಲ್ಲ ಎನ್ನಲಾಗಿದೆ.
ಹುಟ್ಟುಹಬ್ಬ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ತಿಂದ 10 ವರ್ಷ ಬಾಲಕಿ ನಿಧನ, ಕುಟುಂಬಸ್ಥರು ಅಸ್ವಸ್ಥ!
ಹಾಗಾಗಿ ಅವಳಿ ಜವಳಿ ಮಕ್ಕಳ ಸಾವಿಗೆ ಕಾರಣವೇನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ಬಳಿಕವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ಕಳುಹಿಸಲಾಗಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮದುವೆಗೂ ಮುನ್ನ ದೇಶದ ಎರಡು ಪ್ರಮುಖ ದೇವಸ್ಥಾನಕ್ಕೆ 5 ಕೋಟಿ ದಾನ ನೀಡಿದ ಅನಂತ್ ಅಂಬಾನಿ!
ಇಬ್ಬರೂ ಮಕ್ಕಳ ಹಠಾತ್ ಸಾವಿನಿಂದ ಆಘಾತಕ್ಕೆ ಈಡಾಗಿರುವ ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ತಳ್ಳುವ ಗಾಡಿಯಲ್ಲಿ ಐಸ್ ಕ್ರೀಮ್ ಮಾರುತ್ತಾ ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.