ಜನತಾ ಕರ್ಫ್ಯೂ ಇದ್ರೂ ಟ್ರಾಫಿಕ್ ಜಾಮ್: ಎಚ್ಚೆತ್ತುಕೊಳ್ಳದ ಜನ..!
ಬಿಗಿ ಕ್ರಮ ಜಾರಿಯಾಗಿ ನಿನ್ನೆಗೆ ಒಂದು ವಾರ| ತರಕಾರಿ ಮಾರುಕಟ್ಟೆ, ಸಂತೆ ಎತ್ತಂಗಡಿ ಮಾಡಿರುವ ಹಿನ್ನೆಲೆಯಲ್ಲಿ ತಗ್ಗಿದ ಜನಜಂಗುಳಿ| ಹೋಟೆಲ್, ಫ್ಯಾನ್ಸಿ ಅಂಗಡಿ, ಜ್ಯುವೆಲ್ಲರಿ, ಬಟ್ಟೆ ಅಂಗಡಿಗಳಿಗೆ ದಂಡ ಹಾಕಿ, ಸೀಜ್| ಇನ್ನೂ ಜನತಾ ಕರ್ಫ್ಯೂ ನಿಯಮ ಸ್ವಯಂಪ್ರೇರಿತರಾಗಿ ಅಳವಡಿಸಿಕೊಳ್ಳದ ಜನತೆ|
ಬೆಂಗಳೂರು(ಮೇ.05): ಕೊರೋನಾ ನಿಯತ್ರಿಸಲು ಸರ್ಕಾರ ಜಾರಿಗೆ ತಂದಿರುವ ಜನತಾ ಕರ್ಫ್ಯೂ 7ನೇ ದಿನ ಪೂರೈಸಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ತರಕಾರಿ ಮಾರುಕಟ್ಟೆ, ಸಂತೆ ಎತ್ತಂಗಡಿ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿ ಜನಜಂಗುಳಿ ತಗ್ಗಿದೆ. ಇನ್ನು ಮಧ್ಯಾಹ್ನದವರೆಗೆ ಜನ, ವಾಹನ ಸಂಚಾರ ವಿಪರೀತ ಎನ್ನುವಷ್ಟು ಇದ್ದು, ಟ್ರಾಫಿಕ್ ಜಾಮ್ ಆಗುವಂತಾಗುತ್ತಿದೆ.
ಕೊಪ್ಪಳ, ಹಾವೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಅಗತ್ಯ ವಸ್ತುಗಳಲ್ಲದ ಅಂಗಡಿಗಳೂ ಆರಂಭಗೊಂಡು ವ್ಯಾಪಾರ ನಡೆಸುತ್ತಿದ್ದು, ಜನತಾ ಕರ್ಫ್ಯೂವನ್ನೇ ಅಣಕಿಸುವಂತಿತ್ತು. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹಲವಾರು ಹೋಟೆಲ್, ಫ್ಯಾನ್ಸಿ ಅಂಗಡಿ, ಜ್ಯುವೆಲ್ಲರಿ, ಬಟ್ಟೆ ಅಂಗಡಿಗಳಿಗೆ ದಂಡ ಹಾಕಿ, ಸೀಜ್ ಮಾಡಲಾಗಿದೆ.
"
ಹುಬ್ಬಳ್ಳಿ: ಐಸಿಯುನಲ್ಲಿ ದುರಂತ, 5 ಕೊರೋನಾ ರೋಗಿಗಳ ಸಾವು
ಕೊಪ್ಪಳ ಸೇರಿದಂತೆ ಕೆಲವು ಕಡೆ ಮದ್ಯದ ಅಂಗಡಿಗಳು ಹಿಂಬಾಗಿಲ ಮೂಲಕ ವ್ಯಾಪಾರ ವಹಿವಾಟು ನಡೆಸಿದ್ದರೆ, ಕೆಲವರು ಅಂಗಡಿಯ ಶೆಟರ್ ಮುಚ್ಚಿ ಒಳಗಡೆ ವ್ಯಾಪಾರ ಮಾಡುತ್ತಿರುವುದು ಕಂಡುಬಂದಿದೆ. ತರಕಾರಿ ಮಾರುಕಟ್ಟೆಯಲ್ಲಿ ಜನದಟ್ಟಣೆಯಾಗುತ್ತಿರುವುದನ್ನು ತಡೆಯಲು ಸರ್ಕಾರ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದೆ. ಆದ್ದರಿಂದ ಎಲ್ಲ ಓಣಿಗಳಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ತರಕಾರಿ ಇಟ್ಟುಕೊಂಡು ವ್ಯಾಪಾರಿಗಳು ಸಂಚರಿಸುತ್ತಿದ್ದಾರೆ. ಆದರೆ, ಈ ವೇಳೆ ಅಕ್ಕಪಕ್ಕದ ಮನೆಯವರು ಮುತ್ತಿಗೆ ಹಾಕಿ ಖರೀದಿ ಮಾಡುತ್ತಿದ್ದಾರೆ. ಜನರು ಇನ್ನೂ ಜನತಾ ಕರ್ಫ್ಯೂ ನಿಯಮಗಳನ್ನು ಸ್ವಯಂಪ್ರೇರಿತರಾಗಿ ಅಳವಡಿಸಿಕೊಳ್ಳುತ್ತಿಲ್ಲ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona