ಕರ್ನಾಟಕದಲ್ಲಿ ಇನ್ಮುಂದೆ ಕ್ಯುಆರ್‌ ಕೋಡ್‌ ಡಿಎಲ್‌, ಆರ್‌ಸಿ?

ದೇಶದಲ್ಲೆಡೆ ಡಿಎಲ್ ಮತ್ತು ಆರ್‌ಸಿಗಳ ಸ್ವರೂಪ ಒಂದೇ ರೀತಿಯಲ್ಲಿರಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್ ಟಿಎಚ್) ರೂಪಿಸಿರುವ ನಿಯಮ ಅನುಷ್ಟಾನಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.  
 

transport department is preparing to distribute QR Code DL, RC smart card in karnataka grg

ಬೆಂಗಳೂರು(ಆ.07):  ರಾಜ್ಯದಲ್ಲಿ ವಾಹನ ಚಾಲಕರಿಗೆ ನೀಡಲಾಗುವ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ವಾಹನ ನೋಂದಣಿ ಪ್ರಮಾಣಪತ್ರದ (ಆರ್‌ಸಿ) ಸ್ವರೂಪ ಬದಲಿಸಲಾಗುತ್ತಿದ್ದು, ಮೈಕ್ರೋ ಚಿಪ್ ಜತೆಗೆ ಕ್ಯೂಆರ್ ಕೋಡ್ ಅಳವಡಿಸಲು ಡಿಎಲ್‌, ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ದೇಶದಲ್ಲೆಡೆ ಡಿಎಲ್ ಮತ್ತು ಆರ್‌ಸಿಗಳ ಸ್ವರೂಪ ಒಂದೇ ರೀತಿಯಲ್ಲಿರಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್ ಟಿಎಚ್) ರೂಪಿಸಿರುವ ನಿಯಮ ಅನುಷ್ಟಾನಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಎಂ.ಆರ್‌ಟಿಎಚ್ ನೀಡಿರುವ ಮಾರ್ಗ ಸೂಚಿಯಂತೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮತ್ತು ರಿಜಿಸ್ಟರೆಷನ್ ಸರ್ಟಿಫಿಕೆಟ್ (ಆರ್‌ಸಿ) ಮುದ್ರಿಸಿ, ಎತುಸುವ ಖಾಸಗಿ ಸಂಸ್ಥೆಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾ ಗಿದ್ದು, ಈ ತಿಂಗಳ ಅಂತ್ಯದೊಳಗೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್‌ನಿಂದ ಹೊಸ ಬಗೆಯ ಡಿಎಲ್ ಮತ್ತು ಆರ್‌ಸಿ ವಿತರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಆಧಾರ್ ಕಾರ್ಡ್‌ನಿಂದ ಚಾಲನಾ ಪರವಾನಗಿವರೆಗೆ; ಜೂ.1ರಿಂದ ಈ ಹೊಸ ನಿಯಮಗಳು ಜಾರಿಗೆ

ಹೊಸ ಡಿಎಲ್ ನಲ್ಲಿ ಹಲವು ವಿವರಗಳು: 

ಹೊಸಬಗೆಯ ಡಿಎಲ್‌ನಲ್ಲಿ ಹಲವು ವಿವರಗಳನ್ನು ಅಳವಡಿಸಲಾಗುತ್ತಿದೆ. ಈವರೆಗೆ ಡಿಎಲ್‌ನಲ್ಲಿ ಚಾಲಕರ ಹೆಸರು, ಜನ್ಮ ದಿನಾಂಕ, ವಿಳಾಸ, ರಕ್ತದ ಗುಂಪು ವಿವರಗಳು ಇರುತ್ತಿದ್ದವು. ಹೊಸ
ಡಿಎಲ್‌ನಲ್ಲಿ ಆ ವಿವರಗಳ ಜತೆಗೆ ಡಿಎಲ್ ಹೊಂದಿರುವ ವರು ಅಂಗಾಂಗ ದಾನಿಯಾಗಿದ್ದಾರೆಯೇ ಎಂಬುದನ್ನು ಉಲ್ಲೇಖಿಸಲಾಗುತ್ತದೆ. ಜತೆಗೆ ಡಿಎಲ್ ಹೊಂದಿರುವವರ ಮೊಬೈಲ್ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣದಲ್ಲಿ ಕರೆ ಮಾಡಬಹುದಾದ ಮೊಬೈಲ್ ಸಂಖ್ಯೆಗಳನ್ನೂ ನಮೂದಿಸಲಾಗುತ್ತದೆ.

ಸದ್ಯ ಇರುವ ಡಿಎಲ್ ಮತ್ತು ಆರ್‌ಸಿಯಲ್ಲಿ ಒಂದು ಬದಿಯಲ್ಲಿ ಮಾತ್ರ ಎಲ್ಲ ವಿವರಗಳಿದ್ದು, ಇನ್ನೊಂದು ಬದಿ ಯಲ್ಲಿ ಮೈಕ್ರೋಚಿಪ್ ಅಳವಡಿಸಲಾಗಿದೆ. ಹೊಸ ಡಿಎಲ್ ಮತ್ತು ಆರ್‌ಸಿಯ ಎರಡೂ ಬದಿಯಲ್ಲಿ ವಾಹನ ಮತ್ತು ವಾಹನ ಮಾಲೀಕರ ಅಥವಾ ಚಾಲಕರ ವಿವರ ನಮೂದಿಸ ಲಾಗುತ್ತದೆ. ಡಿಎಲ್ ಮತ್ತು ರ್ಆಸಿಗಳು ಲೇಸರ್ ಪ್ರಿಂಟಿ  ಂಗ್‌ನಲ್ಲಿ ಮುದ್ರಿಸಲಾಗುತ್ತದೆ. ಇನ್ನು ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿದರೆ ಡಿಎಲ್ ಮತ್ತು ಆರ್‌ಸಿಗೆ ಸಂಬಂಧಿ ಸಿದ ಎಲ್ಲ ವಿವರಗಳು ತಿಳಿಯುವಂತೆ ಮಾಡಲಾಗುತ್ತದೆ.

Latest Videos
Follow Us:
Download App:
  • android
  • ios