Asianet Suvarna News Asianet Suvarna News

ಕಾಂಗ್ರೆಸ್ ನಾಯಕರು ಹಸಿದ ತೋಳ, ರಣಹದ್ದುಗಳಂತಾಗಿದ್ದಾರೆ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ವಾಗ್ದಾಳಿ

ಕಾಂಗ್ರೆಸ್ ನಲ್ಲಿರುವ ನಾಯಕರು, ಸರ್ಕಾರ ಹಸಿದ ತೋಳಗಳಂ .ಹಸಿದ ತೋಳಕ್ಕೆ ಸಿಕ್ಕಿದ್ದನ್ನ ಹರಿದು ತಿನ್ನೋದಷ್ಟೆ ಕೆಲಸ. ಆ ಕೆಲಸ ಕಾಂಗ್ರೆಸ್‌ನವ್ರು ಮಾಡ್ತಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸರ್ಕಾರದ ವಿರುದ್ಧ ಕಿಡಿ ಕಾರಿದರು.

Transfer fraud issue former DCM Govind karjol outraged against congress government at bagalkote rav
Author
First Published Oct 12, 2023, 7:49 PM IST

ಬಾಗಲಕೋಟೆ (ಅ.12): ಕಾಂಗ್ರೆಸ್ ನಲ್ಲಿರುವ ನಾಯಕರು, ಸರ್ಕಾರ ಹಸಿದ ತೋಳಗಳಂ .ಹಸಿದ ತೋಳಕ್ಕೆ ಸಿಕ್ಕಿದ್ದನ್ನ ಹರಿದು ತಿನ್ನೋದಷ್ಟೆ ಕೆಲಸ. ಆ ಕೆಲಸ ಕಾಂಗ್ರೆಸ್‌ನವ್ರು ಮಾಡ್ತಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ವರ್ಗಾವಣೆ ಆರೋಪ  ಬಳಿಕ ಇದೀಗ ಶಾಸಕರ ಪಿಎಗಳ ಸರದಿ ವಿಚಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವ್ಯಕ್ತಿಗತವಾಗಿ ಯಾರ ಬಗ್ಗೆನೂ ನಾನು ಮಾತಾಡಲ್ಲ. ಕಾಂಗ್ರೆಸ್‌ ಸರ್ಕಾರದ ವ್ಯವಸ್ಥೆ ಬಗ್ಗೆ ಹೇಳ್ತಿದ್ದೇನೆ. ಇವರು(ಕಾಂಗ್ರೆಸ್ ನಾಯಕರು) ರಣ ಹದ್ದುಗಳಾಗಿದ್ದಾರೆ. ಸತ್ತು ಹೋದ ಪ್ರಾಣಿಗಳನ್ನ ರಣಹದ್ದು ಹರಿದು ತಿನ್ನೋದನ್ನ ನೋಡಿದ್ದಿರಾ ? ಅದೇ ತರಹ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಮಂತ್ರಿಗಳು, ಶಾಸಕರು, ಮುಖಂಡರು, ಕಾರ್ಯಕರ್ತರು, ಸಿಬ್ಬಂದಿ ವರ್ಗ ಕೂಡ ಸರ್ಕಾರವೆಂಬ ಸತ್ತ ಪ್ರಾಣಿಯನ್ನ ಹರಿದು ತಿನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ರಣಹದ್ದು ತೋಳಕ್ಕೆ ಹೋಳಿಸಿ ಕಾರಜೋಳ ವಾಗ್ದಾಳಿ ನಡೆಸಿದರು.

ಖರ್ಗೆ ಮುಳುಗುತ್ತಿರುವ ಹಡಗಿನ ಪ್ರೆಸಿಡೆಂಟ್: ಗೋವಿಂದ ಕಾರಜೋಳ

5 ತಿಂಗಳು ಪೂರ್ಣ ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ರು. ನಾನು ವಿಧಾನಸೌದ ಕಡೆ ಹೋಗಲ್ಲ, ಯಾವ ಸರ್ಕಾರಿ ಕಚೇರಿ ಕಡೆಯೂ ಹೋಗಿಲ್ಲ. ನೀವೇ  ತೋರಿಸಿದ್ದನ್ನ ನೋಡಿದ್ದೇನೆ. ನಿತ್ಯ ಟ್ರಾನ್ಸಪರ್ ವರ್ಗಾವಣೆ ದಂಧೆ ನಡೆಯುತ್ತಲೇ ಇರುತ್ತೆ ಎಂದರು.

Follow Us:
Download App:
  • android
  • ios